ಕಾವ್ಯ ವಿಮರ್ಶೆಗೆ ದಕ್ಕುವುದಿಲ್ಲ : ವಿಜಯ ವಾಮನ್
ಸಾಗರ: ಕಾವ್ಯ ಸಂದರ್ಶನ ಮತ್ತು ಕವಿಗೋಷ್ಠಿಗೆ ವಿಜಯವಾಮನ ಚಾಲನೆ ನೀಡಿ ಮಾತನಾಡಿದರು.
Team Udayavani, Feb 2, 2021, 3:14 PM IST
ಸಾಗರ: ಕಾವ್ಯಗಳನ್ನು ಇದಮಿತ್ಥಂ ಎಂಬ ವಿಮರ್ಶೆಯ ನೆಲೆಯಲ್ಲಿ ಗ್ರಹಿಸುವುದು ಸುಲಭವಲ್ಲ. ಕಾವ್ಯ ವಿಮರ್ಶೆಗೆ ದಕ್ಕುವುದಿಲ್ಲ ಎಂದು ನಿವೃತ್ತ ಪ್ರಾಚಾರ್ಯ, ರಂಗಕರ್ಮಿ ವಿಜಯವಾಮನ ಹೇಳಿದರು.
ತಾಲೂಕಿನ ಭೀಮನಕೋಣೆಯ ವನಿತಾ ಸಭಾಭವನದಲ್ಲಿ ಭಾನುವಾರ ಕೇಡಲಸರದ ಸಂಸ್ಕೃತಿ ಸಮಾಜ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಾವ್ಯ ಸಂದರ್ಶನ ಮತ್ತು ಕವಿಗೋಷ್ಠಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಾವ್ಯಕ್ಕೆ ಒಂದು ವಿಮರ್ಶೆ ಎಂದು ಇರುವುದಿಲ್ಲ. ಕಾವ್ಯಕ್ಕೆ ಒಂದೇ ಅರ್ಥ ಹಚ್ಚುವುದು ಸಹ ಸರಿಯಲ್ಲ. ಪ್ರತಿಯೊಬ್ಬ ಓದುಗನಲ್ಲೂ ಒಂದೊಂದು ಅರ್ಥಶಿಲ್ಪವನ್ನು ಕಾವ್ಯ ಕಟ್ಟಿಕೊಳ್ಳುತ್ತದೆ. ಜಗತ್ತಿನ ಶ್ರೇಷ್ಠ ಕಾವ್ಯಗಳಲ್ಲಿ ಅರ್ಥ ಸಾಧ್ಯತೆಯ ಸಂಗತಿಯನ್ನು ಗಮನಿಸಬಹುದು ಎಂದರು. ಸು .ರಂ. ಎಕ್ಕುಂಡಿ ಕಾವ್ಯದ ಕುರಿತು ಚಿಂತಕ ದೇವೇಂದ್ರ ಬೆಳೆಯೂರು ಹಾಗೂ ಬೇಂದ್ರೆಯವರ ಕವನ ಹಾಗೂ ಕುವೆಂಪು ಕುರಿತು ಲೇಖಕ ಅ.ರಾ. ಶ್ರೀನಿವಾಸ ವಿಶ್ಲೇಷಿಸಿದರು.
ನವೀನ್ ಶರ್ಮ ಹುಳೇಗಾರು, ಕೌಂಡಿನ್ಯ ಕೂಡ್ಲುತೋಟ, ಬಂಗಾರಿ ಭಟ್, ಪ್ರಭಾಕರ ಸಾಂಶಿ, ಸೃಜನ್, ಮೈಲಪ್ಪ, ಅಂಬಿಕಾ ಹೆಗ್ಗೊàಡು, ಲಕ್ಷ್ಮೀ ಚಂದ್ರಶೇಖರ್, ಶಮಾ ಕಿರುಗೊಡಿಗೆ, ರೇವತಿ ವೆಂಕಟೇಶ್ ಹೊಸಕೊಪ್ಪ, ಕೃತಿ ಪುರಪ್ಪೆಮನೆ ಮತ್ತಿತರ ಕವಿಗಳು ಭಾಗವಹಿಸಿದ್ದರು. ಗೋಪಾಲಕೃಷ್ಣ ಸಂಪೇಕೈ ಅಧ್ಯಕ್ಷತೆ ವಹಿಸಿದ್ದರು. ಉಮಾಮಹೇಶ್ವರ ಹೆಗಡೆ ನಿರ್ವಹಿಸಿದರು.
ಓದಿ : ಮಹಾನಗರ ಪಾಲಿಕೆ ಟೌನ್ ಪ್ಲಾನಿಂಗ್ ನ ಜಂಟಿ ನಿರ್ದೇಶಕ ಜಯರಾಜ್ ಅವರ ಮನೆ ಮೇಲೆ ಎಸಿಬಿ ದಾಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ
Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ
Shivamogga: ಡಿವೈಡರ್ ಏರಿದ ನಗರ ಸಾರಿಗೆ ಬಸ್: ಎಮರ್ಜೆನ್ಸಿ ಡೋರ್ ಮೂಲಕ ಇಳಿದ ಪ್ರಯಾಣಿಕರು
Ripponpete: ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ
Sagara: ಬೈಕ್‌ಗೆ ಕಾರು ಡಿಕ್ಕಿ; ಬೈಕ್ ಸವಾರ ಸಾವು
MUST WATCH
ಹೊಸ ಸೇರ್ಪಡೆ
Hockey: ವನಿತಾ ಏಷ್ಯಾ ಚಾಂಪಿಯನ್ಸ್ ಹಾಕಿ… ಇಂದು ಭಾರತಕ್ಕೆ ಥಾಯ್ಲೆಂಡ್ ಎದುರಾಳಿ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.