ಕಾಡಾನೆಗಳ ಸೆರೆಗೆ ಸಕ್ರೆಬೈಲು ಗಜಪಡೆ ರೆಡಿ
ಉಂಬ್ಳೆ·ಬೈಲು ಅರಣ್ಯ ಪ್ರದೇಶದಲ್ಲಿ ಆನೆ ಸೆರೆಗೆ ಕಾರ್ಯಾಚರಣೆ ನಡೆಸಲು ಸಿದ್ಧತೆ
Team Udayavani, Feb 3, 2021, 1:56 PM IST
ಶಿವಮೊಗ್ಗ: ಉಂಬ್ಳೆàಬೈಲು ಅರಣ್ಯ ವಲಯ ಪ್ರದೇಶದಲ್ಲಿಕಳೆದ ಐದಾರು ವರ್ಷಗಳಿಂದ ಬೀಡುಬಿಟ್ಟುಗದ್ದೆ-ತೋಟಗಳನ್ನು ನಾಶ ಮಾಡುತ್ತಿರುವ ಕಾಡಾನೆಗಳನ್ನುಸೆರೆ ಹಿಡಿಯಲು ಸಕ್ರೆಬೈಲಿನ ಗಜಪಡೆ ಹೊರಡಲಿದೆ.ಕಾಡಾನೆಗಳ ಉಪಟಳ ಹೆಚ್ಚಾದ ಹಿನ್ನೆಲೆಯಲ್ಲಿಅವುಗಳನ್ನು ಸೆರೆ ಹಿಡಿಯಲು ಸರಕಾರದ ಸೂಚನೆಮೇರೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್.ರವಿಶಂಕರ್ ಅವರು ವನ್ಯಜೀವಿ ವಿಭಾಗದ ಉಪ ಅರಣ್ಯಸಂರಕ್ಷಣಾಧಿಕಾರಿ ನಾಗರಾಜ್ ಅವರಿಗೆ ಕಾರ್ಯಾಚರಣೆಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನನೀಡಿದ್ದು, ಸಕ್ರೆಬೈಲು ಆನೆ ಬಿಡಾರದ ಎರಡು ಸಲಗಮತ್ತು ಒಂದು ಹೆಣ್ಣಾನೆಯನ್ನು ಕಾರ್ಯಾಚರಣೆಗೆಬಳಸಿಕೊಳ್ಳಲು ನಿರ್ಧರಿಸಲಾಗಿದೆ.ಶಿವಮೊಗ್ಗ ದಸರಾ ಮಹೋತ್ಸವದಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಸಲಗ ಸಾಗರತಂಡದ ನೇತೃತ್ವ ವಹಿಸಲಿದೆ. ಸೋಮವಾರ ಈ ಬಗ್ಗೆಆದೇಶ ಹೊರಡಿಸಿದ್ದು ಎಲ್ಲ ರೀತಿಯ ಸಿದ್ಧತೆಗಳಿಗೆಚಾಲನೆ ನೀಡಲಾಗಿದೆ. ಕಾರ್ಯಾಚರಣೆ ಫೆ.3 ಅಥವಾ4ರಿಂದ ಹಾಲ್‌ಲಕ್ಕವಳ್ಳಿಯಿಂದ ಆರಂಭವಾಗುವ ಸಾಧ್ಯತೆಇದೆ.
ಕಳೆದ ಐದಾರು ವರ್ಷಗಳಿಂದ ಒಂಟಿ ಸಲಗಉಂಬ್ಳೆಬೈಲು ಅರಣ್ಯ ವಲಯದ ಉಂಬ್ಳೆàಬೈಲು,ಸಾರಿಗೆರೆ, ಕೈದೊಟ್ಲು, ಹುರುಳಿಹಳ್ಳಿ, ತೋಟದಕೆರೆ,ಯರಗನಾಳ್, ಹಾಲ್‌ಲಕ್ಕವಳ್ಳಿ ಮುಂತಾದ ಕಡೆಓಡಾಡಿಕೊಂಡಿತ್ತು. ಎರಡು ವರ್ಷಗಳಿಂದ ಅದರೊಂದಿಗೆಇನ್ನೂ 2-3 ಆನೆಗಳು ಸೇರಿಕೊಂಡು ನಿರಂತರವಾಗಿ ಬೆಳೆಹಾಳು ಮಾಡುತ್ತಿವೆ. ಅಡಕೆ, ತೆಂಗು, ಬಾಳೆ, ಭತ್ತ ಮತ್ತುಇತರೆ ಬೆಳೆಗಳ ರುಚಿ ನೋಡಿದ ಇವು ಪ್ರತಿದಿನ ಒಂದಲ್ಲಒಂದು ಕಡೆ ಬೆಳೆ ನಾಶ ಮಾಡುತ್ತಿವೆ.ಬೆಳೆ ನಾಶ ತಡೆಯಲು ರೈತರು ಆನೆಗಳುಬರಬಹುದಾದ ದಾರಿಯಲ್ಲಿ ತೋಟದ ಮಗ್ಗುಲಲ್ಲಿಪ್ರತಿದಿನವೂ ಬೆಂಕಿ ಹಾಕಿಕೊಂಡು ರಾತ್ರಿಪೂರ್ತಿಕಾಯುತ್ತಾರೆ. ಇಷ್ಟಾಗಿಯೂ ಯಾವುದೋ ಮಾಯದಲ್ಲಿಮತ್ತೂಂದು ಕಡೆ ತೋಟಗಳಿಗೆ ನುಗ್ಗುತ್ತಲೇ ಇದೆ. ಬೆಳೆನಾಶಕ್ಕೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಹಲವುರೈತರಿಗೆ ಪರಿಹಾರವನ್ನೂ ಕೊಟ್ಟಿದೆ¨
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.