ಕಿರುಕುಳ ನೀಡುತ್ತಿ ದೆ ಕಾಡಾನೆ ಅಭಯಾರಣ್ಯಕ್ಕಟ್ಟುವಲ್ಲಿ ಯಶಸ್ವಿ

ಸಕ್ರೆಬೈಲು ಆನೆ ಬಿಡಾರದ 12, ಅರಣ್ಯ ಇಲಾಖೆಯ 25 ಸಿಬ್ಬಂದಿ ಕಾರ್ಯಾಚರಣೆ

Team Udayavani, Feb 5, 2021, 6:26 PM IST

5-19

ಶಿವಮೊಗ್ಗ: ಉಂಬ್ಳೆಬೈಲು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ಗ್ರಾಮಸ್ಥರಿಗೆ ಕಿರುಕುಳ ನೀಡುತ್ತಿದ್ದ ಕಾಡಾನೆಗಳನ್ನು ಭದ್ರಾ ಅಭಯಾರಣ್ಯದೊಳಗೆ ಓಡಿಸಲು ಅರಣ್ಯ ಇಲಾಖೆ ಹಾಗೂ ಸಕ್ರೆಬೈಲು ಆನೆ ಬಿಡಾರದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉಂಬ್ಳೆಬೈಲು ಭಾಗದ ಹಾಲ್‌ಲಕ್ಕವಳ್ಳಿ ಪ್ರದೇಶದಲ್ಲಿ ಆನೆಗಳು ಬೀಡುಬಿಟ್ಟಿದ್ದವು. ಬುಧವಾರ ಉಂಬ್ಳೆಬೈಲು, ಕೈದೊಟ್ಲು ನಡುವಿನ ರಸ್ತೆ ಮೂಲಕ ಚೆಕ್‌ಪೋಸ್ಟ್‌ ಮತ್ತು ಕಾಕನಹಸೂಡಿ ರಸ್ತೆ ನಡುವೆ ಎನ್‌.ಆರ್‌. ಪುರ ರಸ್ತೆ ದಾಟಿಸಿ ಭದ್ರಾ ಅಭಯಾರಣ್ಯ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗುರುವಾರ ಬೆಳಗ್ಗೆಯಿಂದ ಅಭಯಾರಣ್ಯದ ದಟ್ಟ ಕಾಡಿನೊಳಗೆ ಸೇರಿಸಿದ್ದು ಮತ್ತೆ ವಾಪಾಸ್‌ ಬರದಂತೆ ಕಾಕನಹಸೂಡಿ ಬಳಿ ತಾತ್ಕಾಲಿಕವಾಗಿ ಬೀಡು ಬಿಡಲಾಗಿದೆ. ಬುಧವಾರ ಯಾವುದೇ ಆನೆಗಳನ್ನು ಬಳಸದೇ ಸಿಬ್ಬಂದಿ ಮೂಲಕವೇ ಹಿಮ್ಮೆಟಿಸಲಾಗಿತ್ತು. ಗುರುವಾರ ಸಕ್ರೆಬೈಲು ಆನೆಗಳನ್ನು ಗಡಿಯಲ್ಲಿ ಇರಿಸಲಾಗಿದೆ. ಸಕ್ರೆಬೈಲು ಆನೆಬಿಡಾರದ 12 ಮಂದಿ, ಅರಣ್ಯ ಇಲಾಖೆಯ 25 ಸಿಬ್ಬಂದಿ ಪಾಲ್ಗೊಂಡಿದ್ದರು.

ಉಂಬ್ಳೆಬೈಲು ಅರಣ್ಯ ಪ್ರದೇಶ ಬಫರ್‌ ಝೋನ್‌ ವ್ಯಾಪ್ತಿಯಲ್ಲಿದ್ದು 20ಕ್ಕೂ ಹೆಚ್ಚು ಹಳ್ಳಿಗಳಿವೆ. ಹೇರಳವಾಗಿ ಭತ್ತ, ಬಾಳೆ, ಅಡಕೆ, ತೆಂಗು ಬೆಳೆಯಲಾಗುತ್ತಿದ್ದು ಕೆರೆಗಳು ಸಹ ಇವೆ. ಕಾಡಾನೆಗಳಿಗೆ ಉತ್ತಮ ಆಹಾರ ಸಿಗುತ್ತಿದ್ದುದರಿಂದ ಅವುಗಳು ಈ ಭಾಗದಲ್ಲಿ ಬೀಡು ಬಿಟ್ಟು ರೈತರಿಗೆ ನಷ್ಟ ಮಾಡುತ್ತಿದ್ದವು. ಇದರಿಂದ ಬೇಸತ್ತ ಜನ ಆನೆ ಹಿಡಿದು ಬೇರೆಡೆ ಬಿಡಲು ಮನವಿ ಮಾಡಿದ್ದರು. ಆನೆ ಹಿಡಿಯುವ ಕಾರ್ಯಾಚರಣೆ ಬಹಳ ವೆಚ್ಚದಾಯಕವಾದ್ದರಿಂದ ಸರಕಾರ ಓಡಿಸಲು ಅನುಮತಿ ನೀಡಿತ್ತು.

ತಾತ್ಕಾಲಿಕ ಕ್ರಮ ಬೇಡ: ಆನೆಗಳನ್ನು ಅರಣ್ಯ ಪ್ರದೇಶಗಳಿಗೆ ಓಡಿಸಿರುವುದು ತಾತ್ಕಾಲಿಕ ರಿಲೀಫ್‌ ನೀಡಿದ್ದು ಅವುಗಳನ್ನು ಬೇರೆಡೆ ಸ್ಥಳಾಂತರ ಮಾಡದಿದ್ದರೆ ಮತ್ತೆ ಬರುತ್ತವೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಮನುಷ್ಯನಿಗೆ ಗಡಿ ಇದೆ. ಆನೆಗಳಿಗೆ ಅದ್ಯಾವುದೂ ತಿಳಿಯುವುದಿಲ್ಲ ಎಂಬುದು ಗ್ರಾಮಸ್ಥರ ವಾದ. ಕಾಡಾನೆಗಳು ನೆಲೆಸಿರುವ ಜಾಗದಲ್ಲಿ ಬೇರೆ ಆನೆಗಳು ಬಂದರೆ ಅವು ಮತ್ತೆ ಆ ಕಡೆ ಸುಳಿಯುವುದಿಲ್ಲ. ಆದ್ದರಿಂದ ಸದ್ಯಕ್ಕೆ ಬರುವುದಿಲ್ಲ ಎಂಬುದು ಆನೆಗಳ ತಜ್ಞರ ಅಭಿಮತ.

ಟ್ರಂಚ್‌ ಬೇಕು: ಆನೆಗಳನ್ನು ಓಡಿಸಿರುವುದು ತಾತ್ಕಾಲಿಕ ಕ್ರಮವಾಗಿದೆ. ಮತ್ತೆ ಬರಬಹುದು. ಭದ್ರಾ ಅಭಯಾರಣ್ಯದ ಗಡಿಯಲ್ಲಿ ಸೋಲಾರ್‌ ಬೇಲಿ ಹಾಕಿದರೆ ಇದಕ್ಕೆಲ್ಲ ಕಡಿವಾಣ ಬೀಳಲಿದೆ. ಈ ಹಿಂದೆ ಎಲಿಫಂಟ್‌ ಪ್ರೂಫ್‌ ಫೆನ್ಸಿಂಗ್‌ ಮಾಡಲಾಗಿತ್ತು. ಆದರೆ ಅದನ್ನೂ ದಾಟಿಕೊಂಡು ಆನೆಗಳು ಬರುತ್ತಿವೆ. ನಮ್ಮ ಭಾಗದಲ್ಲಿ 33 ಕಿ.ಮೀ ಕಂದಕ ನಿರ್ಮಾಣ ಮಾಡಲು 2.80 ಕೋಟಿ ವೆಚ್ಚದ ಯೋಜನೆಗೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ವನ್ಯಜೀವಿ ವಲಯ ಹಾಗೂ ನಮ್ಮ ಕಡೆಯಿಂದ ಬೇಲಿ ಹಾಗೂ ಕಂದಕ ನಿರ್ಮಾಣವಾದರೆ ಶಾಶ್ವತ ಪರಿಹಾರ ಸಿಗಬಹುದು ಎನ್ನುತ್ತಾರೆ ಉಂಬ್ಳೆಬೈಲು ವಲಯ ಆರ್‌ಎಫ್‌ಒ ಆರ್‌.ಟಿ. ಮಂಜುನಾಥ್‌. ಅರಣ್ಯ ಪ್ರದೇಶದ ಆಯಕಟ್ಟಿನ ಜಾಗಗಳಲ್ಲಿ ಆನೆಗಳು ಒಳಬರುತ್ತವೆ. ಅಂತಹ ಪ್ರದೇಶಗಳನ್ನು ಈಗಾಗಲೇ ಗುರುತಿಸಿದ್ದು ಜಮೀನು, ಅರಣ್ಯ ಪ್ರದೇಶದ ಕೆಲವು ಕಡೆ ಈ ಟ್ರಂಚ್‌ಗಳು ಕಾರ್ಯರೂಪಕ್ಕೆ ಬರಲಿವೆ.

ಓದಿ : ಬಾವಿಗೆ ಹಾರಿ ಬಾಲಕಿ ಆತ್ಮಹತ್ಯೆ : ಕಾರಣ ನಿಗೂಢ

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಗೀತಾರ್ಥ ಚಿಂತನೆ-131: ಮನುಷ್ಯತ್ವ ದೇಹದಲ್ಲಿಯೋ? ಆತ್ಮನಲ್ಲಿಯೋ?

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Udupi: ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಬದಲಿಲ್ಲ: ಕೋಟ

Foot ball

ಬೆಂಗಳೂರಿನಲ್ಲಿ ಭಾರತ- ಮಾಲ್ಡೀವ್ಸ್‌   ವನಿತಾ ಫುಟ್‌ಬಾಲ್‌

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Congress ಸರಕಾರದಿಂದ ಗೂಂಡಾಗಳಿಗೆ ಮಣೆ: ನಳಿನ್‌ ಟೀಕೆ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Dec.24: ಬಸ್ರೂರು “ಅಪ್ಪಣ್ಣ ಹೆಗ್ಡೆ 90′: ವಕ್ವಾಡಿಯಲ್ಲಿ ಸಾರ್ವಜನಿಕ ಸಂಭ್ರಮ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Sasthan Toll Plaza: ವಾಣಿಜ್ಯ ವಾಹನಗಳಿಗೆ ಮತ್ತೆ ಶುಲ್ಕ: ಪ್ರತಿಭಟನೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ

Udupi: ಭಗವಾನುವಾಚ ಪುಸ್ತಕ ಇಂದು ಲೋಕಾರ್ಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರುಕಲಾದ ಬಸ್

Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಪತ್ತೆ

ಭದ್ರಾವತಿಯ ರೈಸ್​ಮಿಲ್​ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ

1-eeee

Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-jyo

Asian Weightlifting: ಜೋಶ್ನಾ ನೂತನ ದಾಖಲೆ

1-bcc

U-19 ವನಿತಾ ಏಷ್ಯಾ ಕಪ್‌: ಫೈನಲ್‌ಗೆ ಭಾರತ

1-J-PP

Pro Kabaddi: ಜೈಪುರ್‌ 12ನೇ ವಿಜಯ

1-bangla

T20;ಮೂರೂ ಪಂದ್ಯ ಗೆದ್ದ ಬಾಂಗ್ಲಾ: ವಿಂಡೀಸಿಗೆ ವೈಟ್‌ವಾಶ್‌

1-pak

ODI; ತವರಲ್ಲೇ ಎಡವಿದ ದಕ್ಷಿಣ ಆಫ್ರಿಕಾ: ಸರಣಿ ಗೆದ್ದ ಪಾಕಿಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.