ಬ್ರಾಹ್ಮಣ ಸಂಸತ್‌ಗೆ ರಜತೋತ್ಸವ ಸಂಭ್ರಮ
25 ವರ್ಷಗಳನ್ನು ಪೂರೈಸಿದ ಸಂಭ್ರಮದಲ್ಲಿರುವ ನಗರದ ಬ್ರಾಸಮ್ ಸಂಭ್ರಮ
Team Udayavani, Feb 5, 2021, 6:49 PM IST
ಸಾಗರ: ನಗರದ ಪ್ರತಿಷ್ಠಿತ ಸಂಸ್ಥೆ ಬ್ರಾಹ್ಮಣ ಸಂಸತ್ 25 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ವಿಶೇಷ ರಜತ ಮಹೋತ್ಸವ ಸಮಾರಂಭವನ್ನು ಶನಿವಾರ ಬೆಳಗ್ಗೆ 11ಕ್ಕೆ ಬ್ರಾಸಮ್ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಭೀಮೇಶ್ವರ ಜೋಷಿ “ನಾವು ಹವ್ಯಕರು’ ಸ್ಮರಣ ಸಂಚಿಕೆ ಲೋಕಾರ್ಪಣೆ ಮಾಡಲಿದ್ದಾರೆ. ಬ್ರಾಸಮ್ ಅಧ್ಯಕ್ಷ ಅ.ರಾ.
ಲಂಬೋದರ ಅಧ್ಯಕ್ಷತೆ ವಹಿಸಲಿದ್ದಾರೆ.
1995ರಲ್ಲಿ ಅಸ್ತಿತ್ವಕ್ಕೆ ಬಂದ ಬ್ರಾಸಂನಲ್ಲಿ ವಿದ್ಯಾರ್ಥಿ ನಿಲಯ, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಸಭಾಭವನ ಮತ್ತು ನಡುವಿನಲ್ಲಿ ಗಣಪತಿ ದೇವಾಲಯ ನಿರ್ಮಾಣವಾಗಿದೆ. ಗಣಪತಿ ದೇವಾಲಯದಲ್ಲಿ ಪೂಜೆ, ನೇಮ ನಿಷ್ಟೆ, ಹೋಮ- ಹವನ ನಡೆದುಕೊಂಡು ಬರುತ್ತಿದೆ. ದೇವಸ್ಥಾನದಲ್ಲಿ ಮಹಾಗಣಪತಿ ಭಜನಾ ಮಂಡಳಿಯೊಂದು ಇದ್ದು ಅದರ ವತಿಯಿಂದ ವಾರದ ನಾಲ್ಕು ದಿನಗಳು ಸಂಜೆ ವೇಳೆಯಲ್ಲಿ ಭಜನೆ ಕಾರ್ಯಕ್ರಮ ನಡೆಯುತ್ತಿದೆ. ಕಾರ್ತಿಕ ಮಾಸ ಪೂರ್ತಿ ಭಜನೆ ಇರುತ್ತದೆ. ಕೋವಿಡ್‌ಲಾಕ್ ಡೌನ್ ಸಂದರ್ಭದಲ್ಲಿಯೂ ದೇವಪೂಜೆ ಆ
ದಿನಗಳ ಸರ್ಕಾರಿ ನಿಯಮದಂತೆ ತಪ್ಪದೇ ನಡೆಯಿತು.
ಇಲ್ಲಿನ ವಿದ್ಯಾರ್ಥಿ ನಿಲಯವು 1997ರ ಸಾಲಿನಿಂದ ನಡೆದುಕೊಂಡು ಬರುತ್ತಿದೆ. ವಿದ್ಯಾರ್ಥಿಗಳಿಗೆ ಯೋಗ್ಯ ದರದಲ್ಲಿ ಊಟ ವಸತಿ ಮುಂತಾಗಿ ಸೌಲಭ್ಯಗಳನ್ನು ನೀಡಲಾಗುತ್ತಿದೆ. 28 ಕೊಠಡಿಗಳಲ್ಲಿ ತಲಾ ಇಬ್ಬರು ವಿದ್ಯಾರ್ಥಿಗಳಂತೆ, ಇನ್ನು 2 ಕೊಠಡಿಗಳಲ್ಲಿ ತಲಾ ಮೂವರಂತೆ ಉಳಿಯಲು ವ್ಯವಸ್ಥೆಯನ್ನು ಒದಗಿಸಲಾಗಿದೆ. ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಉಚಿತವಾಗಿ ಊಟೋಪಚಾರದ ವ್ಯವಸ್ಥೆ ಮಾಡಲಾಗುತ್ತಿದೆ. ದೂರದ ಹಳ್ಳಿಗಾಡುಗಳಿಂದ, ಯಲ್ಲಾಪುರ, ಕರೂರು, ಕಬ್ಬನಾಡು, ನಗರ, ಹೊಸನಗರ, ಸಿರ್ಸಿ, ಸಿದ್ದಾಪುರ, ತೀರ್ಥಹಳ್ಳಿ ಮುಂತಾದ ಪ್ರದೇಶಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ಕೆಲ ವರ್ಷ 100ಕ್ಕೂ ಮಿಕ್ಕು ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು.ಆ ದಿನಗಳಲ್ಲಿ ಹಾಸನ,
ಮೈಸೂರು, ಬೆಂಗಳೂರುಗಳಿಂದಲೂ ವಿದ್ಯಾರ್ಥಿಗಳು ಇಲ್ಲಿ ಉಳಿದು ವಿದ್ಯಾಭ್ಯಾಸ ಮಾಡಿದ ದಾಖಲೆ ಇದೆ. ಸಂಸ್ಥೆಯ ಸಿಜಿಕೆ ಸಭಾಭವನ ನಿಲಯದ ವಿದ್ಯಾರ್ಥಿಗಳಿಗೆ ಅವರ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುವ ಸ್ಥಳವಾಗಿದೆ. ಅಲ್ಲೊಂದು ಷಟಲ್ ಕೋರ್ಟ್ ಇದೆ. ವಿದ್ಯಾರ್ಥಿಗಳು ಅದರ ಸದುಪಯೋಗ ಮಾಡಿಕೊಂಡ ನಿದರ್ಶನವಾಗಿ ಮೈಸೂರು ವಿಶ್ವವಿದ್ಯಾನಿಲಯದ ಮತ್ತು ಕುವೆಂಪು
ವಿಶ್ವವಿದ್ಯಾಲಯದ ಚಾಂಪಿಯನ್‌ಗಳಾಗಿದ್ದು ಸಾಕ್ಷಿ. ಈ ಸಭಾಭವನದಲ್ಲಿ ಸಂಘ-ಸಂಸ್ಥೆಗಳ ಸಭೆಗಳಿಗೆ, ಕಾರ್ಯಕ್ರಮಗಳಿಗೆ ರಿಯಾಯತಿ
ದರದಲ್ಲಿ ಇಲ್ಲವೇ ಉಚಿತವಾಗಿ ನಡೆಸಲು ಸ್ಥಳ ಒದಗಿಸಲಾಗುತ್ತಿದೆ. ಕೆಲ ವರ್ಷಗಳು ಬ್ರಾಹ್ಮಣ ವಟುಗಳಿಗೆ ಸಾಮೂಹಿಕ ಉಪನಯನದ ಕಾರ್ಯಕ್ರಮಗಳಿಗೆ ಒದಗಿಸಲಾಗುತ್ತಿ¨
ಓದಿ : ಸೂಕಿ ಯಶೋಗಾಥೆ; ಮ್ಯಾನ್ಮಾರ್ ಪ್ರಜಾಪ್ರಭುತ್ವದ ಐಕಾನ್, ರಾಜಕೀಯ ಕೈದಿ ಟು ನಾಯಕಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.