ಇಂದಿರಾ ಕಾಲೇಜು ಸಂಯೋಜನೆ ಅವೈಜ್ಞಾನಿಕ
ವಿಜಯಪುರ ಅಕ್ಕ ಮಹಾದೇವಿ ವಿವಿಗೆ ಅವಕಾಶ ನೀಡಲ್ಲ: ಶಾಸಕ ಹಾಲಪ್ಪ ಹರತಾಳು
Team Udayavani, Feb 25, 2021, 6:47 PM IST
ಸಾಗರ: ನಗರದ ಇಂದಿರಾ ಗಾಂಧಿ ಕಾಲೇಜನ್ನು ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಳಿಸುವ ಸರ್ಕಾರದ
ನಿರ್ಧಾರ ಅವೈಜ್ಞಾನಿಕವಾಗಿದೆ.ಯಾವುದೇ ಕಾರಣಕ್ಕೂ ಈ ರೀತಿ ಸಂಯೋಜನೆಗೊಳ್ಳಲು ಅವಕಾಶ ನೀಡುವುದಿಲ್ಲ ಎಂದು ಎಂಎಸ್ ಐಎಲ್ ಅಧ್ಯಕ್ಷ, ಶಾಸಕ ಎಚ್.ಹಾಲಪ್ಪ ಹರತಾಳು ತಿಳಿಸಿದ್ದಾರೆ.
ನಗರದ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಬುಧವಾರ ಕರೆಯಲಾಗಿದ್ದ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಬಗ್ಗೆ ಉನ್ನತ ಶಿಕ್ಷಣ ಸಚಿವರ ಜೊತೆಗೆ ಮಾತುಕತೆ ನಡೆಸಲಾಗುತ್ತದೆ.ಈ ಕುರಿತು ಸಮಿತಿ ಸಭೆಯಲ್ಲಿ ತೀರ್ಮಾನಿಸಿ ಸರ್ಕಾರಕ್ಕೆ ಮನವಿ ಸಹ ಸಲ್ಲಿಸಲಾಗುತ್ತದೆ ಎಂದರು.
ಈ ಕಾಲೇಜು ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಬರುತ್ತದೆ. ಅದನ್ನು ಬೇರ್ಪಡಿಸುವ ನಿರ್ಧಾರ ಸರಿಯಲ್ಲ. ಬಿಜಾಪುರ
ಮತ್ತು ಸಾಗರದ ಸಂಸ್ಕೃತಿ, ಆಚಾರ, ವಿಚಾರಕ್ಕೆ ಸಾಕಷ್ಟು ವ್ಯತ್ಯಾಸಗಳಿವೆ. ಜೊತೆಗೆ ಇಲ್ಲಿಂದ 400 ಕಿ.ಮೀ. ಆಗುತ್ತದೆ. ವಿದ್ಯಾರ್ಥಿನಿಯರು ಸಣ್ಣಪುಟ್ಟ ಕೆಲಸಕ್ಕೂ ಬಿಜಾಪುರಕ್ಕೆ ಹೋಗಲು ಸಾಧ್ಯವಿಲ್ಲ. ಕುವೆಂಪು ವಿಶ್ವವಿದ್ಯಾಲಯ 100 ಕಿ.ಮೀ. ವ್ಯಾಪ್ತಿಯಲ್ಲಿ ಬರುತ್ತಿದ್ದು, ಯಾವುದೇ
ಕಾರಣಕ್ಕೂ ಬೇರೆ ವಿವಿ ವ್ಯಾಪ್ತಿಗೆ ನಮ್ಮ ಕಾಲೇಜು ಸೇರಿಸುವುದು ಬೇಡ ಎಂದು ಹೇಳಿದರು.
ಇಂದಿರಾಗಾಂಧಿ ಕಾಲೇಜು ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗ್ರಂಥಾಲಯ, ಸೆಮಿನಾರ್ ಹಾಲ್, ಹೆಚ್ಚುವರಿ ಕ್ಲಾಸ್
ರೂಂ ನಿರ್ಮಾಣಕ್ಕೆ ಸುಮಾರು 5.20 ಕೋಟಿ ರೂ. ಬಿಡುಗಡೆಯಾಗಿದ್ದು, ಸದ್ಯದಲ್ಲಿಯೇ ಸಂಸದರ ಸಮ್ಮುಖದಲ್ಲಿ ಶಂಕುಸ್ಥಾಪನೆ ಕಾರ್ಯ
ನಡೆಸಲಾಗುತ್ತದೆ. ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆ ಎಂದಿನಂತೆ ನಡೆಸಿಕೊಂಡು ಹೋಗಲು ಅಗತ್ಯ ತರಬೇತುದಾರರನ್ನು ನೇಮಕ ಮಾಡಿಕೊಳ್ಳಲು ಪ್ರಾಚಾರ್ಯರಿಗೆ ಸೂಚನೆ ನೀಡಲಾಗಿದೆ. ಉಪ ಮುಖ್ಯ ಮಂತ್ರಿ ಡಾ|ಅಶ್ವಥ್ ನಾರಾಯಣ್ ಅವರಿಗೆ ಕಾಲೇಜಿನ ಬಗ್ಗೆ ಮಾಹಿತಿ ನೀಡಿದ್ದು, ಕಾಲೇಜಿಗೆ ಸುಸಜ್ಜಿತ ಕಂಪ್ಯೂಟರ್ ಕೊಠಡಿ, ಲ್ಯಾಬ್ ಮೊದಲಾದವುಗಳಿಗೆ ಸುಮಾರು 45 ಲಕ್ಷ ರೂ. ಅನುದಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಪ್ರಾಚಾರ್ಯ ಡಾ|ಅಶೋಕ್ ಡಿ. ರೇವಣಕರ್, ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ್, ಉಪಾಧ್ಯಕ್ಷ ವಿ.ಮಹೇಶ್, ಸ್ಥಾಯಿ ಸಮಿತಿ ಅಧ್ಯಕ್ಷ ಡಿ.ತುಕಾರಾಮ್, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಟಿ.ಡಿ.ಮೇಘರಾಜ್, ಸದಸ್ಯರಾದ ಯು.ಎಚ್. ರಾಮಪ್ಪ, ಬಿ.ಎಚ್.ಲಿಂಗರಾಜ್,
ರಾಜೇಂದ್ರ ಪೈ, ಎಂ.ಡಿ.ಆನಂದ್, ಪ್ರಾಧ್ಯಾಪಕರಾದ ಡಾ|ಗಣೇಶ್ ಭಟ್, ಡಾ|ಓ.ಜಿ.ಬಸವನಗೌಡ, ಪ್ರೊ| ಮಹಾಬಲೇಶ್ವರ ಇನ್ನಿತರರು
ಹಾಜರಿದ್ದರು.
ಓದಿ : ವಿಜಯಪುರ : ವಿಧವಾ ವೇತನ ನೀಡಲು ಲಂಚ ಪಡೆಯುತ್ತಿದ್ದ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
B. S. Yediyurappa: ವಿಜಯೇಂದ್ರ ಬೆಳವಣಿಗೆ ಕೆಲವರಿಗೆ ಸಹಿಸಲು ಆಗುತ್ತಿಲ್ಲ
BJP: ನನ್ನ ಹೊಣೆ ಸಮರ್ಥವಾಗಿ ನಿಭಾಯಿಸುತ್ತಿದ್ದೇನೆ: ಬಿ.ವೈ.ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.