ಸೊರಬ ಸಿಗಲಿದೆ ಕ್ಷೇತ್ರ ವಿಂಗಡಣೆ ಲಾಭ
Team Udayavani, Apr 8, 2021, 6:57 PM IST
ಸಾಗರ: ಸಾಗರ ತಾಲೂಕಿನಲ್ಲಿ 35 ಗ್ರಾಪಂಗಳಿವೆ. ಅವುಗಳನ್ನು ವಿಂಗಡಿಸಿ ಈ ಬಾರಿ ಒಂದು ಜಿಪಂ ಕ್ಷೇತ್ರ ಹೆಚ್ಚುವರಿಯಾಗಿ ಕೊಟ್ಟಿದ್ದರೆ, ಮೂರು ತಾಪಂ ಕ್ಷೇತ್ರ ಕಡಿಮೆಯಾಗಿದೆ. ವಿಚಿತ್ರವೆಂದರೆ, ಎರಡು ಜಿಪಂ ಕ್ಷೇತ್ರಗಳು ಸೊರಬ ವಿಧಾನಸಭಾ ಕ್ಷೇತ್ರದ ಭಾಗಗಳನ್ನು ಹೊಂದಿರುವುದರಿಂದ ಮುಂದಿನ ದಿನಗಳಲ್ಲಿ ಹಲವು ಗೊಂದಲಗಳಾಗಬಹುದು. ಈ ಹಿಂದೆ ತಾಳಗುಪ್ಪ ಕ್ಷೇತ್ರ ಇನ್ನು ಮುಂದೆ ಕಾನ್ಲ ಜಿಪಂ ಕ್ಷೇತ್ರವಾಗುತ್ತಿದೆ. ಇಲ್ಲಿನ ಅಷ್ಟೂ ಮತದಾರರು ಸೊರಬ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ್ದರೆ ಇತ್ತ ಕುದರೂರು ಜಿಪಂ ಕ್ಷೇತ್ರ ಹೊಸದಾಗಿ ಸೃಷ್ಟಿಯಾಗಿದೆ.
ಇದರಲ್ಲಿ ಸಾಗರಕ್ಕೆ ಸೇರಿದ ಕುದರೂರು, ತುಮರಿ, ಸಂಕಣ್ಣ ಶ್ಯಾನಬೋಗ್, ಚನ್ನಗೊಂಡ, ಭಾನುಕುಳಿ, ಅರಲಗೋಡು ಹಾಗೂ ಸೊರಬಕ್ಕೆ ಸೇರಿದ ತಲವಾಟ ಗ್ರಾಪಂ ಸೇರಿದೆ. ರಾಜಕೀಯವಾಗಿ ಈ ಗೊಂದಲಗಳು ಮುಂದಿನ ದಿನಗಳಲ್ಲಿ ಹೆಚ್ಚು ಸಮಸ್ಯೆಗಳನ್ನು ಉಂಟು ಮಾಡಬಹುದು. ಪ್ರಸ್ತುತ ಸಾಗರ ಹಾಗೂ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಒಂದೇ ಪಕ್ಷದ ಜನಪ್ರತಿನಿ ಧಿಗಳಿದ್ದರೂ ಆಗುತ್ತಿರುವ ಸಮಸ್ಯೆಗಳನ್ನು ನೋಡಿದರೆ, ಭಿನ್ನ ಪಕ್ಷಗಳ ಪ್ರತಿನಿ ಧಿಗಳಾದರಂತೂ ಬಿಸಿ ಗಾಳಿ ಉಂಟಾಗುವ ಎಲ್ಲ ಸಾಧ್ಯತೆಗಳಿವೆ. ಈ ಗೊಂದಲ ತಾಪಂ ಕ್ಷೇತ್ರಗಳಿಗೂ ಅನ್ವಯಿಸಲಿದೆ. ಈವರೆಗೆ ಇದ್ದ 15 ತಾಪಂ ಕ್ಷೇತ್ರಗಳಲ್ಲಿ ಕೋಳೂರು, ಲ್ಯಾವಿಗೆರೆ ಹಾಗೂ ಎಡಜಿಗಳೇಮನೆ ಕ್ಷೇತ್ರಗಳನ್ನು ರದ್ದುಗೊಳಿಸಲಾಗಿದೆ. ಅದರ ಜತೆಗೆ ಪಂಚಾಯ್ತಿಗಳನ್ನೇ ಒಡೆದು ಮತದಾರರ ಸಂಖ್ಯೆಗೆ ಅನುಸಾರವಾಗಿ ಬೂತ್‌ಗಳನ್ನು ಕ್ಷೇತ್ರಗಳಿಗೆ ವರ್ಗಾಯಿಸಲಾಗಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳೆರಡರಲ್ಲೂ ಈ ಕುರಿತು ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಲೆನಾಡಿನ ಭಾಗದಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆ ಇರುವ ನಿಟ್ಟಿನಲ್ಲಿ 13ರಿಂದ 15 ಸಾವಿರಕ್ಕೊಂದು ಕ್ಷೇತ್ರ ಎಂಬ ನೀತಿಯಿಂದ ಕ್ಷೇತ್ರವಾರು ಅನುದಾನ ನೀಡಿಕೆಯಲ್ಲಿ ಅನ್ಯಾಯವಾಗುತ್ತದೆ ಎಂಬ ವಾದ ಕೇಳಿಬಂದಿದೆ.
ಜಿಲ್ಲಾ ಮತ್ತು ತಾಲೂಕು ಪಂಚಾಯ್ತಿ ಚುನಾವಣೆ ಕ್ಷೇತ್ರ ವಿಂಗಡನೆ ಅವೈಜ್ಞಾನಿಕವಾಗಿದೆ ಎಂದು ಹಿರೇಬಿಲಗುಂಜಿ ಗ್ರಾಪಂ ಮಾಜಿ ಅಧ್ಯಕ್ಷ ಶ್ರೀನಾಥ್ ನಾಡಿಗ್ ಆರೋಪಿಸಿದ್ದಾರೆ. ಈ ಹಿಂದೆ ಆನಂದಪುರ ಜಿಪಂ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಮತ್ತು ತಾಪಂ ತ್ಯಾಗರ್ತಿ ಕ್ಷೇತ್ರ ವ್ಯಾಪ್ತಿಯಲ್ಲಿದ್ದ ಹಿರೇಬಿಲಗುಂಜಿ ಗ್ರಾಪಂನ ಗ್ರಾಮಗಳನ್ನು ಕ್ಷೇತ್ರ ಮರುವಿಂಗಡನೆ ಅನುಸಾರ ಜಿಪಂಗೆ ಕೆಳದಿ ಕ್ಷೇತ್ರಕ್ಕೂ, ತಾಪಂಗೆ ನಾಡಕಲಸಿ ಕ್ಷೇತ್ರಕ್ಕೂ ಸೇರಿಸಿ ರಾಜ್ಯ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಇದು ಕ್ಷೇತ್ರದ ಅಭಿವೃದ್ಧಿಗೆ ಮಾರಕವಾಗಿದೆ ಎಂದು ತಿಳಿಸಿದ್ದಾರೆ. ನಿಯಮದ ಪ್ರಕಾರ ಪಂಚಾಯ್ತಿಗಳನ್ನು 2 ಕ್ಷೇತ್ರಗಳಿಗೆ ವಿಭಜಿಸುವಂತಿಲ್ಲ. ಆದರೆ ಹತ್ತಿರದ ಕ್ಷೇತ್ರವನ್ನು ಬಿಟ್ಟು ಸಂಪರ್ಕ ಸಾರಿಗೆ ಸೌಲಭ್ಯವಿಲ್ಲದ ಕ್ಷೇತ್ರಗಳಿಗೆ ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸುವುದು ಅವೈಜ್ಞಾನಿಕವಾಗಿದೆ. ಇದರ ಬಗ್ಗೆ ಅಧಿ ಕಾರಿಗಳು ಪುನರ್ ಪರಿಶೀಲನೆ ಮಾಡಿ ಜಿಪಂ ತಾಪಂ ಚುನಾವಣೆಗೆ ತ್ಯಾಗರ್ತಿ ಕ್ಷೇತ್ರಕ್ಕೆ ಹಿರೇಬಿಲಗುಂಜಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳನ್ನು ಸೇರಿಸಬೇಕು ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
Sagara: ಕರವೇ ತಾಲೂಕು ಅಧ್ಯಕ್ಷರ ಮನೆ ಮೇಲೆ ಅರಣ್ಯಾಧಿಕಾರಿಗಳಿಂದ ದಾಳಿ; ಜಿಂಕೆ ಮಾಂಸ ವಶ
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.