ಮೋಕ್ಷ ಕಲ್ಯಾಣದತ್ತ ಹೆಜ್ಜೆ ಹಾಕಿದರೆ ಬದುಕು ಸಾರ್ಥಕ

Team Udayavani, Apr 11, 2021, 6:13 PM IST

11-21

ಸಾಗರ: ಮನುಷ್ಯನಿಗೆ ಇಂದ್ರಿಯಗಳ ಕ್ಷಣಿಕ ಭೋಗ ಸುಖಕ್ಕಿಂತ ಮೋಕ್ಷ ಕಲ್ಯಾಣದಂತಹ ಶಾಶ್ವತ ಸುಖದತ್ತ ಹೆಜ್ಜೆ ಹಾಕಿದಾಗ ಸಾರ್ಥಕವಾಗುತ್ತದೆ. ಧರ್ಮಾಚರಣೆಯಿಂದ ಭಕ್ತಿ ಮತ್ತು ಶ್ರದ್ಧೆಯ ಮಾರ್ಗದಲ್ಲಿ ಕರ್ಮಗಳ ನಿವಾರಣೆಯಾಗುತ್ತದೆ ಎಂದು ಸೋಂದಾ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಲೂಕಿನ ಕರೂರು ಹೋಬಳಿಯ ಚನ್ನಗೊಂಡ ಗ್ರಾಪಂ ವ್ಯಾಪ್ತಿಯ ವಗೆಕೆರೆ ಪಾರ್ಶ್ವನಾಥ ಬಸದಿ ಆವರಣದಲ್ಲಿ ವಗೆಕೆರೆ ಪಾರ್ಶ್ವನಾಥ ದಿಗಂಬರ ಜೈನ್‌ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ಜೈನ್‌ಮಿಲನ್‌, ಸ್ವಸ್ತಿಶ್ರೀ ಮಹಿಳಾ ಸಮಾಜದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಕಲಿಕುಂಡ ಆರಾಧನೆ ಮತ್ತು ಸಾಮೂಹಿಕ ವ್ರತೋಪದೇಶ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಮನುಷ್ಯ ಜನ್ಮದಲ್ಲಿ ಜನಿಸಿದ ಪ್ರತಿಯೊಬ್ಬರೂ ಪರರ ಕಲ್ಯಾಣಕ್ಕಾಗಿ ಶ್ರಮಿಸುವ ಮೂಲಕ ಧರ್ಮಮಾರ್ಗ ಅನುಸರಿಸಬೇಕು. ಧರ್ಮ- ಕರ್ಮಗಳ ಜೊತೆಗೆ ಆಚರಣೆಯ ಕುರಿತು ಅರಿವು ಮೂಡಿದಾಗ ಪರಿಪೂರ್ಣ ವ್ಯಕ್ತಿಯಾಗಿ ಮಾರ್ಗದರ್ಶಕರಾಗಬಹುದು. ಸಮಾಜದಲ್ಲಿ ಸಂಘಟನಾ ಶಕ್ತಿಯಿಂದ ಕ್ರಿಯಾಶೀಲರಾಗಬೇಕು. ವಿಶಾಲ ಮನೋಭಾವನೆಯಿಂದ ವಿಸ್ತಾರಗೊಳ್ಳಬೇಕು. ಸಂಕುಚಿತಗೊಳ್ಳದೆ ಸಮಾಜಮುಖೀಯಾಗಿ= ನಾಯಕತ್ವದ ಗುಣಗಳಿಂದ ಧಾರ್ಮಿಕ, ಸಾಮಾಜಿಕ ಕ್ಷೇತ್ರದಲ್ಲಿ ಬೆಳೆಯಬೇಕು ಎಂದು ಕರೆ ನೀಡಿದರು.

20 ಮಕ್ಕಳಿಗೆ ವ್ರತೋಪದೇಶ ನೀಡಲಾಯಿತು. ಜನಪ್ರತಿನಿಧಿ ಗಳಾದ ನಾಗರಾಜ್‌ ಜೈನ್‌ ಮುತ್ತತ್ತಿ, ಪಾರ್ಶ್ವನಾಥ ಜೈನ್‌ ಕಟ್ಟಿನಕಾರು, ನಾಗರಾಜ್‌ ಜೈನ್‌ ಬೊಬ್ಬಿಗೆ, ಮೋಹನ್‌ಕುಮಾರ್‌ ಜೈನ್‌ ಹಾಳಸಸಿ, ಪದ್ಮರಾಜ್‌ ಜೈನ್‌ ಚಪ್ಪರಮನೆ, ರವಿಕುಮಾರ್‌ ಜೈನ್‌ ಕುಣಜೆ, ಪ್ರೇಮಾ, ಸಂತೋಷ್‌ ಜೈನ್‌ ಬಾನುಕೊಳ್ಳಿ, ಜ್ಯೋತಿ ಮೇಘರಾಜ್‌ ಜೈನ್‌ ಹೆಗ್ಗರಸೆ, ಸುಜಾತ ಗಿಡ್ಡಯ್ಯ ಜೈನ್‌ ಅವರನ್ನು ಅಭಿನಂದಿಸಿದರು.
ಕೆ.ಡಿ. ತೇಜಪ್ಪ ಜೈನ್‌ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಸುಭಾಶ್ಚಂದ್ರ ಜೈನ್‌ ಬಂಟ್ವಾಳ, ಭಾರತೀಯ ಜೈನ್‌ ಮಿಲನ್‌ ಕಾರ್ಯದರ್ಶಿ, ತಾಪಂ ಸದಸ್ಯೆ ಸವಿತಾ ದೇವರಾಜ್‌ ಜೈನ್‌, ಬಬಿತಾ ಪ್ರೇಮ್‌ಕುಮಾರ್‌ ಜೈನ್‌, ಬಿದರೂರು ಜೈನ ಬಸದಿ ಅಧ್ಯಕ್ಷ ವಜೇಯೇಂದ್ರ ಜೈನ್‌ ಚೊಕ್ಕೋಡು, ತಾಲೂಕು ಕಸಾಪ ಅಧ್ಯಕ್ಷ ಎಸ್‌.ವಿ. ಹಿತಕರ ಜೈನ್‌, ಪ್ರಧಾನ ಅರ್ಚಕ ವೃಷಭರಾಜ್‌ ಇಂದ್ರ ವಗೆಕೆರೆ, ಕೆ.ಎಸ್‌. ಓಂಕಾರ ಜೈನ್‌ ಕಂದೊಳ್ಳಿ, ಮಂಜಯ್ಯ ಜೈನ್‌ ಸಂಸೆ, ಎಂ.ಪಿ. ಲೋಕರಾಜ್‌ ಜೈನ್‌, ಶೋಭಾ ಜಟ್ಟಯ್ಯ ಜೈನ್‌ ಬಿಣಚಗೋಡು, ನಾಗರತ್ನ ಪಾಶ್ವನಾಥ ಜೈನ್‌, ಎಸ್‌.ಡಿ. ಧನಪಾಲ್‌ ಜೈನ್‌, ಜೈನ್‌ಮಿಲನ್‌ ವಗೆಕೆರೆ ಇತರರು ಇದ್ದರು.

ದೇವರಾಜ್‌ ಕುಪ್ಪಡಿ ಸ್ವಾಗತಿಸಿದರು. ಬಿ.ಸಿ. ತೇಜಪ್ಪ ಜೈನ್‌ ಬಣಚಗೋಡು ವಂದಿಸಿದರು. ಯಶೋಧರಾ ಇಂದ್ರ ನಿರ್ವಹಿಸಿದರು.

ಟಾಪ್ ನ್ಯೂಸ್

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Alert…! ವಿಮಾನಕ್ಕೆ ಬೆದರಿಕೆ ಹಾಕಿದ್ರೆ 1 ಕೋಟಿವರೆಗೆ ದಂಡ ತೆರಲು ಸಿದ್ಧರಾಗಿ!

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Donald Trump: ನೀವು ತೆರಿಗೆ ಹಾಕಿದರೆ ನಾವೂ ಹಾಕುತ್ತೇನೆ… ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

Earthquake…! ರೋಡ್‌ ರೋಲರ್‌ ಶಬ್ದವನ್ನು ಭೂಕಂಪ ಎಂದು ಗ್ರಹಿಸಿ ಕಿಟಕಿಯಿಂದ ಜಿಗಿದರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

9

Shivamogga: ಅಯೋಧ್ಯೆ ರೀತಿ ವ‌ಕ್ಫ್ ಹಗರಣಕ್ಕೂ ನ್ಯಾಯ ಸಿಕ್ಕೇ ಸಿಗುತ್ತದೆ; ಈಶ್ವರಪ್ಪ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

2-bntwl

Bantwala: ಚಾಲಕನ‌ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್

The owner of the betting app promoted by Bollywood actresses is Pakistani!

Betting App; ಬಾಲಿವುಡ್‌ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್‌‌ ಮಾಲಕ ಪಾಕಿಸ್ತಾನಿ!

Battery theft at Dharwad District Collector’s Office

Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Shiva Rajkumar: ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Shiva Rajkumar: ಚಿಕಿತ್ಸೆಗಾಗಿ ಅಮೆರಿಕದತ್ತ ಶಿವಣ್ಣ; ಚಿತ್ರರಂಗದ ಶುಭ ಹಾರೈಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.