ಮರಗಳ ಕಡಿತ: ಪರಿಸರವಾದಿಗಳ ವ್ಯಾಪಕ ಆಕ್ರೋಶ
Team Udayavani, Apr 13, 2021, 6:45 PM IST
ಸಾಗರ: ತಾಲೂಕಿನ ಖಂಡಿಕಾ ಗ್ರಾಪಂನ ಕೋಡ್ಸರದ ಸೊಪ್ಪಿನ ಬೆಟ್ಟದಲ್ಲಿ ಅರಣ್ಯ ಇಲಾಖೆ ಅಧಿ ಕಾರಿಗಳು ಹಾಗೂ ಅರಣ್ಯ ನಾಟ ಗುತ್ತಿಗೆದಾರರು ಶಾಮೀಲಾಗಿ, ಗ್ರಾಮದ ಮನೆಯ ಮೇಲೆ ಕಾಡಿನ ಮರಗಳು ಉರುಳಿ ಅಪಾಯವಾಗಬಹುದು ಎಂಬ ಕಾರಣವೊಡ್ಡಿ ಏಳು ಅಪರೂಪದ ಬೃಹತ್ ಮರಗಳನ್ನು ಕಡಿದುರುಳಿಸಿದ ಘಟನೆ ಸೋಮವಾರ ನಡೆದಿದೆ.
ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪರಿಸರ ಕಾರ್ಯಕರ್ತ, ಸ್ವಾನ್ ಆ್ಯಂಡ್ ಮ್ಯಾನ್ ಸಂಸ್ಥೆಯ ಕಾರ್ಯದರ್ಶಿ ಅಖೀಲೇಶ್ ಚಿಪ್ಪಳಿ ಪತ್ರಿಕೆಯೊಂದಿಗೆ ಮಾತನಾಡಿ, ಸ್ಥಳೀಯ ನಿವಾಸಿಗಳಿಂದ ಮನೆಗಳಿಗೆ ಅಪಾಯವಿದೆ ಎಂಬ ಮನವಿ ಪತ್ರವನ್ನು ನಾಟಾ ಗುತ್ತಿಗೆದಾರರು ಕೊಡಿಸುತ್ತಾರೆ. ಅಧಿ ಕಾರಿಗಳನ್ನು ಚೆನ್ನಾಗಿ ಉಪಚರಿಸಿ ಅನುಮತಿ ಪಡೆದುಕೊಳ್ಳಲಾಗುತ್ತದೆ. ನಂತರ ಈ ಮರಗಳ ಹರಾಜು ಪ್ರಕ್ರಿಯೆ ನಡೆಸಿ ಗುತ್ತಿಗೆದಾರರಿಗೆ ಅಧಿಕೃತವಾಗಿಯೇ ಕಾಡುಗಳ ನಾಶಕ್ಕೆ ಅನುಮತಿ ಕೊಡುವ ವ್ಯವಸ್ಥಿತ ತಂತ್ರ ಈಗ ಹೆಚ್ಚು ವ್ಯಾಪಕವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ನೂರಾರು ವರ್ಷ ಕಳೆದರೂ ಇಲ್ಲಿನ ಮರಗಳು ಮನೆಗಳಿಗೆ ಯಾವ ಹಾನಿಯನ್ನೂ ಉಂಟುಮಾಡುತ್ತಿರಲಿಲ್ಲ. ಒಂದು ದೊಡ್ಡ ಹಲಸು, ಮತ್ತೂಂದು ಸಣ್ಣಹಲಸು, ಬೃಹತ್ ಗಾತ್ರದ ತಾರೆ, ನಾಟ ಮೌಲ್ಯದಲ್ಲಿ ಬಂಗಾರದ ಬೆಲೆಯ ಬರಣಿಗೆ, ಹೊನ್ನೆ, ನೇರಲು, ಗೆಣಸು ಜಾತಿಯ ಐವತ್ತು ವರ್ಷ ದಾಟಿದ ಮರಗಳೂ ಇಲ್ಲಿದ್ದವು. ತಾಂತ್ರಿಕವಾಗಿ ನಾಲ್ಕು ಮರಗಳ ಕಡಿತಲೆಗೆ ಪರವಾನಗಿ ಪಡೆದು ಒಟ್ಟು ಏಳು ಮರಗಳನ್ನು ಉರುಳಿಸಲಾಗಿದೆ. ಸ್ಥಳೀಯ ಜನ ಕೂಡ ತಮ್ಮೂರಿನ ಪರಿಸರ ಹಾಳಾಗುತ್ತಿದ್ದರೂ ಈ ಕುರಿತು ಪ್ರತಿಭಟಿಸುವುದನ್ನು ಮರೆಯುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಪರಿದರ ಕಾರ್ಯಕರ್ತ ಜಯಪ್ರಕಾಶ್ ಗೋಳಿಕೊಪ್ಪ ಮಾತನಾಡಿ, ಮತ್ತೆ ಮತ್ತೆ ಇಂತಹ ಮರಗಳನ್ನು ಬೆಳೆಸುವುದು ಕಷ್ಟಸಾಧ್ಯ. ಅರಣ್ಯ ಇಲಾಖೆಯ ಅ ಧಿಕಾರಿಗಳು ಒಂದೆಡೆ ಅಮಾಯಕ ಅರಣ್ಯ ನಿವಾಸಿಗಳಿಗೆ ಕಾಡು ನಾಶ ಮಾಡುತ್ತಿದ್ದಾರೆ ಎಂದು ಕಿರುಕುಳ ಕೊಡುತ್ತಿದ್ದಾರೆ. ಇನ್ನೊಂದೆಡೆ ಅರಣ್ಯ ನಾಶಕ್ಕೆ ನೇರವಾಗಿ ಅವರು ಕುಮ್ಮಕ್ಕು ಕೊಡುತ್ತಿದ್ದಾರೆ. ತ್ಯಾಗರ್ತಿ ಭಾಗದ ಲ್ಯಾವಿಗೆರೆ ಮೊದಲಾದ ಭಾಗಗಳಲ್ಲಿ ಸಾರಾಸಗಟಾಗಿ ಮರಗಳನ್ನು ಕಡಿದು ಶುಂಠಿ ಬೇಸಾಯ ಮಾಡುವ ಕೆಲಸ ಕಳೆದ ಕೆಲವು ದಿನಗಳಿಂದ ಆಗುತ್ತಿದೆ ಎಂಬ ಮಾಹಿತಿಯಿದೆ. ನಾವು ಈಗಲೇ ಜಾಗೃತರಾಗದಿದ್ದರೆ ಮುಂದಿನ ಪೀಳಿಗೆಗೆ ಕಾಗದದ ಚೂರು ಎನ್ನಿಸಿಕೊಳ್ಳುವ ನೋಟುಗಳನ್ನು ಬಿಟ್ಟುಹೋಗಬಹುದೇ ವಿನಃ ಆರೋಗ್ಯ, ಮನಶ್ಯಾಂತಿ, ನೆಮ್ಮದಿಗಳನ್ನು ನಾಶ ಮಾಡಿ ಇಲ್ಲಿಯೇ ನರಕ ಸೃಷ್ಟಿ ಮಾಡುತ್ತಿದ್ದೇವೆ ಎಂಬ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದರು.
ಈ ಮರಗಳು ಮನೆಯಿಂದ ಸಾಕಷ್ಟು ದೂರದಲ್ಲಿದ್ದವು. ಧರೆ ಕೂಡ ತುಂಬಾ ಎತ್ತರದ್ದಲ್ಲ. ಈ ಮರಗಳು ನಾಟಕ್ಕೆ ಬರುತ್ತವೆ ಎಂಬುದು ಮುಖ್ಯವಾಗಿತ್ತೇ ವಿನಃ ಅಪಾಯಕರವಲ್ಲ ಎಂಬ ವರದಿಯನ್ನು ಪ್ರಾಮಾಣಿಕವಾಗಿರುವ ಯಾವುದೇ ಅರಣ್ಯ ಅಧಿ ಕಾರಿ ನೀಡುತ್ತಿದ್ದರು. ಹೆಚ್ಚೆಂದರೆ ಕೆಲವು ಮರಗಳ ರೆಂಬೆಗಳನ್ನು ಟ್ರಿಮ್ ಮಾಡಿದ್ದರೆ ಈ ಮರಗಳು ಇನ್ನೂ ನೂರು ವರ್ಷ ತಂಪು ನೀಡುತ್ತಿದ್ದವು ಎಂದು ಖೇದ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ರಸ್ತೆ ಬದಿಯಲ್ಲಿ ನವಜಾತ ಶಿಶು ಬಿಟ್ಟು ಹೋದ ತಾಯಿ!; ಆರೈಕೆ ಮಾಡಿದ ಸ್ಥಳೀಯರು
Elephant: ಬೆಳಗಾವಿಯ ಖಾನಾಪುರದಲ್ಲಿ ಸೆರೆ ಹಿಡಿದ ಗಂಡಾನೆ ಸಕ್ರೆಬೈಲು ಆನೆ ಬಿಡಾರಕ್ಕೆ
Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
MUST WATCH
ಹೊಸ ಸೇರ್ಪಡೆ
Yakshagana: ಮಾಂಬಾಡಿ ಸುಬ್ರಹ್ಮಣ್ಯ ಭಟ್ ಅವರ ಯಕ್ಷ ಸೇವೆಗೆ ಪಾರ್ತಿಸುಬ್ಬ ಪ್ರಶಸ್ತಿ ಗರಿ
Gundlupete: ಹುರುಳಿ ಕಾವಲು ಕಾಯುತ್ತಿದ್ದ ರೈತನ ಮೇಲೆ ಆನೆ ದಾಳಿ; ಕೈ ಕುತ್ತಿಗೆಗೆ ಗಾಯ
BIFF:16ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕಿಶೋರ್ ರಾಯಭಾರಿ
Uppinangady: ನೇಜಿಕಾರ್ ಅಕ್ಷರ ಕರಾವಳಿ ಕಟ್ಟಡ ಇನ್ನು ನೆನಪಷ್ಟೆ
EV ದ್ವಿಚಕ್ರ ವಾಹನ ಮಾರಾಟ: ಏಥರ್ ಸಂಸ್ಥೆ ಪಾಲು ಶೇ.25
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.