ಮುಂದುವರಿದ ಹಿಜಾಬ್ ವಿವಾದ
Team Udayavani, Feb 16, 2022, 2:42 PM IST
ಶಿವಮೊಗ್ಗ: ನ್ಯಾಯಾಲಯದ ಮಧ್ಯಂತರ ಆದೇಶದೊಂದಿಗೆಸೂಕ್ತ ಭದ್ರತೆಯ ನಡುವೆಯೇ ಜಿಲ್ಲೆಯಲ್ಲಿ ಪ್ರೌಢಶಾಲೆಗಳುಆರಂಭಗೊಂಡ ಎರಡನೇ ದಿನವಾದ ಮಂಗಳವಾರ ಕೂಡಶಿವಮೊಗ್ಗ ನಗರದಲ್ಲಿ ಹಿಜಾಬ್ ವಿವಾದ ಮುಂದುವರಿದಿದೆ.
ನಗರದ ಸೈನ್ಸ್ ಮೈದಾನದ ಬಳಿ ಇರುವ ಕರ್ನಾಟಕಪಬ್ಲಿಕ್ ಸ್ಕೂಲ್‌ನಲ್ಲಿ ಮಂಗಳವಾರ ಕೂಡ ಇಬ್ಬರುಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಯೇ ಪರೀಕ್ಷೆಗೆ ಹಾಜರಾಗಲು ಯತ್ನಿಸಿದರು. ಆದರೆ ಹಿಜಾಬ್ ಧರಿಸಿಯೇಪರೀಕ್ಷೆ ಬರೆಯಲು ಕೊಠಡಿಗೆ ಅವಕಾಶ ನೀಡುವುದಿಲ್ಲಎಂದು ಶಾಲಾ ಸಿಬ್ಬಂದಿ ಹೇಳಿದಾಗ, ಇಬ್ಬರೂ ವಿದ್ಯಾರ್ಥಿನಿಯರುಪರೀಕ್ಷೆ ಬರೆಯದೆ ಮನೆಗೆ ವಾಪಸ್ ಆದರು. ಒಂದುಹಂತದಲ್ಲಿ ಹಿಜಾಬ್ ಧರಿಸಿಯೇ ತಾವು ಪರೀಕ್ಷೆ ಬರೆಯಲುಅವಕಾಶ ನೀಡಬೇಕೆಂದು ಪಟ್ಟು ಹಿಡಿದರು.
ಅದಕ್ಕೂಅವಕಾಶ ನೀಡದಿದ್ದಾಗ ಪರೀಕ್ಷೆ ಬರೆಯದಿದ್ದರೂ ಪರವಾಗಿಲ್ಲ,ತಮಗೆ ಧರ್ಮವೇ ಮುಖ್ಯವೆಂದು ವಾದಿಸಿದ ಘಟನೆನಡೆಯಿತು.ಪ್ರೌಢಶಾಲೆಗಳು ಆರಂಭವಾದ ಎರಡನೇ ದಿನವಾದಮಂಗಳವಾರ ಕೂಡ ನಗರದ ಸೈನ್ಸ್ ಮೈದಾನದ ಬಳಿ ಇರುವಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಎಸ್ ಎಸ್ ಎಲ್ ಸಿ ಪೂರ್ವಸಿದ್ದತಾ ಪರೀಕ್ಷೆ ನಡೆಯುತ್ತಿತ್ತು. ಬೆಳಗ್ಗೆ ಅಲ್ಲಿ ಪರೀಕ್ಷೆಆರಂಭವಾಗುತ್ತಿದ್ದಂತೆ ಹಿಜಾಬ್ ಧರಿಸಿ ಬಂದಿದ್ದ ಇಬ್ಬರುವಿದ್ಯಾರ್ಥಿನಿಯರನ್ನು ಶಾಲೆ ಪ್ರವೇಶದ ಸಂದರ್ಭದಲ್ಲಿಶಿಕ್ಷಕರು ತಡೆದರು.
ಹಿಜಾಬ್ ತೆಗೆದು ಪರೀಕ್ಷೆಗೆ ಕೂರಲುತಿಳಿಸಿದಾಗ ವಿದ್ಯಾರ್ಥಿಗಳು ಇದಕ್ಕೆ ನಿರಾಕರಿಸಿದರು. ಪರೀಕ್ಷೆಬರೆಯದಿದ್ದರೂ ಪರವಾಗಿಲ್ಲ, ನಾವು ಹಿಜಾಬ್ ತೆಗೆಯುವುದೇಇಲ್ಲ ಎಂದು ವಿದ್ಯಾರ್ಥಿನಿಯರು-ಶಿಕ್ಷಕರ ನಡುವೆ ವಾದ-ವಿವಾದ ನಡೆಯಿತು. ಇಷ್ಟಾಗಿಯೂ ಶಾಲಾ ಸಿಬ್ಬಂದಿಅವಕಾಶ ಸಿಗುವುದಿಲ್ಲ ಎಂದು ಎಚ್ಚರಿಕೆ ನೀಡಿದಾಗ,ಅವರಿಬ್ಬರೂ ವಿದ್ಯಾರ್ಥಿನಿಯರು ಪೋಷಕರೊಂದಿಗೆ ಮನೆಗೆತೆರಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಜ. 22ರಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರಿಗೆ ಡಾಕ್ಟರೇಟ್ ಪ್ರದಾನ
ನಾನು ಪ್ರತಿಭಟನೆ, ಪಾದಯಾತ್ರೆ ಮಾಡಿದಷ್ಟು ಯಾವ ರಾಜಕಾರಣಿಯೂ ಮಾಡಿಲ್ಲ: ಕಿಮ್ಮನೆ
Sagara: ಅಭಿವೃದ್ಧಿ ಮಾಡಲಾಗದವರಿಂದ ಫ್ಲೆಕ್ಸ್ ಪ್ರಚಾರ… ಬೇಳೂರು ಕುರಿತು ಹಾಲಪ್ಪ ವ್ಯಂಗ್ಯ
Shimoga: ಸೆಂಟ್ರಲ್ ಜೈಲಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಖೈದಿ
ಹೊಳೆಹೊನ್ನೂರು ಸುತ್ತಮುತ್ತಲು ಅಡಿಕೆ ಕಳ್ಳತನ: ಮೂವರು ಆರೋಪಿಗಳ ಬಂಧನ
MUST WATCH
ಹೊಸ ಸೇರ್ಪಡೆ
ಬಿ.ವೈ.ವಿಜಯೇಂದ್ರ ಕಲೆಕ್ಷನ್ ಮಾಸ್ಟರ್, ಧೀಮಂತ ತಂದೆಯ ಜೈಲಿಗೆ ಕಳಿಸಿದ ಮಹಾನಾಯಕ: ಯತ್ನಾಳ್
Dubai: ಬಹುಮುಖ ಪ್ರತಿಭೆಯ ದುಬಾೖಯ ಶ್ರೀಖಾ ಶೆಣೈ
Ban: ಏರ್ ಶೋ ವೇಳೆ ಕಟ್ಟಡ ನಿರ್ಮಾಣಕ್ಕಾಗಿ ಕ್ರೇನ್ ಬಳಕೆ ನಿಷೇಧ: ಪಾಲಿಕೆ ಆದೇಶ
ಅರಿವಿಲ್ಲ ಎಂಬುದು ಕೀಳರಿಮೆಯಲ್ಲ-“ಒಂದು ಹಲವಾಗುತ್ತೆ, ಹಲವು ಒಂದಾಗುತ್ತೆ’: ದೇವಲೋಕದ ಕಥೆಗಳು
EV: ಇವಿ ಬಳಕೆಗೆ ಉತ್ತೇಜನ: ದೇಶದಲ್ಲೇ ನಂಬರ್ 1 ಸ್ಥಾನ ಪಡೆದ ಕರ್ನಾಟಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.