ಕಣವಿಯವರಿಂದ ಪರಿಪಕ್ವ ಸಾಹಿತ್ಯ ಕೃಷಿ
Team Udayavani, Feb 18, 2022, 3:58 PM IST
ಶಿವಮೊಗ್ಗ: ಉತ್ತರ ಕರ್ನಾಟಕದ ದೊಡ್ಡ ಸಾಹಿತ್ಯಪರಂಪರೆಯಲ್ಲಿ ಮೂಡಿಬಂದ ನಾಡೋಜ ಡಾ|ಚೆನ್ನವೀರ ಕಣವಿಯವರು ಪರಿಪಕ್ವವಾಗಿ ಸಾಹಿತ್ಯ ಕೃಷಿಮಾಡಿದವರು. ಧಾರವಾಡದ ಸಂಪದ್ಭರಿತ ಸಾಹಿತ್ಯವಾತಾವರಣ, ಅದರ ಒಡನಾಟದಲ್ಲಿ ಕನ್ನಡ ಸಾಹಿತ್ಯವನ್ನುಶ್ರೀಮಂತ ಗೊಳಿಸಿದವರು ಎಂದು ಪ್ರಾಧ್ಯಾಪಕಡಾ|ಮೇಟಿ ಮಲ್ಲಿಕಾರ್ಜುನ್ ಹೇಳಿದರು.
ಬುಧವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕಜಾನಪದ ಪರಿಷತ್ತು, ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕವೇದಿಕೆಯಿಂದ ನಿವೃತ್ತ ನೌಕರರ ಭವನದಲ್ಲಿ ಏರ್ಪಡಿಸಿದ್ದನಾಡೋಜ ಡಾ| ಚೆನ್ನವೀರ ಕಣವಿ ಅವರ ನುಡಿನಮನಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕಣವಿಯವರು ಎಪ್ಪತ್ತು ವರ್ಷ ಕಾವ್ಯ ಕೃಷಿಯಲ್ಲಿಅಗಾಧ ಅನುಭವ ಪಡೆದಿದ್ದರು. ಬದುಕಿನಲ್ಲಿ ಕಂಡದ್ದನ್ನುಹೊಸದಾಗಿ ನೋಡುವ ದೃಷ್ಟಿಕೋನ, ಅದರೊಂದಿಗಿನಸೂಕ್ಷ್ಮ ಸಂವೇದನೆ, ಸಮಚಿತ್ತದಿಂದ ಕನ್ನಡ ಕಾವ್ಯಪರಂಪರೆಯನ್ನು ಸಾಗರದಂತೆ ವಿಸ್ತಾರಗೊಳಿಸಿದವರುಎಂದು ವಿವರಿಸಿದರು.ಸಾಹಿತಿಗಳು, ನಿವೃತ್ತ ಪ್ರಾಂಶುಪಾಲ ಡಾ|ಎಚ್.ಟಿ.ಕೃಷ್ಣಮೂರ್ತಿ ಮಾತನಾಡಿ, ಚೆನ್ನವೀರ ಕಣವಿ ಹಾಗೂಹಿರಿಯ ಸಾಹಿತ್ಯಗಣ್ಯರಾದ ಭಾರ್ಗವಿ ನಾರಾಯಣಇಬ್ಬರೂ ತುಂಬು ಜೀವನ ಸಾಗಿಸಿದವರು.
ಮೃದುಮಾತಿನ ಕಣವಿ ಅವರು ಹಕ್ಕೊತ್ತಾಯ ಮಾಡುವುದಕ್ಕೆಹಿಂಜರಿದವರಲ್ಲ. ಡಾ| ಕಲುºರ್ಗಿ ಹತ್ಯೆ ವಿರುದ್ಧದಹೋರಾಟ ಸೇರಿದಂತೆ ಜನಪರ ಚಳುವಳಿಯಲ್ಲಿಸಾಮಾಜಿಕ ಕಾಳಜಿಯಿಂದ ಭಾಗವಹಿಸುತ್ತಿದ್ದರು ಎಂದುವಿವರಿಸಿದರು.ಕರ್ನಾಟಕ ಸಂಘದ ನಿರ್ದೇಶಕರು, ಸಾಹಿತಿಗಳಾದಡಾ| ಕೆ.ಎನ್. ಗುರುದತ್ತ ಮಾತನಾಡಿ, ಕಾವ್ಯದಲ್ಲಿವ್ಯಕ್ತಿ ಚಿತ್ರವನ್ನು ಚಿತ್ರಿಸುವಾಗ ಹದಿನಾಲ್ಕು ಸಾಲುಗಳಲ್ಲಿಚಮತ್ಕಾರ ಸೃಷ್ಟಿಸುವುದು ಅವರ ಸಾಮರ್ಥ್ಯಕ್ಕೆ ಹಿಡಿದಕನ್ನಡಿ ಎಂದರು. ತಾಲೂಕು ಕಸಾಪ ಅಧ್ಯಕ್ಷೆ ಮಹಾದೇವಿಮಾತನಾಡಿ, ಕಣವಿ ಅವರು ಸೌಜನ್ಯದ ಕವಿ ಎಂದುಬಣ್ಣಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ
Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ
MUST WATCH
ಹೊಸ ಸೇರ್ಪಡೆ
Manipal KMC Hospital: ಮಲ್ಪೆ ಬೀಚ್‌ನಲ್ಲಿ ಮಧುಮೇಹ ಜಾಗೃತಿ
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.