ಅಡಕೆಗೆ ಎಲೆಚುಕ್ಕಿ ರೋಗ: ವಿಜ್ಞಾನಿಗಳ ಪರಿಶೀಲನೆ


Team Udayavani, Oct 1, 2021, 7:37 PM IST

shivamogga news

ಹೊಸನಗರ: ಅಡಕೆ ಮರಗಳಲ್ಲಿ ಎಲೆಚುಕ್ಕಿರೋಗ ವ್ಯಾಪಕವಾಗಿ ಹರಡಲು ಈ ಭಾಗದ ಮಣ್ಣಿನಲ್ಲಿ ಪೊಟ್ಯಾಸ್‌ ಅಂಶ ಕಡಿಮೆ ಇರುವುದೇ ಕಾರಣ ಎಂದು ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯ(ಐಸಿಎಆರ್‌-ಸಿಪಿಸಿಆರ್‌ಐ) ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಲೂಕಿನ ನಿಟ್ಟೂರಿನಲ್ಲಿ ಶೋಧಾಫಾರ್ಮರ್ ಪ್ರೊಡ್ನೂಸರ್‌ ಕಂಪೆನಿಯಿಂದಆಯೋಜಿಸಿದ್ದ ಕಾರ್ಯಾಗಾರಕ್ಕೆ ಭೇಟಿನೀಡಿದ ಸಿಆರ್‌ಸಿಪಿಐ ವಿಜ್ಞಾನಿಗಳಾದ ಡಾ|ರವಿ ಭಟ್‌, ಡಾ| ವಿನಾಯಕ ಹೆಗಡೆ ನಿಟ್ಟೂರುಮತ್ತು ಶಂಕಣ್ಣ ಶಾನುಭೋಗ್‌ ಪ್ರದೇಶದಲ್ಲಿವಿವಿಧ ಅಡಕೆ ತೋಟಗಳ ಮಣ್ಣನ್ನುಪರಿಶೀಲಿಸಿದ ಬಳಿಕ ರೋಗ ಉಲ್ಬಣದ ಬಗ್ಗೆಮಾಹಿತಿ ನೀಡಿದರು.

ಗಾಳಿಯಲ್ಲಿ ಹರಡುತ್ತದೆ: ಎಲೆಚುಕ್ಕಿ ರೋಗದಸೋಂಕು ಗಾಳಿಯಲ್ಲಿ ಹರಡುವ ಕಾರಣವ್ಯಾಪಕವಾಗಿ ಹರಡುತ್ತಿದೆ. ಈ ಪ್ರದೇಶದಲ್ಲಿತೇವಾಂಶ ಹೆಚ್ಚಿರುವ ಕಾರಣ ಫಂಗಸ್‌ಹರಡುತ್ತಿದೆ. ಎಲ್ಲಾ ರೈತರು ಸಾಮೂಹಿಕವಾಗಿಶಿಲೀಂಧ್ರ ನಾಶಕ ಸಿಂಪಡಿಸಿದಲ್ಲಿ ಮಾತ್ರರೋಗ ತಡೆಗಟ್ಟುತ್ತದೆ. ಈ ರೋಗಒಮ್ಮೆಲೇ ಮರಗಳನ್ನು ಕೊಲ್ಲುವುದಿಲ್ಲ.ಹಂತ-ಹಂತವಾಗಿ ಸಾಯಿಸುತ್ತದೆ ಎಂದುವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ಇದೇ ಮೊದಲಲ್ಲ: ಎಲೆಚುಕ್ಕಿ ರೋಗಬಹಳ ಹಿಂದಿನಿಂದಲೂ ಇದೆ. 5 ವರ್ಷದಹಿಂದೆ ತ್ರಿಪುರಾಗೆ ಭೇಟಿ ನೀಡಿದಾಗ ಅಲ್ಲಿಇದಕ್ಕಿಂತಲೂ ಹೆಚ್ಚು ರೋಗದ ತೀವ್ರತೆಕಂಡು ಬಂದಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿಮಾತ್ರವಲ್ಲ ಚಿಕ್ಕಮಗಳೂರು ಜಿಲ್ಲೆಯಲ್ಲಿಕೂಡ ರೋಗ ಕಂಡು ಬಂದಿದೆ. ಅಲ್ಲದೆಈ ರೋಗ ಉಲ್ಬಣಗೊಳ್ಳಲು ಕಳೆದ ಹತ್ತುವರ್ಷದಲ್ಲಾದ ಬದಲಾವಣೆಯೂ ಕಾರಣ.ಇಲ್ಲಿಯ ಮಣ್ಣಿನಲ್ಲಿ ಪೊಟ್ಯಾಶ್‌ ಕಡಿಮೆ ಇದೆ.ರಂಜಕ ಹೆಚ್ಚಿದೆ. ಮಣ್ಣು ಅಕ್ಷಯ ಪಾತ್ರೆಯಲ್ಲ.ಪ್ರತಿ ಬೆಳೆ ಬರುತ್ತಿದ್ದಂತೆ ಮಣ್ಣಿನಲ್ಲಿ ಪೌಷ್ಟಿಕಾಂಶ ಕಡಿಮೆಯಾಗುತ್ತಿದೆ. ಯಾವ ಅಂಶಕಡಿಮೆಯಾಗುತ್ತದೆ. ಅದನ್ನು ನಿರಂತರವಾಗಿನೀಡುತ್ತಾ ಬರಬೇಕು ಎಂದರು.

ಮಾರ್ಗೋಪಾಯ: ಮೊದಲನೆಯದಾಗಿಮಣ್ಣು ಪರೀಕ್ಷೆ ಮಾಡಿಸಿ. ಮಣ್ಣಿನಲ್ಲಿರುವಅಂಶದ ಆಧಾರದ ಮೇಲೆ ಶಿಲೀಂಧ್ರ ನಾಶಕಸಿಂಪಡಿಸಬೇಕು. ಅಲ್ಲದೆ ಶಿಲೀಂಧ್ರ ನಾಶಕವನ್ನುಸಾಮೂಹಿಕವಾಗಿ ಸಿಂಪಡಿಸಬೇಕು.ತುರ್ತಾಗಿ ಪರಿಹಾರೋಪಾಯವನ್ನುಅಳವಡಿಸಿಕೊಂಡಲ್ಲಿ ಅಡಕೆ ಮರಗಳನ್ನುಉಳಿಸಿಕೊಳ್ಳಬಹುದು ಎಂದಿದ್ದಾರೆ.ಸರ್ಕಾರ ವಿಶೇಷ ಆಸಕ್ತಿ ತೋರಲಿ: ವಿಜ್ಞಾನಿಗಳುಮಹತ್ವದ ಸಲಹೆ ನೀಡಿದ್ದಾರೆ. ಇದುಸಾಕಾರಗೊಳ್ಳಲು ಸರ್ಕಾರ ವಿಶೇಷ ಆಸಕ್ತಿತೋರಬೇಕು. ಈ ಭಾಗದಲ್ಲಿ ಪೊಟ್ಯಾಶ್‌ಪೂರೈಕೆ ಕಡಿಮೆ ಇದೆ. ಇದನ್ನು ತುರ್ತಾಗಿಒದಗಿಸಬೇಕು ಎಂದು ಶೋಧಾ ಫಾರ್ಮರ್ಪ್ರೊಡ್ನೂಸರ್‌ ಕಂಪೆನಿ ಅಧ್ಯಕ್ಷ ಪುರುಷೋತ್ತಮಬೆಳ್ಳಕ್ಕ ಆಗ್ರಹಿಸಿದ್ದಾರೆ.

ಸರ್ಕಾರಕ್ಕೆ ವರದಿ: ತೋಟಗಾರಿಕಾಇಲಾಖೆಯ ಉಪ ನಿರ್ದೇಶಕ ಕೆ.ರಾಮಚಂದ್ರಮಾತನಾಡಿ, ಎಲೆಚುಕ್ಕಿ ರೋಗ ಪ್ರತಿವರ್ಷಇರುತ್ತದೆ. ಈ ಬಾರಿ ಉಲ½ಣಗೊಂಡಿರುವುದುಸಮಸ್ಯೆಗೆ ಕಾರಣವಾಗಿದೆ. ಈ ಹಿಂದೆ ನವಿಲೆಕೃಷಿ ವಿಜ್ಞಾನಿಗಳನ್ನು ಕರೆಸಿ ಅಧ್ಯಯನಮಾಡಿಸಲಾಗಿತ್ತು. ಇದೀಗ ಶೋಧಾಫಾರ್ಮರ್ ಪ್ರೊಡ್ನೂಸರ್‌ ಕಂಪೆನಿ ನೇತೃತ್ವದಲ್ಲಿಕೇಂದ್ರ ಸರ್ಕಾರದ ಅಡಿಯಲ್ಲಿರುವ ಸಂಸ್ಥೆಯವಿಜ್ಞಾನಿಗಳಿಂದ ಅಧ್ಯಯನ ಮಾಡಲಾಗಿದೆ.ಅವರು ನೀಡುವ ಮಾರ್ಗೋಪಾಯದಆಧಾರದ ಮೇಲೆ ಸರ್ಕಾರಕ್ಕೆ ಸಮಗ್ರ ವರದಿನೀಡಲಾಗುವುದು. ಶಾಸಕ ಹರತಾಳು ಹಾಲಪ್ಪವಿಶೇಷ ಮುತುವರ್ಜಿ ತೆಗೆದುಕೊಂಡಿದ್ದುಸರ್ಕಾರದ ಮಟ್ಟಕ್ಕೆ ಸಲ್ಲಿಸಲು ಅವರಗಮನಕ್ಕೂ ತರಲಾಗುವುದು ಎಂದರು.ತಾಲೂಕು ತೋಟಾಗಾರಿಕಾಅಧಿಕಾರಿ ಪುಟ್ಟನಾಯ್ಕ, ಪ್ರಮುಖರಾದಸತ್ಯನಾರಾಯಣ ಭಟ್‌, ಪರಮೇಶ್ವರ್‌,ದೇವರಾಜ್‌, ವಿನಾಯಕ ಚಕ್ಕಾರು ಇತರರುಇದ್ದರು

ಟಾಪ್ ನ್ಯೂಸ್

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

UDP-DC

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ: ಜ.10ರಿಂದ ವಾಹನ ಬಳಕೆಗೆ ಮುಕ್ತಗೊಳಿಸಿ: ಡಿಸಿ

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Udupi: ಗೀತಾರ್ಥ ಚಿಂತನೆ-129: ಓನರ್‌ಶಿಪ್‌ ಮೇಲೇ ಕಣ್ಣು!

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Belagavi ಅಧಿವೇಶನ ತೃಪ್ತಿ ತಂದಿಲ್ಲ: ಛಲವಾದಿ ಬೇಸರ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ

Lok Adalat: 39 ಲಕ್ಷ ಕೇಸ್‌ ಇತ್ಯರ್ಥ; ಪುನಃ ಒಂದಾದ 307 ದಂಪತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಜಗದೀಶ್ ಬಿಡುಗಡೆ

Renukaswamy Case: ಕೊನೆಗೂ ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾದ ಜಗದೀಶ್

sagara

Sagara: ಕಾಡಾನೆಗಳ ಹಾವಳಿ; ಲಕ್ಷಾಂತರ ರೂ. ಬೆಳೆ ನಷ್ಟ

19-thirthahalli

Thirthahalli: ನದಿಗೆ ಹಾರಿ ಕಾಲೇಜು ವಿದ್ಯಾರ್ಥಿ ಮೃತ್ಯು

1-edd

Shimoga: ಕಾಲೇಜಿನಲ್ಲಿ ಕುಸಿದು ಬಿದ್ದು 17 ವರ್ಷದ ವಿದ್ಯಾರ್ಥಿನಿ ಮೃ*ತ್ಯು

9

Shivamogga: ಅಯೋಧ್ಯೆ ರೀತಿ ವ‌ಕ್ಫ್ ಹಗರಣಕ್ಕೂ ನ್ಯಾಯ ಸಿಕ್ಕೇ ಸಿಗುತ್ತದೆ; ಈಶ್ವರಪ್ಪ

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

hdd

Government: ಮೀಸಲಾತಿ ಪರಾಮರ್ಶೆ ಮಾಜಿ ಪಿಎಂ ಸಲಹೆ ಚಿಂತನಾರ್ಹ

Kallabete

Udupi: ಕಳ್ಳಬೇಟೆ ನಿಗ್ರಹ ಸಿಬಂದಿಗೆ ಕತ್ತಿ ಕೋಲುಗಳೇ ಆಯುಧ!

Fake-Gold

Mangaluru: ನಕಲಿ ಚಿನ್ನ ಅಡವಿಟ್ಟು ವಂಚನೆ; 7ನೇ ಸಲ ಬಂದಾಗ ಸಿಕ್ಕಿಬಿದ್ದ ಮಹಿಳೆ!

Suside-Boy

PaduBidri: ಬಸ್‌ ಢಿಕ್ಕಿ: ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.