ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಕ್ಕೆ ಸರ್ಕಾರದ ಆದ್ಯತೆ
Team Udayavani, Oct 7, 2021, 8:57 PM IST
ಶಿವಮೊಗ್ಗ: ವಿಜ್ಞಾನ ಮತ್ತು ತಂತ್ರಜ್ಞಾನ ಆವಿಷ್ಕಾರಕ್ಕೆಕೇಂದ್ರ ಮತ್ತು ರಾಜ್ಯ ಸರ್ಕಾರ ಹೆಚ್ಚಿನ ಆದ್ಯತೆನೀಡುತ್ತಿವೆ ಎಂದು ಉನ್ನತ ಶಿಕ್ಷಣ ಸಚಿವ ಡಾ|ಸಿ.ಎನ್. ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದ ವೀರಭದ್ರೇಶ್ವರ ಚಿತ್ರಮಂದಿರದಲ್ಲಿಬಿಜೆಪಿ ಜಿಲ್ಲಾ ಘಟಕ ಸೇವೆ ಮತ್ತು ಸಮರ್ಪಣಾಅಭಿಯಾನದಡಿ ಹಮ್ಮಿಕೊಂಡಿದ್ದ ನವಭಾರತಮೇಳದಲ್ಲಿ ಬುಧವಾರ ನಡೆದ ಭಾರತದಲ್ಲಿವಿಜ್ಞಾನ-ತಂತ್ರಜ್ಞಾನ ವಿಷಯದ ಸಂವಾದದಲ್ಲಿಅವರು ಮಾತನಾಡಿದರು.
ವಿಶ್ವದಲ್ಲೇ ಮಾಹಿತಿ ತಂತ್ರಜ್ಞಾನದಲ್ಲಿ ಭಾರತನಾಗಾಲೋಟದಿಂದ ಮುಂದೆ ಸಾಗಿದೆ.ವಿಜ್ಞಾನ ಮತ್ತು ತಂತ್ರಜ್ಞಾನ, ಬಯೋಟೆಕ್,ಬಯೋಮೆಡಿಕಲ್, ಏರೋಟೆಕ್ ಸೇರಿದಂತೆಎಲ್ಲ ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದಲ್ಲೇ ಭಾರತಮುಂದುವರೆದ ದೇಶವಾಗಿದ್ದು, ದೇಶದಲ್ಲಿಕರ್ನಾಟಕ ಮೊದಲ ಸ್ಥಾನದಲ್ಲಿದೆ.
ತಂತ್ರಜ್ಞಾನಮಾಹಿತಿಗಾಗಿಯೇ ರಾಜ್ಯ ಸರ್ಕಾರ ಎಲಿವೇಟ್‌ಸ್ಕೀಂ ಅಳವಡಿಸಿದ್ದು ಎಲ್ಲ ಸಂಶೋಧನಾವಿದ್ಯಾರ್ಥಿಗಳಿಗೂ ತಾವು ಮಾಡಿದ ಸಾಧನೆಯನ್ನುಬೆಳಕಿಗೆ ತರಲು ಇದು ಸಹಾಯಕವಾಗಿದೆ. ಇಡೀವಿಶ್ವದಲ್ಲೇ ಸ್ಟಾರ್ಟ್ ಅಪ್ ನಲ್ಲಿ ಭಾರತ ಮೂರನೇಸ್ಥಾನದಲ್ಲಿದ್ದು, ನಮ್ಮ ಆರ್ಥಿಕ ವ್ಯವಸ್ಥೆಯ ಮೂರನೇಒಂದು ಭಾಗ ಆದಾಯ ತಂತ್ರಜ್ಞಾನ ಕ್ಷೇತ್ರದಿಂದಲಭ್ಯವಾಗಿದೆ.
ರಾಜ್ಯದ ಒಟ್ಟಾರೆ ಜಿಡಿಪಿಯಲ್ಲಿ 250ಮಿಲಿಯನ್ ಡಾಲರ್ ತಂತ್ರಜ್ಞಾನ ಕ್ಷೇತ್ರದಿಂದಲೇಬರುತ್ತಿದೆ ಎಂದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಹಿತಿತಂತ್ರಜ್ಞಾನದ ಆವಿಷ್ಕಾರ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದ್ದು, ಎಲ್ಲ ಕ್ಷೇತ್ರಗಳೂ ಮುಂದಿನ ದಿನಗಳಲ್ಲಿಜನಸಾಮಾನ್ಯರಿಗೆ ತಲುಪುವಂತೆ ಮಾಡಲುಸರ್ಕಾರ ಕ್ರಮಕೈಗೊಂಡಿದೆ.
ಸಂಶೋಧನಾವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು 20 ಸಾವಿರ ಸ್ಕಾಲರ್‌ಶಿಪ್ ನೀಡುತ್ತಿದ್ದು, ಹಿರಿಯ, ಕಿರಿಯ ವಿಜ್ಞಾನಿಗಳಿಗೆವಿಶೇಷ ಪ್ರೋತ್ಸಾಹಧನ ನೀಡಿ ಉತ್ತೇಜಿಸಲಾಗುತ್ತಿದೆಎಂದರು.ನೂತನ ರಾಷ್ಟ್ರೀಯ ಶಿಕ್ಷಣ ನೀತಿಯನ್ನುಈಗಾಗಲೇ ಪ್ರಕಟಿಸಲಾಗಿದ್ದು, ನರ್ಸರಿಯಿಂದಲೇಮಗುವಿನಲ್ಲಿ ಸಂಶೋಧನೆಯ ಆಸಕ್ತಿಬೆಳೆಸಲಾಗುತ್ತಿದೆ.
ಇದನ್ನೂ ಓದಿ:ಮೂಢನಂಬಿಕೆ ಮೀರಿ ಚಾಮರಾಜನಗರಕ್ಕೆ ಬಂದ ಬೊಮ್ಮಾಯಿ
ವಿದ್ಯಾರ್ಥಿಯ ಆಸಕ್ತಿ ವಿಷಯದಲ್ಲಿಆತನಿಗೆ ಪ್ರೋತ್ಸಾಹ ನೀಡಲಾಗುತ್ತಿದ್ದು, ಶಿಕ್ಷಣದಲ್ಲಿಸುಧಾರಣೆ ತರುವ ಮೂಲಕ ಗುಣಮಟ್ಟದಸಂಸ್ಕೃತಿಯನ್ನು ಬೋಧಿ ಸಲಾಗುತ್ತಿದೆ ಎಂದರು.
ತಾವು ಕೈಗೊಳ್ಳುವ ವೃತ್ತಿಯ ಮೂಲಕ ಸಮಾಜಕ್ಕೆಏನಾದರೂ ಕೊಡುಗೆ ನೀಡುವಂತಾಗಬೇಕು. ತನು,ಮನ ಸರ್ಮಪಿಸಿ ಕೈಗೊಂಡ ವೃತ್ತಿ ಲಾಭದಾಯಕವಾಗಿರಬೇಕು. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತುತಂತ್ರಜ್ಞಾನದ ಆವಿಷ್ಕಾರಕ್ಕೆ ಸರ್ಕಾರ ವಿಶೇಷಯೋಜನೆಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ಬಿಜೆಪಿಸಮಾಲೋಚನೆ ಹಮ್ಮಿಕೊಂಡು ಯುವಕರಲ್ಲಿಜಾಗೃತಿ ಮೂಡಿಸುತ್ತಿದೆ ಎಂದರು.
ಬಿಜಿಪಿ ಯುವ ಮೋರ್ಚಾ ರಾಜ್ಯಕಾರ್ಯಕಾರಿಣಿ ಸದಸ್ಯ ಅನೂಪ್ ಕುಮಾರ್‌ಎಸ್.ಬಿ. ಅಧ್ಯಕ್ಷತೆ ವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.