ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧನ
Team Udayavani, Oct 22, 2021, 9:32 PM IST
ಶಿವಮೊಗ್ಗ: ಜಿಲ್ಲೆಯ ಉದ್ಯಮಿಯೊಬ್ಬರಿಗೆ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ ಪ್ರಕರಣದಲ್ಲಿ ಶಂಕಿತ ಉಗ್ರನ ಪತ್ನಿಯನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಭಟ್ಕಳದ ಶಂಕಿತ ಉಗ್ರ ಸದ್ದಾಂ ಹುಸೇನ್ ಪತ್ನಿ ಶಾಹಿರಾ ಬಂಧಿತೆ.
ಪ್ರಕರಣದ ಹಿನ್ನೆಲೆ
ಶಿವಮೊಗ್ಗದ ಉದ್ಯಮಿ ಶರತ್ ಕುಮಾರ್ ಎಂಬುವರಿಗೆ ಜುಲೈನಲ್ಲಿ ಇಂಟರ್‌ನೆಟ್ ಕರೆ ಮೂಲಕ ನಾನು ಹೆಬ್ಬೆಟ್ಟು ಮಂಜ, ನನಗೆ 5 ಲಕ್ಷ ಹಣ ಕೊಡಬೇಕು ಎಂದು ತಿಳಿಸಿದ್ದಾನೆ. ಹಣ ಇಲ್ಲ ಎಂದಾಗ ನಿನ್ನ ನಂಬರ್ ಸಿಕ್ಕಿದೆ ಎಂದರೆ ನಿನ್ನ ಬಳಿ ಬರುವುದು ಕಷ್ಟವೇನಲ್ಲ. ಮನೆ ಹತ್ತಿರ ಹುಡುಗರನ್ನು ಕಳಿಸುತ್ತೇನೆ. ನಾನು ಏನೆಂದು ನಿನಗೆ ಸ್ಯಾಂಪಲ್ ತೋರಿಸುತ್ತೇನೆ ಎಂದು ಬೆದರಿಕೆ ಹಾಕಿದ ಹಿನ್ನೆಲೆ ಭಯದಿಂದ ಅವರು ಕೊಟ್ಟ ಅಕೌಂಟ್ ನಂಬರ್‌ಗೆ 50 ಸಾವಿರ ಹಣ ಜಮಾ ಮಾಡಿದ್ದರು.
ನಂತರ ಕೂಡ ಬೆದರಿಕೆ ಕರೆಗಳು ಮುಂದುವರೆದಿದ್ದವು. ದಿಕ್ಕು ತೋಚದೆ ಸೈಬರ್ ಠಾಣೆಗೆ ದೂರು ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರಿಗೆ ಅದೊಂದು ಮಹಿಳೆಯ ಅಕೌಂಟ್ ಎಂಬುವುದು ತಿಳಿದುಬಂದಿದೆ.
ಹೆಚ್ಚಿನ ವಿಚಾರಣೆ ಮಾಡಿದಾಗ ಆಕೆ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಬಂಧಿಯಾಗಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸದ್ದಾಂ ಹುಸೇನ್ ಪತ್ನಿ ಎಂದು ತಿಳಿದು ಬಂದಿದೆ. ಶಿವಮೊಗ್ಗ ಪೊಲೀಸರು ಆಕೆಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಕರೆ ಬಂದಿದ್ದು ಹೇಗೆ?
ಸದ್ದಾಂ ಹುಸೇನ್ ಜೈಲಿನಲ್ಲಿ ಇದ್ದರೂ ಕರೆ ಬಂದಿದ್ದು ಹೇಗೆ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ. ಅಲ್ಲದೇ ಆತ ಹೆಬ್ಬೆಟ್ಟು ಮಂಜ ಹೆಸರು ಬಳಸಿದ್ದು ಯಾಕೆ ಎಂದು ಸಹ ತನಿಖೆ ನಡೆಯುತ್ತಿದೆ. ಮೂಲಗಳ ಪ್ರಕಾರ ಆ ಕರೆಗಳು ಜೈಲಿನಿಂದಲೇ ಬಂದಿವೆ ಎನ್ನಲಾಗಿದೆ. ತುಮಕೂರಿನ ರೌಡಿಶೀಟರ್ ನೆರವಿನಿಂದ ಜೈಲಿನಿಂದಲೇ ಕರೆ ಮಾಡಿ ಪತ್ನಿ ಅಕೌಂಟ್ ಹಣ ಹಾಕಿಸಿದ್ದಾನೆ.
ಬೆಂಗಳೂರಿನಿಂದ ಕರೆಗಳು ಬಂದಿರುವ ಹಿಂದೆ ಬೃಹತ್ ಜಾಲವಿದ್ದು ಅದನ್ನು ಪೊಲೀಸರು ಕೂಲಂಕುಷವಾಗಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಕೊವಿಡ್ 3ನೇ ಡೋಸ್ ಕೊಡುವ ಪ್ರಸ್ತಾಪ ಇಲ್ಲ : ಡಾ. ಅಶ್ವತ್ಥ್ ನಾರಾಯಣ
ಸದ್ದಾಂ ಹುಸೇನ್ ಯಾರು?
ಸದ್ದಾಂ ಹುಸೇನ್ 2015ರಲ್ಲಿ ಬೆಂಗಳೂರಿನಲ್ಲಿ ನಡೆದ ಪುಲಕೇಶಿ ನಗರ, ಚಿನ್ನಸ್ವಾಮಿ ಕ್ರೀಡಾಂಗಣ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಬಂಧಿಯಾಗಿರುವ ಅರೋಪಿ. ಈತ ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ. 35 ವರ್ಷಗಳಿಂದ ಭಟ್ಕಳದ ಜಾಲಿನಗರ ವ್ಯಾಪ್ತಿಯಲ್ಲಿ ಕುಟುಂಬದ ಜತೆ ವಾಸವಾಗಿದ್ದ. ಸ್ಥಳೀಯವಾಗಿ ಗುಜರಿ ವ್ಯಾಪಾರಿಯಾಗಿದ್ದ ಈತ ಬಾಂಬ್ ತಯಾರಿಕೆಗೆ ಬೇಕಾಗಿದ್ದ ಜಿಲೆಟಿನ್‌ಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪವಿದೆ.
ಇದೇ ಆರೋಪದ ಮೇಲೆ 2015ರಲ್ಲಿ ಭಟ್ಕಳದಲ್ಲಿ ಈತನನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಲಾಗಿತ್ತು. ಸದ್ಯ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಲಿದ್ದಾನೆ. ಈತನಿಗೆ ಪತ್ನಿ ಸಾಹಿರಾ ಸೇರಿ ಮೂರು ಜನ ಮಕ್ಕಳು, ತಂದೆ, ತಾಯಿ, ತಂಗಿ ಕೂಡ ಭಟ್ಕಳದಲ್ಲೇ ವಾಸವಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.