ಸಮಸ್ಯೆಗಳಿಗೆ ಪರಿಹಾರ ಒದಗಿಸಿ: ಡಿಸಿ ಶಿವಕುಮಾರ್‌


Team Udayavani, Oct 29, 2021, 1:57 PM IST

shivamogga news

ಶಿವಮೊಗ್ಗ: ಪರಿಶಿಷ್ಟ ಜಾತಿ ಹಾಗೂ ವರ್ಗದವರಸವಲತ್ತುಗಳು ಮತ್ತು ಯಾವುದೇ ರೀತಿಯಸಮಸ್ಯೆಗಳಿಗೆ ಸಂಬಂಧಿತ ಇಲಾಖೆಗಳುತ್ವರಿತವಾಗಿ ಸ್ಪಂದಿಸಿ, ಸಮಸ್ಯೆಗಳಿಗೆ ಸೂಕ್ತಪರಿಹಾರ ಒದಗಿಸಬೇಕು ಎಂದು ಜಿಲ್ಲಾಧಿಕಾರಿಕೆ.ಬಿ. ಶಿವಕುಮಾರ್‌ ಹೇಳಿದರು.ಬುಧವಾರ ಜಿಲ್ಲಾಡಳಿತ ಕಚೇರಿಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ (ದೌರ್ಜನ್ಯಪ್ರತಿಬಂಧ) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆಕೂಡ ನಿಯಮಾನುಸಾರವಾಗಿ ನಿಗದಿತ ಅವಧಿಯಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಪರಿಹಾರ ನೀಡಬೇಕೆಂದರು.ಕಳೆದ ಸಮಿತಿ ಸಭೆಯ ಅನುಪಾಲನಾ ವರದಿಚರ್ಚೆ ವೇಳೆ ಅವರು ಮಾತನಾಡಿ ಜುಲೈನಲ್ಲಿನಡೆದ ಸಭೆಯಲ್ಲಿ ಸಮಿತಿ ಸದಸ್ಯರು ಸಭೆಯಗಮನಕ್ಕೆ ತಂದ ಪರಿಶಿಷ್ಟ ಜಾತಿ, ವರ್ಗದವರ ಸಮಸ್ಯೆಗಳು, ದೌರ್ಜನ್ಯ ಪ್ರಕರಣಕ್ಕೆಸಂಬಂಧಿಸಿದಂತೆ ಸೂಕ್ತ ಕ್ರಮ ವಹಿಸಲಾಗಿದೆ.

ಕೆಲವು ಪ್ರಕರಣಗಳು ಚಾರ್ಚ್‌ಶೀಟ್‌, ತನಿಖೆಹಂತದಲ್ಲಿವೆ ಎಂದರು.ಸಮಿತಿ ಸದಸ್ಯರಾದ ಜಗದೀಶ್‌ ಅವರುಮಾತನಾಡಿ, ಶಿವಮೊಗ್ಗ ತಾಲೂಕು ಹಸೂಡಿಗ್ರಾಮದಲ್ಲಿ ಸ್ಮಶಾನ ಭೂಮಿಗಾಗಿ ಕಳೆದಸಭೆಯಲ್ಲಿ ಮನವಿ ಮಾಡಲಾಗಿದೆ. ಅಲ್ಲಿಸೂಕ್ತ ಸರ್ಕಾರಿ ಜಮೀನು ಇಲ್ಲವಾಗಿದ್ದುಖಾಸಗಿ ಜಮೀನನ್ನು ಸ್ಮಶಾನದ ಉದ್ದೇಶಕ್ಕೆಕ್ರಮಕ್ಕೆ ನೀಡಲು ಮುಂದೆ ಬಂದಲ್ಲಿ ಕ್ರಮವಹಿಸಲಾಗುವುದು ಎಂದು ತಹಶೀಲ್ದಾರರುತಿಳಿಸಿದ್ದಾರೆ.

ಆದರೆ ಹಸೂಡಿ ಗ್ರಾಮದಿಂದ2 ಕಿ.ಮೀ ದೂರದಲ್ಲಿ ಗ್ರಾಮಾಠಾಣಾಇದ್ದು ಅದನ್ನು ಸಂಪೂರ್ಣವಾಗಿ ಒತ್ತುವರಿಮಾಡಿಕೊಳ್ಳಲಾಗಿದೆ. ಅದನ್ನು ತೆರವುಗೊಳಿಸಿಸ್ಮಶಾನದ ಉದ್ದೇಶಕ್ಕಾಗಿ ನೀಡುವಂತೆ ಮನವಿಮಾಡಿದರು.ಸರ್ಕಾರದಿಂದ ನಿರ್ಮಾಣವಾಗುತ್ತಿರುವವಸತಿ ಯೋಜನೆಗಳಿಗೆ, ಜನಸಾಮಾನ್ಯರಿಗೆಮರಳು ಕೊರತೆಯಾಗುತ್ತಿದೆ. ಈ ಬಗ್ಗೆ ಜಿಪಂಸಿಇಒ ಮತ್ತು ಡಿಸಿ ಅವರು ಪರಿಶೀಲನೆ ನಡೆಸಿಮರಳು ಲಭಿಸುವಂತೆಕ್ರಮ ಜರುಗಿಸಬೇಕೆಂದುಒತ್ತಾಯಿಸಿದರು.

ಕೋವಿಡ್‌ನಿಂದ ಮƒತಪಟ್ಟ ಪರಿಶಿಷ್ಟಜಾತಿ ಹಾಗೂ ವರ್ಗದ ಕುಟುಂಬದಅವಲಂಬಿತರಿಗೆ ಡಾ| ಬಿ.ಆರ್‌.ಅಂಬೇಡ್ಕರ್‌ನಿಗಮದ ವತಿಯಿಂದ ಸಹಾಯಧನಕ್ಕಾಗಿಹಲವು ಅರ್ಜಿಗಳನ್ನು ನಿಗಮಕ್ಕೆ ಕಳುಹಿಸಿದ್ದೇವೆ.ಇದೀಗ ಹರಮಘಟ್ಟ, ಬೀರನಹಳ್ಳಿ ಹಸೂಡಿಯವೀರಭದ್ರ ಕಾಲೋನಿಯ ಸಂತ್ರಸ್ತರಿಗೆ ಸಂಬಂಸಿದ ಅರ್ಜಿಗಳನ್ನು ನೀಡಿದ್ದು ಶೀಘ್ರವಾಗಿ ವಿಲೇಮಾಡುವಂತೆ ಹಾಗೂ ಶಿವಮೊಗ್ಗ ತಾಲೂಕಿನಸದಾಶಿವಪುರ ಹಕ್ಕಿಪಿಕ್ಕಿ ಕ್ಯಾಂಪ್‌ ಬುಡಕಟ್ಟುಸಮುದಾಯದವರಿಗೆ ವಸತಿ ಸೌಕರ್ಯಕಲ್ಪಿಸುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ ಹಸೂಡಿಗ್ರಾಮ ಸ್ಮಶಾನಕ್ಕಾಗಿ ಗ್ರಾಮಠಾಣಾ ಭೇಟಿ ನೀಡಿಪರಿಶೀಲಿಸಿ ಸೂಕ್ತ ಕ್ರಮ ವಹಿಸಲಾಗುವುದು.ಮರಳು ನೀಡಲು ನಿರಾಕರಿಸುತ್ತಿರುವ ಬಗ್ಗೆನಿಖರವಾಗಿತಿಳಿಸಿದಲ್ಲಿಕ್ರಮವಹಿಸಲಾಗುವುದು.ಅಂಬೇಡ್ಕರ್‌ ನಿಗಮದಡಿ ಅರ್ಜಿಗಳನ್ನು ಶೀಘ್ರವಿಲೇವಾರಿಗೆ ಅಧಿಕಾರಿಗೆ ಸೂಚಿಸಿದ ಅವರುಹಕ್ಕಿಪಿಕ್ಕಿ ವಸತಿ ಸೌಕರ್ಯದ ಬಗ್ಗೆ ಕೂಡ ಸೂಕ್ತಕ್ರಮ ವಹಿಸುವುದಾಗಿ ತಿಳಿಸಿದರು.
ಶಿಕಾರಿಪುರ ತಾಲೂಕು ಉಡುಗಣಿಗ್ರಾಮದಲ್ಲಿ ಅರಣ್ಯ ಹಕ್ಕು ಕಾಯ್ದೆಯಡಿಅರಣ್ಯ ಭೂಮಿ ಮಂಜೂರು ಮಾಡಿದ್ದರೂಅರಣ್ಯ ಇಲಾಖೆ ಅಧಿಕಾರಿಗಳು ಪ.ಜಾತಿಗೆಸೇರಿದ ರೈತರ ಅಡಕೆ ಮತ್ತು ಬಾಳೆ ಗಿಡಗಳನ್ನುಕಿತ್ತುಹಾಕಿರುವ ಬಗ್ಗೆ ಜಗದೀಶ್‌ ಅವರಪ್ರಸ್ತಾಪದ ಬಗ್ಗೆ ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿಗಳುಅರಣ್ಯ ಇಲಾಖಾ ಅಧಿಕಾರಿಗಳೊಂದಿಗೆ ತೆರಳಿಪರಿಶೀಲನೆ ನಡೆಸಿದ್ದು, ಅಲ್ಲಿ ಸರ್ವೇ ಕಾರ್ಯನಡೆಯಬೇಕಿದೆ. ಸರ್ವೇ ವರದಿ ಬಂದ ನಂತರಈ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಸಮಿತಿ ಸದಸ್ಯರಾದ ನಾಗರಾಜ್‌ ಮಾತನಾಡಿ,ಶಿವಮೊಗ್ಗ ತಾಲ್ಲೂಕು ಮಂಜರಿಕೊಪ್ಪ ಸಿರಿಗೆರೆವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಕೊರಮ ಜನಾಂಗಕ್ಕೆಸೇರಿದ ಪರುಶುರಾಮ್‌ ಎಂಬವವರಿಗೆ ವಿದ್ಯುತ್‌ಸಂಪರ್ಕ ನೀಡಲು ಪಿಡಿಒ ಅಧಿಕಾರಿಗಳುನಿರಾಕ್ಷೇಪಣಾ ಪತ್ರ ನೀಡಿರುವುದಿಲ್ಲ.ಅಕ್ಕಪಕ್ಕದವರಿಗೆ ನೀಡಿದ್ದುಇವರಿಗೆ ಸಹ ನೀಡಲುಕ್ರಮ ವಹಿಸುವಂತೆ ಆಗ್ರಹಿಸಿದರು. ಜಿ.ಪಂಸಿಇಒ, ಈ ಕುರಿತು ತಾವೇ ಖುದ್ದು ಪರಿಶೀಲಿಸಿಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಶಿವಮೊಗ್ಗ ಮತ್ತು ಭದ್ರಾವತಿತಾಲೂಕುಗಳಲ್ಲಿ ಪರಿಶಿಷ್ಟ ಜಾತಿ ಅಲ್ಲದವರುನಕಲಿ ದಾಖಲಿ ಸƒಷ್ಟಿಸಿ ಪ.ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದು ಕಂಡು ಬಂದಿದ್ದುಈ ಬಗ್ಗೆ ಶಿಸ್ತಿನ ಕ್ರಮ ಜರುಗಿಸಬೇಕು. ಹಾಗೂಭದ್ರಾವತಿ ತಾಲೂಕಿನ ಕಲ್ಲೇಪುರದಲ್ಲಿ ಆರ್‌ಎಫ್‌ಒಗಳು ಜಮೀನಿಗೆ ಸಂಬಂಧಿಸಿದಂತೆ ದಲಿತರಮೇಲೆ ಎಫ್‌ಐಆರ್‌ ದಾಖಲಿಸಿದ್ದು, ಈ ಬಗ್ಗೆಸೂಕ್ತ ಪರಿಶೀಲನೆ ನಡೆಸಿ ದಲಿತರಿಗೆ ನ್ಯಾಯದೊರಕಿಸಿಕೊಡಬೇಕು ಎಂದು ನಾಗರಾಜ್‌ಆಗ್ರಹಿಸಿದರು. ಸಮಿತಿ ಸದಸ್ಯರೋರ್ವರುಸೊರಬ ತಾಲೂಕಿನ ಬೆನ್ನೂರು ಗ್ರಾಪಂನಲ್ಲಿಗೋಮಾಳ ಇದ್ದು ಇಲ್ಲಿ ಸ್ಮಶಾನಕ್ಕೆ ಅವಕಾಶಮಾಡಿಕೊಡಬೇಕೆಂದರು.

ಜಿಲ್ಲಾಧಿಕಾರಿಗಳುಪ್ರತಿಕ್ರಿಯಿಸಿ ಗೋಮಾಳವನ್ನು ಸ್ಮಶಾನ ಜಾಗಕ್ಕೆನೀಡಲಾಗುವುದು ಹಾಗೂ ಪ.ಜಾತಿ ಮತ್ತುವರ್ಗದ ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ವಹಿಸುತ್ತಿದೆಎಂದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕನಾಗರಾಜ್‌ ಮಾತನಾಡಿ, 2021 ರಲ್ಲಿ ಒಟ್ಟು 63ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು, 6 ಬಿರಿಪೋರ್ಟ್‌ ಆಗಿದ್ದು, 35 ಪ್ರಕರಣಗಳು ಚಾಜ್‌ìಶೀಟ್‌ ಆಗಿವೆ. ಈ ವರ್ಷ 36 ಪ್ರಕರಣಗಳಿಗೆಪರಿಹಾರ ಒಟ್ಟು ರೂ.44.42 ಲಕ್ಷ ನೀಡಲಾಗಿದೆಎಂದು ಸಭೆಗೆ ಮಾಹಿತಿ ನೀಡಿದರು.ಸಭೆಯಲ್ಲಿ ವಿಧಾನ ಪರಿಷತ್‌ ಶಾಸಕರಾದಆಯನೂರು ಮಂಜುನಾಥ, ಜಿಲ್ಲಾ ಪೊಲೀಸ್‌ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್‌, ಎಡಿಸಿನಾಗೇಂದ್ರ ಹೊನ್ನಳ್ಳಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಅಜ್ಜಪ್ಪ, ಜಾಗೃತಿಮತ್ತು ಉಸ್ತುವಾರಿ (ದೌರ್ಜನ್ಯ ಪ್ರತಿಬಂಧ)ಸಮಿತಿ ಸದಸ್ಯರಾದ ಬಸವರಾಜ್‌, ನಾಗರಾಜ್‌,ನಾಮನಿರ್ದೇಶಿತ ಸದಸ್ಯರಾದ ಮಲ್ಲೇಶ್‌,ಕಿರಣ್‌ಕುಮಾರ್‌ ಇತರೆ ಅಧಿಕಾರಿಗಳು ಇದ್ದರು.

ಟಾಪ್ ನ್ಯೂಸ್

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khel Ratna ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾಕರ್‌ ಹೆಸರಿಲ್ಲ?

Khattar (2)

Kasaragod: ಸ್ಥಳ ನೀಡಿದರೆ ಕೇರಳದಲ್ಲಿ ಅಣು ಶಕ್ತಿ ನಿಲಯ: ಕೇಂದ್ರ ಸಚಿವ ಖಟ್ಟರ್‌

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ

AUS v NZ: ಆಸ್ಟ್ರೇಲಿಯ ವನಿತೆಯರಿಗೆ ಸರಣಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ

ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-traa

Udupi- Mangaluru; ವರ್ಷಾಂತ್ಯಕ್ಕೆ ಹೆಚ್ಚಿದ ಪ್ರವಾಸಿಗರು: ಟ್ರಾಫಿಕ್‌ ಜಾಮ್‌

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವುPro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

Pro Kabaddi League: ಗುಜರಾತ್‌ ಜೈಂಟ್ಸ್‌ ವಿರುದ್ಧದಬಾಂಗ್‌ ಡೆಲ್ಲಿಗೆ ಗೆಲುವು

ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

PAK Vs SA: ಸರಣಿ ಕ್ಲೀನ್‌ ಸ್ವೀಪ್‌ ಗೈದ ಪಾಕಿಸ್ಥಾನ

1-subb

Eshwara Khandre; ಕುಕ್ಕೆ, ಧರ್ಮಸ್ಥಳದಲ್ಲಿ: ಕಸ್ತೂರಿ ರಂಗನ್‌ ವರದಿ ಸಂಪೂರ್ಣ ತಿರಸ್ಕಾರ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

BCCI: ಇನ್ನೆರಡು ಟೆಸ್ಟ್‌ ನಿಂದ ಮೊಹಮ್ಮದ್‌ ಶಮಿ ಹೊರಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.