ಸುನ್ನಿ ಪಂಗಡದವರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ
Team Udayavani, Nov 16, 2021, 6:36 PM IST
ಶಿವಮೊಗ್ಗ: ತ್ರಿಪುರಾದಲ್ಲಿ ಮುಸ್ಲಿಂಸಮುದಾಯದ ಮೇಲೆ ನಡೆದ ದೌರ್ಜನ್ಯಖಂಡಿಸಿ ಸುನ್ನಿ ಜಮಾತ್ ವುಲ್ ಉಲೇಮಾಕಮಿಟಿ ವತಿಯಿಂದ ಸೋಮವಾರ ಈದ್ಗಾಮೈದಾನದಲ್ಲಿ ಪ್ರತಿಭಟನೆ ನಡೆಸಲಾಯಿತು.ತ್ರಿಪುರಾದ ಅಗರ್ತಲಾ ಪ್ರದೇಶದಲ್ಲಿಮುಸ್ಲಿಮರಮೇಲೆದೌರ್ಜನ್ಯನಡೆದಿರುವುದು ಖಂಡನೀಯ. ಮನುಷ್ಯಕ್ರೂರನಾಗುತ್ತಿದ್ದಾನೆ.
ಧರ್ಮಗಳು ಮನುಷ್ಯರನ್ನುಒಳ್ಳೆಯವರನ್ನಾಗಿ ಮಾಡಬೇಕು. ಆದರೆ,ಮಾನವ ಸಂಕುಚಿತ ಸರಪಳಿಗಳಿಂದಇವುಗಳನ್ನು ಕಟ್ಟಿ ಹಾಕಿರುವುದರಿಂದಇಂಥ ಸ್ವಾರ್ಥ ಕೃತ್ಯಗಳು ನಡೆಯುತ್ತವೆ.ಧಮಾಂìಧರು ಸದ್ಭಾವನೆಗಳನ್ನೇ ಮರೆತುದುರ್ಭಾವನೆಗಳಿಂದ ಇಂತಹ ವಿಕೃತಿಮೆರೆಯುತ್ತಿದ್ದಾರೆಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಈ ಘಟನೆ ಪ್ರಜಾಪ್ರಭುತ್ವಕ್ಕೆಆಘಾತಕಾರಿಯಾಗಿದೆ. ಧರ್ಮದ ಹೆಸರಲ್ಲಿಕೆಲವು ಕಿಡಿಗೇಡಿಗಳು ಜಾತಿಯ ವಿಷ ಬೀಜಬಿತ್ತಿ ಸಾಮರಸ್ಯ ಹಾಳುಮಾಡುತ್ತಿದ್ದಾರೆಎಂದು ದೂರಿದರು.ಶಿಯಾಪಂಗಡಕ್ಕೆಸೇರಿದವಸೀಂರಿಜ್ವೆಎಂಬವ್ಯಕ್ತಿ ಪ್ರವಾದಿ ಹಜರತ್ ಮೊಹ್ಮದ್ ಅವರಮೇಲೆ ಅವಹೇಳನಕಾರಿ ಹೇಳಿಕೆ ನೀಡಿ ಸುನ್ನಿಪಂಗಡದ ಮುಸ್ಲಿಂ ಸಮುದಾಯದವರನ್ನುನಿಂದಿಸಿದ್ದಾನೆ.
ಪ್ರವಾದಿಗಳ ಬಗ್ಗೆ ಏನೂಅರಿಯದೇ ಹೀಗೆ ಮಾತನಾಡುವುದು ತಪ್ಪು.ಇದಲ್ಲದೇ ಕುರಾನ್ ಬಗ್ಗೆ ಮಾತನಾಡುವುದುಕೂಡ ಸರಿಯಲ್ಲ. ಅಪವಿತ್ರ ಪುಸ್ತಕವನ್ನುಮುದ್ರಿಸಿ ಬಿಡುಗಡೆ ಮಾಡಿ ಕೋಮುಭಾವನೆ ಕೆರಳಿಸಿರುವುದು ಹೀನ ಕೃತ್ಯ ಎಂದುಪ್ರತಿಭಟನಾಕಾರರು ದೂರಿದರು.ರಿಜ್ವೆಯಂತಹ ಕಿಡಿಗೇಡಿಯನ್ನುಬಂಧಿಸಬೇಕು. ಇಂತಹ ಕೃತ್ಯಗಳುಮರುಕಳಿಸಬಾರದು.
ಭಾರತವನ್ನು ಬಲಿಷ್ಠರಾಷ್ಟÅವನ್ನಾಗಿ ನಿರ್ಮಾಣ ಮಾಡಲುಇಂತಹ ದುಷ್ಟರನ್ನು ಬಲಿ ಹಾಕಬೇಕುಪ್ರತಿಭಟನಾಕಾರರು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಇಕ್ಬಾಲ್ ಹಬೀಬ್‌ಸೇಟ್, ಅಬ್ದುಲ್ ಸತ್ತಾರ್, ಏಜಾಜ್ ಪಾಷಾ,ಅಫ್ತಾಬ್ ಫರ್ವೀಜ್, ಮುನಾವರ್ ಪಾಷಾ,ಅನ್ಸರ್ ಅಹಮ್ಮದ್, ಮುಫ್ತಿ ಅಕಿಲ್ ರಾಜ್,ಖಾಜಿ ಅಶ್ರಫ್ ಸಾಬ್ ಸೇರಿದಂತೆ ಅಪಾರಜನ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.