ರೈತರ ಸಾವಿಗೆ ಯಾರು ಕಾರಣ?: ಮಧು
Team Udayavani, Dec 8, 2021, 1:16 PM IST
ಶಿಕಾರಿಪುರ: ಪ್ರಧಾನಿಯವರಿಗೆ ದೇಶದಜನತೆ ದೇವರೆಂದು ಪೂಜಿಸುವಂತಹಸಮಯದಲ್ಲಿ ಆ ದೇವರು ರೈತ ವಿರೋಧಿಕಾಯ್ದೆ ಜಾರಿಗೆ ತಂದರು. ಆ ಕಾಯ್ದೆಯನ್ನುಖಂಡಿಸಿ ದೆಹಲಿಯ ಗಡಿಯಲ್ಲಿ ಒಂದುವರ್ಷದಿಂದ ವಿವಿಧ ರಾಜ್ಯದ ಲಕ್ಷಾಂತರರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಸುಮಾರು750 ರಿಂದ 760 ರೈತರು ಬಲಿಯಾದರು.ಇದಕ್ಕೆ ಯಾರು ಕಾರಣ ಮತ್ತು ಯಾರುಉತ್ತರ ಕೊಡುತ್ತಾರೆ ಎಂದು ಮಾಜಿ ಶಾಸಕಮಧು ಬಂಗಾರಪ್ಪ ಪ್ರಶ್ನಿಸಿದರು.
ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಅವರ ಪರ ಮತಯಾಚಿಸಿಸುದ್ದಿಗೋಷ್ಠಿಯಲ್ಲಿ ಮಾತನಾಡಿದಅವರು, ಕೊರೊನಾ ಸಂದರ್ಭದಲ್ಲಿ ಗಾಳಿಇಲ್ಲದೆ ಮರಣ ಹೊಂದುತ್ತಿರುವಾಗದೇಶದ ಪ್ರಧಾನಿಯವರು ಗಂಟೆ, ಜಾಗಟೆಬಾರಿಸುತ್ತಾ ದೀಪ ಬೆಳಗಿಸುವುದರ ಮೂಲಕಕೊರೊನಾವನ್ನು ಓಡಿಸುವುದಾಗಿ ತಿಳಿಸಿದ್ದರು.
ಆ ವೇಳೆಯಲ್ಲಾಗಲೇ ಅನೇಕ ಸೋಂಕಿತರುಆಕ್ಸಿಜನ್ ಇಲ್ಲದೆ ಮರಣ ಹೊಂದುತ್ತಾರೆ ಎಂದರೆ ದೇಶವನ್ನು ಯಾವ ರೀತಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಬುದ್ಧಿಜೀವಿಗಳು, ಜನ ಸಾಮಾನ್ಯರುಚಿಂತಿಸಬೇಕಿದೆ. ದೇಶದಲ್ಲಿ ರೈತವಿರೋ ಧಿ ಕಾಯ್ದೆ ಜಾರಿಗೆ ತಂದು ಲಕ್ಷಾಂತರ ರೈತರು ದೆಹಲಿಯಗಡಿಯಲ್ಲಿ ಹೋರಾಟದ ಹಾದಿಹಿಡಿದಿದ್ದರು ಈ ಹೋರಾಟದಲ್ಲಿ 750 ರಿಂದ760 ರೈತರು ಸಾವನ್ನಪ್ಪಿದ್ದಾರೆ. ಇದಕ್ಕೆ ಕಾರಣಯಾರು ಮತ್ತು ಯಾರು ಉತ್ತರ ಕೊಡುತ್ತಾರೆ.ಅವರ ಕುಟುಂಬದವರಿಗೆ ಯಾರು ಪರಿಹಾರಕೊಡುತ್ತಾರೆ ಎಂದು ಪ್ರಶ್ನಿಸಿದರು.
ಎಐಸಿಸಿ ಅಧ್ಯಕ್ಷ ರಾಹುಲ್ ಗಾಂ ಧಿ ಅವರುರೈತರ ಬಗ್ಗೆ ಕಾಳಜಿಯಿಂದ ರೈತ ವಿರೋಧಿಕಾಯ್ದೆಯನ್ನು ವಾಪಸ್ ಪಡೆಯುವಂತೆಮನವಿ ಮಾಡಿದ್ದರೂ, ಅವರ ಬಗ್ಗೆಪಾರ್ಲಿಮೆಂಟ್‌ನಲ್ಲಿ ಹಾಸ್ಯಾಸ್ಪದವಾಗಿಮಾತನಾಡುತ್ತಾರೆ. ಈಗ ಕಾಯ್ದೆಯನ್ನುವಾಪಸ್ ಪಡೆಯುವುದಾಗಿ ತಿಳಿಸಿ ದೇಶದಜನತೆಯಲ್ಲಿ ಕ್ಷಮೆ ಕೇಳುವುದು ಹಾಸ್ಯಾಸ್ಪದಸಂಗತಿ ಎಂದರು.
ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಣಿಮಾಲತೇಶ್ ಮಾತನಾಡಿ, ಕಾಂಗ್ರೆಸ್‌ಪಕ್ಷಕ್ಕೆ ಮಧು ಬಂಗಾರಪ್ಪನವರ ಆಗಮನದಿಂದ ಆನೆಬಲಬಂದಂತಾಗಿದೆ. ಅವರ ತಂದೆಎಸ್. ಬಂಗಾರಪ್ಪ ಅವರು ರಾಜ್ಯದಮುಖ್ಯಮಂತ್ರಿಯಾಗಿದ್ದಾಗ ರಾಜ್ಯದಜನತೆಗೆ ಹಲವಾರು ಯೋಜನೆಗಳನ್ನುಜಾರಿಗೆ ತಂದು ರೈತರ ಅಭಿವೃದ್ಧಿಯತ್ತಚಿಂತನೆ ನಡೆಸುತ್ತಿದ್ದರು. ಕಳೆದ ಬಾರಿಯ ಚುನಾವಣೆಯಲ್ಲಿ ಜೆಡಿಎಸ್‌ನಲ್ಲಿದ್ದ ಮಧುಬಂಗಾರಪ್ಪ ಅವರು ತಮ್ಮ ಅಭ್ಯರ್ಥಿಯಪರವಾಗಿ ಮತ ಯಾಚನೆ ಮಾಡುತ್ತ ಒಂದುಸಾವಿರಕ್ಕೂ ಹೆಚ್ಚು ಮತ ಪಡೆದಿದ್ದರು. ಈಬಾರಿ ಕಾಂಗ್ರೆಸ್‌ಗೆ ಆಗಮಿಸಿ ಆರ್. ಪ್ರಸನ್ನಕುಮಾರ್ ಅವರ ಪರವಾಗಿ ಮತ ಯಾಚನೆಮಾಡುತ್ತಿರುವುದರಿಂದ ಪ್ರಸನ್ನಕುಮಾರ್‌ಅವರು ಕಳೆದ ಬಾರಿಗಿಂತ ಹೆಚ್ಚು ಮತಪಡೆದು ಗೆಲುವು ಸಾ ಧಿಸಲಿದ್ದಾರೆ ಎಂದುಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.