ರಾಜ್ಯ ಸರಕಾರ ರೈತ ವಿರೋಧಿ ಕಾಯ್ದೆ ರದ್ದುಗೊಳಿಸಲಿ
Team Udayavani, Dec 22, 2021, 4:02 PM IST
ಶಿವಮೊಗ್ಗ: ಕೇಂದ್ರ ಸರ್ಕಾರ ಕೃಷಿ ಕಾಯ್ದೆ ತಿದ್ದುಪಡಿ ವಾಪಸ್‌ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ರೈತ ಸಂಘದರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.
ರಾಜ್ಯ ರೈತ ಸಂಘ ರೋಟರಿ ರಕ್ತನಿಧಿ ಕೇಂದ್ರದ ಸಭಾಂಗಣದಲ್ಲಿ ಆಯೋಜಿಸಿದ್ದ ರೈತ ನಾಯಕ ಎನ್.ಡಿ.ಸುಂದರೇಶ್ ಅವರ ನೆನಪಿನ ಕಾರ್ಯಕ್ರಮ ಉದ್ಘಾಟಿಸಿಅವರು ಮಾತನಾಡಿದರು.ರಾಜ್ಯ ಸರ್ಕಾರ ಕೂಡ ಎಪಿಎಂಸಿ ಕಾಯ್ದೆ ಸೇರಿದಂತೆಕೆಲವು ರೈತ ವಿರೋ ಧಿ ಕಾಯ್ದೆಗಳನ್ನು ವಾಪಸ್‌ತೆಗೆದುಕೊಳ್ಳಬೇಕು. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳಜೊತೆ ಚರ್ಚಿಸಲಾಗಿದೆ.
ಅವರು ವಾಪಸ್ ತೆಗೆದುಕೊಳ್ಳುವಭರವಸೆ ನೀಡಿದ್ದಾರೆ. ಸರ್ಕಾರದ ನಡೆಯನ್ನುಗಮನದಲ್ಲಿಟ್ಟುಕೊಂಡು ನಂತರ ರೈತ ಸಂಘ ತನ್ನ ನಿರ್ಧಾರಕೈಗೊಳ್ಳಲಿದೆ ಎಂದರು.ಸರ್ಕಾರ ರೈತರ ಸಮಸ್ಯೆಗಳನ್ನು ಆದಷ್ಟು ಬೇಗಪರಿಹರಿಸಬೇಕು. ಸರ್ಕಾರದಿಂದ ಸಿಗಬೇಕಾದ ಪರಿಹಾರಗಳುರೈತರನ್ನು ತಲುಪುತ್ತಿಲ್ಲ. ರೈತರ ಸಮಸ್ಯೆಗಳು ಹಾಗೆಯೇಉಳಿದುಕೊಂಡಿವೆ.
ರೈತರಿಗೆ ವೈಜ್ಞಾನಿಕವಾದ ರೀತಿಯಲ್ಲಿಪರಿಹಾರ ನೀಡಬೇಕಾಗಿದೆ. ಬೆಳೆ ವಿಮೆ ರೈತರ ತಲುಪಿಲ್ಲ.ಸರ್ಕಾರ ಈ ಬಗ್ಗೆ ರೈತರ ಪರ ನಿಲ್ಲಬೇಕು. ಈ ವಿಚಾರದಲ್ಲಿಸರ್ಕಾರದ ನಡೆ ಗಮನಿಸಿ ರೈತಸಂಘ ಮುಂದಿನ ನಿರ್ಧಾರಕೈಗೊಳ್ಳಲಿದೆ ಎಂದರು.ರಾಯಣ್ಣನ ಮೂರ್ತಿ ವಿರೂಪಗೊಳಿಸಿದವರು, ನಾಡಧ್ವಜಸುಟ್ಟು ಹಾಕಿ ದವರಿಗೆ ಕಠಿಣ ಶಿಕ್ಷೆಯಾಗಬೇಕು. ಕಿಡಿಗೇಡಿಗಳಕೃತ್ಯಗಳನ್ನು ನೋಡಿಕೊಂಡು ಸುಮ್ಮನೆ ಇರಲು ಸಾಧ್ಯವಿಲ್ಲ.
ಅವರನ್ನೆಲ್ಲಾ ರಾಜ್ಯದಿಂದ ಆಚೆ ನೂಕಬೇಕು. ಗಡಿಭಾಗದಲ್ಲಿಓಟಿಗಾಗಿ ಕೆಲ ರಾಜಕಾರಣಿಗಳು ಮೌನವಾಗಿರುವುದುಸರಿಯಲ್ಲ. ಇದು ಓಲೈಕೆ ರಾಜಕಾರಣ. ಇದಕ್ಕೆಲ್ಲ ಸರ್ಕಾರಅವಕಾಶ ಕೊಡಬಾರದು ಎಂದರು.ಹಿರಿಯ ರೈತ ಮುಖಂಡ ಎಚ್.ಆರ್. ಬಸವರಾಜಪ್ಪಮಾತನಾಡಿ, ಸುಂದರೇಶ್ ಅವರ 29 ನೇ ನೆನಪಿನಕಾರ್ಯಕ್ರಮವನ್ನು ರೈತಸಂಘ ರಕ್ತದಾನದ ಮೂಲಕಆಚರಿಸುತ್ತಿದೆ. ಇಂದು ಹಲವು ರೈತರು ರಕ್ತದಾನ ಮಾಡಿದ್ದಾರೆ.ಮುಂದಿನ ಬಾರಿ ನೇತ್ರದಾನದ ಮೂಲಕ ಸುಂದರೇಶ್‌ಅವರನ್ನು ಸ್ಮರಿಸಲಾಗುವುದು ಎಂದರು.
ಸುಂದರೇಶ್ ಅವರ ವಿಚಾರಧಾರೆಗಳು ಸದಾವರ್ತಮಾನದಲ್ಲಿರುತ್ತವೆ. ಅವರು ಆದರ್ಶಹೋರಾಟಗಾರರಾಗಿದ್ದರು. ರಾಜಕಾರಣಿಗಳಿಗೆಸಿಂಹಸ್ವಪ್ನವಾಗಿದ್ದರು. ಯಾವ ಅ ಧಿಕಾರಿಗೂ ಸೊಪ್ಪುಹಾಕುತ್ತಿರಲಿಲ್ಲ. ಉಗ್ರ ಸ್ವಭಾವ ದವರಾಗಿದ್ದರೂ ಅವರೊಳಗೆಮಾತೃ ಹೃದಯವಿತ್ತು. ಅವರ ಚಿಂತನೆಗಳ ಆತ್ಮಾವಲೋಕನಮಾಡಿಕೊಳ್ಳಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಡಾ|ಬಿ.ಎಂ.ಚಿಕ್ಕಸ್ವಾಮಿ, ಡಿ.ಎಚ್. ರಾಮಚಂದ್ರಪ್ಪ, ಹಿಟ್ಟೂರು ರಾಜು,ಪುರದಾಳ್ ನಾಗರಾಜ್, ಟಿ.ಎಂ. ಚಂದ್ರಪ್ಪ, ಭೆ„ರೇಗೌಡ,ಪಿ.ಡಿ. ಮಂಜಪ್ಪ, ಕೆ. ರಾಘವೇಂದ್ರ, ಕುರುವ ಗಣೇಶ್,ಬಾಬಣ್ಣ, ಶಿವಮೂರ್ತಪ್ಪ, ರೋಟರಿ ಬ್ಲಿಡ್ ಬ್ಯಾಂಕ್ ಅಧ್ಯಕ್ಷಅರಕೆರೆ ಮಂಜಪ್ಪ ಮೊದಲಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BJP vs Congress; ಸಂಸತ್ತಿನಲ್ಲಿ ಕೋಲಾಹಲ: ಪೊಲೀಸರಿಗೆ ದೂರು,ಕಾಂಗ್ರೆಸ್ ಪ್ರತಿದೂರು
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಪೊಲೀಸರ ವಶಕ್ಕೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ
Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.