ವರುಣನಾರ್ಭಟ : ಶಿವಮೊಗ್ಗದ ಮೂರು ಜಲಾಶಯಗಳ ಒಳ ಹರಿವು ಹೆಚ್ಚಳ
24 ಗಂಟೆಯಲ್ಲಿ ಲಿಂಗನಮಕ್ಕಿ, ಭದ್ರಾ ಡ್ಯಾಂ ನೀರಿನ ಮಟ್ಟ ಮೂರು ಅಡಿ ಹೆಚ್ಚಳ, ತುಂಗಾ ಡ್ಯಾಂನಿಂದ ಹೊರಹರಿವು ನಿರಂತರ
Team Udayavani, Jul 23, 2021, 10:31 AM IST
ಶಿವಮೊಗ್ಗ : ಕಳೆದ ಎರಡು ದಿನದಿಂದ ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ಹಳ್ಳ, ಕೊಳ್ಳಗಳು ತುಂಬಿಕೊಳ್ಳುತ್ತಿವೆ. ಜಿಲ್ಲೆಯ ಮೂರು ಪ್ರಮುಖ ಜಲಾಶಯಗಳಿಗೂ ಒಳ ಹರಿವು ಕೂಡ ಹೆಚ್ಚಳವಾಗಿದೆ.
ಮೂರು ಅಡಿ ಏರಿದ ಲಿಂಗನಮಕ್ಕಿ
ಕಳೆದ 24 ಗಂಟೆ ಅವಧಿಯಲ್ಲಿ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ನಿನ್ನೆ (ಗುರುವಾರ, ಜುಲೈ 22) ನೀರಿನ ಮಟ್ಟ 1796 ಅಡಿಯಷ್ಟು ಇತ್ತು. ಇಂದು (ಶುಕ್ರವಾರ, ಜುಲೈ 23) 1799.15 ಅಡಿಗೆ ಏರಿಕೆಯಾಗಿದೆ. ಲಿಂಗನಮಕ್ಕಿಗೆ 73,431 ಕ್ಯೂಸೆಕ್ ಒಳಹರಿವು ಇದೆ.
ಇದನ್ನೂ ಓದಿ : ಪುಣೆ-ಬೆಂಗಳೂರು ಹೈವೇಗೆ ನುಗ್ಗಿದ ನದಿ ನೀರಿನಲ್ಲಿ ಸಿಲುಕಿದ ಕಾರು-ಲಾರಿ
ಭದ್ರಾ ಡ್ಯಾಂ ನೀರಿನ ಮಟ್ಟ ಹೆಚ್ಚಳ
ಇತ್ತ ಭದ್ರಾ ಜಲಾಶಯದ ನೀರಿನ ಮಟ್ಟವೂ ಮೂರು ಅಡಿಯಷ್ಟು ಹೆಚ್ಚಳವಾಗಿದೆ. ಗುರುವಾರ 167.11 ಅಡಿ ಇತ್ತು. ಇವತ್ತು 171.1 ಅಡಿಗೆ ತಲುಪಿದೆ. 24 ಗಂಟೆ ಅವಧಿಯಲ್ಲಿ 3.2 ಅಡಿಯಷ್ಟು ನೀರಿನ ಸಂಗ್ರಹ ಹೆಚ್ಚಳವಾಗಿದೆ. 39,286 ಕ್ಯೂಸೆಕ್ ಒಳಹರಿವು ಇದೆ.
ತುಂಗಾ ಜಲಾಶಯದ ಹೊರ ಹರಿವು
ತುಂಗಾ ಜಲಾಶಯದಿಂದ ರಾತ್ರಿ ಭಾರಿ ಪ್ರಮಾಣದ ನೀರನ್ನು ಹೊರಗೆ ಬಿಡಲಾಗಿತ್ತು. ಬೆಳಗ್ಗೆ 48,323 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಹಾಗಾಗಿ ಅಷ್ಟೆ ಪ್ರಮಾಣದ ನೀರನ್ನು ಹೊಳಗೆ ಹರಿಸಲಾಗುತ್ತಿದೆ.
ಇದನ್ನೂ ಓದಿ : ಕುಂದ್ರಾರಿಂದ ಪೊಲೀಸರಿಗೆ ಲಂಚ ನೀಡಿಕೆ ಆರೋಪ: 25 ಲಕ್ಷ ರೂ. ಲಂಚ ಆಮಿಷ?
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.