ಕಾನೂನಿನ ಜ್ಞಾನಾಭಿವೃದ್ದಿ ಅಗತ್ಯ: ಶ್ರೀನಿವಾಸ ಬಾಬು
Team Udayavani, Dec 23, 2021, 6:26 PM IST
ಭದ್ರಾವತಿ: ಸಾಮಾಜಿಕ ಜಾಲತಾಣಗಳಬಳಕೆಯಿಂದ ಇಂದು ಕಕ್ಷಿದಾರರುಕಾನೂನು ತಿಳುವಳಿಕೆಯನ್ನು ಹಿಂದಿಗಿಂತಹೆಚ್ಚಿನ ಮಟ್ಟದಲ್ಲಿ ಹೊಂದಿರುವುದರಿಂದವಕೀಲಿ ವೃತ್ತಿನಿರತ ನ್ಯಾ¿åವಾದಿಗಳುಕಾನೂನಿನಲ್ಲಿ ಆಗುತ್ತಿರುವ ಬದಲಾವಣೆಹಾಗೂ ಹೊಸ ಹೊಸ ಕಾನೂನಿನತಿಳುವಳಿಕೆಯನ್ನು ಹೆಚ್ಚಿನ ಮಟ್ಟದಲ್ಲಿಹೊಂದಿರಬೇಕಾದ ಅವಶ್ಯಕತೆಯಿದೆಎಂದು ಕರ್ನಾಟಕ ರಾಜ್ಯ ವಕೀಲರಪರಿಷತ್ತಿನ ಅಧ್ಯಕ್ಷ ಶ್ರೀನಿವಾಸಬಾಬುಹೇಳಿದರು.
ನ್ಯಾಯಾಲಯದ ಒಳಾವರಣದಲ್ಲಿಭದ್ರಾವತಿ ವಕೀಲರ ಸಂಘಹಾಗೂ ರಾಜ್ಯವಕೀಲರ ಪರಿಷತ್ ಸಂಯುಕವಾಗಿ ¤ಏರ್ಪಡಿಸಿದ್ದ ಮೂರು ದಿನಗಳಕಾನೂನುಕಾರ್ಯಾಗಾರವನ್ನು ಸಂವಿಧಾನಪೀಠಿಕೆಯ ಬರಹದ ಫಲಕವನ್ನುಅನಾವರಣಗೊಳಿಸುವ ಮೂಲಕಉದ್ಘಾಟಿಸಿ ಅವರು ಮಾತನಾಡಿದರು.
ಸಂವಿಧಾನದತ್ತವಾದ ಪ್ರಜಾಪ್ರಭುತ್ವವ್ಯವಸ್ಥೆ ಉತ್ತಮವಾಗಿರಬೇಕಾದರೆ,ಉñಮ ¤ ನ್ಯಾಯಾಂಗ ವ್ಯವಸ್ಥೆ ಅಗತ್ಯ.ಉತ್ತಮ ನ್ಯಾಯಾಂಗಕ್ಕೆ ಉತ್ತಮವಕೀಲರ ಸÊುೂ ಹ ಅತ್ಯಗತ್ಯ. ಉತ್ತಮವಕೀಲರ ನಿರ್ಮಾಣವಾಗಬೇಕಾದರೆವಕೀಲರಿಗೆ ಕಾನೂನಿನ ಸÊುಪ ìಕ ತಿಳುವಳಿಕೆ ಅಗತ್ಯ. ಆದ್ದರಿಂದ ಉತ್ತಮವಕೀಲರ ನಿರ್ಮಾಣದ ಕಾರ್ಯವನ್ನುವಕೀಲರ ಪರಿಷತ್ ಈ ರೀತಿ ಕಾನೂನುಕಾರ್ಯಾಗಾರದ ಮೂಲಕ ಮಾಡುತ್ತಾ ಬಂದಿದೆ. ಈ ರೀತಿ ಕಾರ್ಯಾಗಾರಗಳನ್ನುವಕೀಲರ ಸಂಘ ಹೆಚಿನ c ಪ್ರಮಾಣದಲ್ಲಿಆಯೋಜಿಸುವುದರಿಂದ ವಕೀಲರಕಾನೂನು ಜ್ಞಾನ ಹೆಚ್ಚುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿಮಾತನಾಡಿದ ನಾಲ್ಕನೇ ಹೆಚ್ಚುವರಿ ಜಿಲ್ಲಾಸತ್ರನ್ಯಾಯಾಲಯದನ್ಯಾಯಾಧೀಶರಾದಶಶಿಧರ್, ಕಿರಿಯ ವಕೀಲರು ಇಂತಹಕಾರ್ಯಾಗಾರದ ಪ್ರಯೋಜನವನ್ನುಹೆಚ್ಚಾಗಿ ಪಡೆಯಬೇಕು ಎಂದರು.ಪ್ರಧಾನ ಹಿರಿಯ ಸಿವಿಲ್‌ನ್ಯಾಯಾಲಯದ ನ್ಯಾಯಾಧೀಶರಾದಉಜ್ವಲ ವೀರಣ್ಣ ಸಿದ್ಧಣ್ಣನವರ್‌ಮಾತನಾಡಿ, ನ್ಯಾಯಾಂಗ ವ್ಯವಸ್ಥೆಯರಥಕ್ಕೆ ನ್ಯಾಯಾಧೀಶರು ಮತ್ತುನ್ಯಾಯವಾದಿಗಳು ಎರಡು ಚಕ್ರಗಳಿದ್ದಂತೆ.ಇವೆರಡರ ನಡುವೆ ಕಾನೂನಿನಕ್ರಿಯಾಶೀಲತೆ ಪರಸ್ಪರ ಪೂರಕವಾಗಿದ್ದರೆಉತ್ತಮ ನ್ಯಾಯದಾನ ಸುಲಭವಾಗುತ್ತದೆಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ವಿವಿಧಶ್ರೇಣಿಯ ನ್ಯಾಯಾಧೀಶರಾದ ಮಿಲನ,ಪುರುಷೋತ್ತಮ, ಚಂದ್ರಶೇಖರಬಣಕಾರ್ ಹಾಗೂ ವಕೀಲರ ಸಂಘದಕಾರ್ಯದರ್ಶಿ ಉದಯಕುಮಾರ್ ಇದ್ದರು.ಶ್ವೇತ ಕಾರ್ಯಕ್ರಮ ನಿರೂಪಿಸಿ,ಉಪಾಧ್ಯಕ್ಷ ಡಿ.ಎಂ. ವಿಶ್ವನಾಥ್ ಸ್ವಾಗತಿಸಿ,ಕಾರ್ಯದರ್ಶಿ ಉದಯ್‌ಕುಮಾರ್‌ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnuru: ಕಿರು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆ; ಆರೋಪಿ ಬಂಧನ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ
Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.