Shivamogga : ಬೀಡಿಗಾಗಿ ಖೈದಿಗಳಿಂದ ಕಲ್ಲು ತೂರಾಟ, ಸಿಬ್ಬಂದಿಗೆ ಜೀವ ಬೆದರಿಕೆ
Team Udayavani, Sep 17, 2024, 1:22 PM IST
ಶಿವಮೊಗ್ಗ: ಬೀಡಿ, ಸಿಗರೇಟು ನೀಡುವಂತೆ ಆಗ್ರಹಿಸಿ ಖೈದಿಗಳು ಕಲ್ಲು ತೂರಾಟ ನಡೆಸಿ ಕಾರಾಗ್ರಹ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿರುವ ಘಟನೆ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಕಳೆದ ನಾಲ್ಕು ದಿನದ ಹಿಂದೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್‌ಗೆ ರಾಜಾಥಿತ್ಯ ಪ್ರಕರಣದ ಬೆನ್ನಲೇ ಶಿವಮೊಗ್ಗ ಜೈಲಿನಲ್ಲಿ ಬಿಗಿ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಬೀಡಿ, ಸಿಗರೇಟು ನೀಡುವಂತೆ ಒತ್ತಾಯಿಸಿ ಸಿಟ್ಟಿಗೆದ್ದು ಕಲ್ಲು ತೂರಾಟ ನಡೆಸಿ ಬಂಧಿಖಾನೆ ಸಿಬ್ಬಂದಿಗೆ ಜೀವ ಬೆದರಿಕೆ ಕೂಡ ಹಾಕಿದ್ದಾರೆ ಎನ್ನಲಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ಹೋಗಿರುವ ಹಿನ್ನೆಲೆ ಬಂಧಿಖಾನೆಗೆ ಡಿಐಜಿ ದಿವ್ಯಶ್ರೀ ಭೇಟಿ ನೀಡಿದ್ದು ಎರಡು ದಿನದಿಂದ ಜೈಲಿನಲ್ಲೇ ಮೊಕ್ಕಾಂ ಹೂಡಿದ್ದಾರೆ.
ಪ್ರಕರಣದ ಬೆನ್ನಲ್ಲೇ ಕಾರಾಗೃಹದ ಅಧೀಕ್ಷಕರ ಬದಲಾವಣೆ ಮಾಡಲಾಗಿದೆ.
ಜೈಲಿನೊಳಗೆ ಬೀಡಿ, ಸಿಗರೇಟು ಸರಬರಾಜು ಸಂಪೂರ್ಣ ನಿಷೇಧ ಮಾಡಲಾಗಿದ್ದು ಇದ್ರಿಂದ ಕೆರಳಿದ ಕೈದಿಗಳು ಬೀಡಿ, ಸಿಗರೇಟಿಗಾಗಿ ಆಗ್ರಹಿಸಿ ಧರಣಿ ನಡೆಸಿದ್ರು ಅಲ್ಲದೆ ಸೆ.12ರಂದು ಜೈಲಿನ ಕೆಲವು ಕೈದಿಗಳು ಬಂಧಿಖಾನೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ ನಡೆಸಿ ಸಿಬ್ಬಂದಿಗಳ ಲಾಠಿಗಳನ್ನು ಕಸಿದುಕೊಂಡು ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಜೈಲು ಅಧೀಕ್ಷಕಿ ಡಾ. ಆರ್.ಅನಿತಾ ಅವರು ದೂರು ನೀಡಿದ ಹಿನ್ನೆಲೆಯಲ್ಲಿ ಕಲ್ಲು ತೂರಾಟ, ಸಿಬ್ಬಂದಿಗೆ ಬೆದರಿಕೆ ಸಂಬಂಧ ರಾಜಶೇಖರ ರೆಡ್ಡಿ, ನೂರುಲ್ಲಾ, ಟಿಪ್ಪು, ಅಭಿಷೇಕ್ ಪಾಲನ್, ಟ್ವಿಸ್ಟ್ ಇಮ್ರಾನ್, ರಿಯಾಜ್ ಸೇರಿ ಒಟ್ಟು 21 ಕೈದಿಗಳ ವಿರುದ್ಧ ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Eshwara Khandre: ಪ್ರಕರಣ ಸುಪ್ರೀಂಕೋರ್ಟ್ ನಲ್ಲಿರುವಾಗ ಯತ್ನಾಳ್ ಒತ್ತಡ ತಂತ್ರ ಸರಿಯಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ
World Cancer ದಿನದ ಅಂಗವಾಗಿ ಕ್ಯಾನ್ಸರ್ ಗೆದ್ದವರಿಗೆ ಪಿಕಲ್ಬಾಲ್ ಪಂದ್ಯಾವಳಿ ಆಯೋಜನೆ
BJP Rift;ಯಡಿಯೂರಪ್ಪ, ಮಗನ ಕರ್ಮಕಾಂಡಗಳ ಬಗ್ಗೆ ಹೇಳಲು ನಾಳೆ ದೆಹಲಿಗೆ: ಯತ್ನಾಳ್
Bidar ಪಲ್ಟಿಯಾದ ಕಾರು; ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಕೋಟ್ಯಂತರ ರೂ ಮೌಲ್ಯದ ಗಾಂಜಾ
Yadagiri: ಮರಿಯಮ್ಮ ದೇವಿ ಮೂರ್ತಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Mahakumbh; ಬಸಂತ್ ಪಂಚಮಿ ದಿನ 2.33 ಕೋಟಿ ಜನರ ಅಮೃತ ಸ್ನಾನ
Hunsur: ಶಾಲಾ ವಾಹನ ಡಿಕ್ಕಿ ಹೊಡೆದು ರೈತ ಸಾವು
Working hours; 70 ರಿಂದ 90 ಗಂಟೆ ಕೆಲಸದ ಅವಧಿ: ಪ್ರತಿಕ್ರಿಯೆ ನೀಡಿದ ಕೇಂದ್ರ ಸರಕಾರ
Kashmir; ಉಗ್ರರ ದಾಳಿಯಲ್ಲಿ ನಿವೃತ್ತ ಯೋಧ ಹುತಾತ್ಮ: ಪತ್ನಿ, ಮಗಳಿಗೆ ಗಾಯ
Mandya: ವಿಸಿ ನಾಲೆಗೆ ಕಾರು ಬಿದ್ದು ಇಬ್ಬರ ದುರ್ಮರಣ, ಒಬ್ಬ ನಾಪತ್ತೆ, ಮತ್ತೊಬ್ಬನ ರಕ್ಷಣೆ