ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸಹಜ ಸ್ಥಿತಿಗೆ
Team Udayavani, Aug 18, 2022, 6:25 AM IST
ಶಿವಮೊಗ್ಗ: ಸಾವರ್ಕರ್ ಫ್ಲೆಕ್ಸ್ ವಿಚಾರಕ್ಕೆ ಪ್ರಕ್ಷುಬ್ಧಗೊಂಡಿದ್ದ ಶಿವಮೊಗ್ಗ ಸದ್ಯ ಶಾಂತವಾಗಿದ್ದು ಕಳೆದ 48 ಗಂಟೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಬುಧವಾರ ಎಂದಿನಂತೆ ಶಾಲಾ-ಕಾಲೇಜು, ವ್ಯಾಪಾರ ವಹಿವಾಟು ನಡೆದವು. ಆದರೂ ಶಿವಮೊಗ್ಗ, ಭದ್ರಾವತಿಯಲ್ಲಿ ಗುರುವಾರ ರಾತ್ರಿವರೆಗೂ ನಿಷೇಧಾಜ್ಞೆ ಮುಂದುವರಿಸಲಾಗಿದೆ.
ಬಹುತೇಕ ಎಲ್ಲ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಜನ, ವಾಹನ ಸಂಚಾರ ಎಂದಿನಂತೆಯೇ ಇದೆ. ನಗರದ ಸೂಕ್ಷ್ಮಪ್ರದೇಶಗಳು ಸೇರಿದಂತೆ ಎಲ್ಲ ಕಡೆ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಆಲೋಕ್ ಕುಮಾರ್, ಪೂರ್ವ ವಲಯ ಐಜಿಪಿ ತ್ಯಾಗರಾಜ್, ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಗಾಂಧಿ ಬಜಾರ್, ನೆಹರೂ ರಸ್ತೆ, ಎಂ.ಕೆ.ಕೆ. ರಸ್ತೆ ಮೊದಲಾದ ಕಡೆಗಳಲ್ಲಿ ಪರಿಶೀಲನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಆರ್.ಎ.ಎಫ್., ಕೆಎಸ್‌ಆರ್‌ಪಿ, ಡಿಎಆರ್ ಸೇರಿದಂತೆ ಭಾರೀ ಸಂಖ್ಯೆಯ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಗಲಭೆ ಪ್ರಕರಣ: ಐದು ಎಫ್‌ಐಆರ್
ಅಮೀರ್ ಅಹಮ್ಮದ್ ಸರ್ಕಲ್ ಗಲಭೆ ಪ್ರಕರಣಕ್ಕೆ ಸಂಬಂಧಿ ಸಿದಂತೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಐದು ಎಫ್‌ಐಆರ್ ದಾಖಲಾಗಿದೆ. ಸಾವರ್ಕರ್ ಫ್ಲೆಕ್ಸ್ ತೆರವುಗೊಳಿಸದಂತೆ ತಿಳಿವಳಿಕೆ ನೀಡಿದರೂ ಸರ್ಕಲ್ ಮಧ್ಯೆ ಇದ್ದ ಫ್ಲೆಕ್ಸ್ ಕಿತ್ತು ಹಾಕಿದ ನಾಲ್ಕು ಯುವಕರ ಮೇಲೆ ಹಾಗೂ ಫ್ಲೆಕ್ಸ್ ಹಾಕಿದ 10 ಜನರ ವಿರುದ್ಧವೂ ಪೊಲೀಸರು ದೂರು ದಾಖಲಿಸಿದ್ದಾರೆ. ಮೊಹಮ್ಮದ್ ಜಬೀವುಲ್ಲಾ ಬಂಧನದ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದ ವಿಚಾರಕ್ಕೆ ಸಂಬಂಧಿಸಿ ಒಂದು ದೂರು ದಾಖಲಾಗಿದೆ.
19 ವರ್ಷದ ಸದ್ದಾಂಹುಸೇನ್ ಮೇಲೆ ಸೋಮವಾರ ಮಧ್ಯಾಹ್ನ ಗಾಂಧಿಬಜಾರ್‌ನ ಉಪ್ಪಾರಕೇರಿ ಕ್ರಾಸ್ ಬಳಿ ಹಲ್ಲೆ ನಡೆಸಿದ ಆರೋಪದ ಮೇಲೆ ದೂರು ದಾಖಲಾಗಿದೆ. ಪ್ರೇಮ್‌ಸಿಂಗ್ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಒಂದು ದೂರು, 17 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ ವಿಚಾರಕ್ಕೆ ಸಂಬಂ ಧಿಸಿದಂತೆ ಮತ್ತೊಂದು ದೂರು ದಾಖಲಾಗಿದೆ. ಫ್ಲೆಕ್ಸ್ ಪ್ರಕರಣ ಹಾಗೂ ಮುಸ್ಲಿಂ ಯುವಕರ ಮೇಲಿನ ಹಲ್ಲೆ ವಿಚಾರದಲ್ಲಿ ಈವರೆಗೆ ಪೊಲೀಸರು ಯಾರನ್ನೂ ಬಂ ಧಿಸಿಲ್ಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
State BJP: ತೀವ್ರ ಕುತೂಹಲ ಮೂಡಿಸಿದ ವಿಜಯೇಂದ್ರ -ಸಿ.ಟಿ.ರವಿ ಭೇಟಿ
H. D. Deve Gowda: ದೇಶದ ಅರ್ಥ ವ್ಯವಸ್ಥೆ ಸರಿದಾರಿಗೆ ತಂದವರು ಸಿಂಗ್: ದೇವೇಗೌಡ
MLA Basavaraj Mattimud: ನನ್ನ ಹತ್ಯೆಗೆ ಸೊಲ್ಲಾಪುರದ ರೌಡಿಗಳಿಗೆ ಸುಪಾರಿ: ಶಾಸಕ
Politics: ಖರ್ಗೆ ತಳ್ಳಿದ ಡಿಕೆಶಿ; ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟು ಟೀಕಿಸಿದ ಬಿಜೆಪಿ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.