ನಾನೇನು ಚಿಕ್ಕ ಹುಡುಗನಲ್ಲ, ನನ್ನ ವಯಸ್ಸಿಗೆ ಮರ್ಯಾದೆಯಿದೆ: ಶಿವರಾಜ್ ಕುಮಾರ್
Team Udayavani, May 5, 2023, 11:52 AM IST
ಶಿವಮೊಗ್ಗ: ನಾನೇನು ಚಿಕ್ಕ ಹುಡುಗ ಅಲ್ಲ, ನನಗೆ 61 ವರ್ಷ. ನನ್ನ ವಯಸ್ಸಿಗೆ ಮರ್ಯಾದೆ ಇದೆ ಎಂದು ಚುನಾವಣೆ ಪ್ರಚಾರದಲ್ಲಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿನಿಮಾದಲ್ಲಿ ಡಿಮ್ಯಾಂಡ್ ಇತ್ತು. ಈಗ ಇಲ್ಲೂ ಶುರುವಾಗಿದೆ. ಬೇರೆ ಪಕ್ಷದವರು ಕರೆದರೂ ಹೋಗುತ್ತೇನೆ, ಯಾರು ಕರೆದಿಲ್ಲ ಎಂದರು.
ವರುಣಾದಲ್ಲಿ ನಿನ್ನೆ ರ್ಯಾಲಿ ಚೆನ್ನಾಗಿ ಆಗಿತ್ತು. ಇವತ್ತು ಶಿರಸಿಗೆ ಹೋಗುತ್ತಿದ್ದೇನೆ. ನಾಳೆ ಜಗದೀಶ್ ಶೆಟ್ಟರ್ ಪರವಾಗಿ ಹೋಗುತ್ತಿದ್ದೇನೆ. ಹಾಗೆಯೇ ಬೀದರ್, ಬಸವ ಕಲ್ಯಾಣ, ಮುಂಡಗೋಡು, ಮಂಗಳೂರಿಗೆ ಹೋಗುತ್ತಿದ್ದೇನೆ ಎಂದರು.
ಸೋಮಣ್ಣ ಕೂಡ ಆಪ್ತರು, ಪ್ರತಾಪ್ ಸಿಂಹ ಕೂಡ ಪರಿಚಯಸ್ತರು. ಅವರ ಬಗ್ಗೆ ಗೌರವವಿದೆ. ನಾನೇನು ಹೇಳಲ್ಲ. ಕಾಂಗ್ರೆಸ್ ಬಗ್ಗೆ ಕೂಡ ನಾನು ಮಾತನಾಡುತ್ತಿಲ್ಲ. ಕೆಲ ಅಭ್ಯರ್ಥಿಗಳ ಪರ ಹೋಗುತ್ತಿದ್ದೇನೆ. ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ ಎಂದರು.
ರಾಹುಲ್ ಗಾಂಧಿಯವರು ನನಗೆ ಇಷ್ಟವಾಗಿದ್ದರು. ಅವರು ಭೇಟಿ ಮಾಡಿದ್ದೆ. ಅವರು ಭಾರತ್ ಜೋಡೋ ಯಾತ್ರೆ ಇಂಪ್ರೆಸ್ ಅಗಿತ್ತು. ಅವರ ಫಿಟ್ನೆಸ್ ನೋಡಿ ಇಂಪ್ರೆಸ್ ಆಗಿದ್ದೆ ಎಂದು ಶಿವರಾಜ್ ಕುಮಾರ್ ಹೇಳಿದರು.
ಇದನ್ನೂ ಓದಿ:ಮಣಿಪುರ ಹಿಂಸಾಚಾರ: ಬಿಜೆಪಿ ಶಾಸಕನ ಮೇಲೆ ಗುಂಪಿನ ದಾಳಿ; ಆಸ್ಪತ್ರೆಗೆ ದಾಖಲು
ಸುದೀಪ್ ಕೂಡ ಹೋಗುತ್ತಿದ್ದಾರೆ. ಹಾಗಂತ ನಾಳೆ ಸಿಕ್ಕರೆ ನಾವು ಮಾತಾಡಲ್ವಾ? ಹಿ ಇಸ್ ಮೈ ಫ್ರೆಂಡ್, ಬ್ರದರ್.. ಫ್ಯಾಮಿಲಿ ರೀತಿ. ಇಲ್ಲಿ ವಾರ್ ಏನೂ ಇಲ್ಲ. ಜಸ್ಟ್ ಕಾಂಪಿಟೆಶನ್ ಅಷ್ಟೇ. ಅದು ಎಲ್ಲಾ ಕಡೇನೂ ಇರುತ್ತೆ ಎಂದರು.
ಚುನಾವಣಾ ಪ್ರಚಾರಕ್ಕೆ ಯಾರು ಪ್ರಭಾವ ಬೀರಿದ್ದು ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಮಧುಗೋಸ್ಕರ ಪ್ರಚಾರಕ್ಕೆ ಬಂದೆ. ನನಗೆ ಯಾರು ವಿರೋಧಿಗಳಿಲ್ಲ, ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ವಿದ್ಯುತ್ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ
Thirthahalli: ತುಂಗಾ ನದಿಯಲ್ಲಿ ಅಪರಿಚಿತ ಮೃತದೇಹ ಪತ್ತೆ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Infectious Disease: ರಾಜ್ಯಕ್ಕೂ ಬೇಕಿದೆ “ವಿಷಾಣು ಯುದ್ಧ ಅಭ್ಯಾಸ್”
MUST WATCH
ಹೊಸ ಸೇರ್ಪಡೆ
Congress: ಜಮೀರ್ ವಿರುದ್ಧ ಕೈಕಮಾಂಡ್‌ಗೆ 20ಕ್ಕೂ ಹೆಚ್ಚು ಶಾಸಕರಿಂದ ದೂರು
Olympics; 2036ರ ಒಲಿಂಪಿಕ್ಸ್‌ಗೆ ಬಿಡ್: ಭಾರತದಿಂದ ಐಒಸಿಗೆ ಅಧಿಕೃತ ಅರ್ಜಿ
Belagavi: ಎಸ್‌ಡಿಎ ಆತ್ಮಹ*ತ್ಯೆ: ಸಚಿವೆ ಹೆಬ್ಬಾಳ್ಕರ್ ರಾಜೀನಾಮೆಗೆ ಬಿಜೆಪಿ ಪಟ್ಟು
Supreme Court: ಬೇಕಾಬಿಟ್ಟಿ ಖಾಸಗಿ ಆಸ್ತಿ ಸ್ವಾಧೀನ ಸಲ್ಲ;ವಿಶೇಷ ಪ್ರಕರಣದಲ್ಲಷ್ಟೇ ಸ್ವಾಧೀನ
LignoSat: ಮರದಿಂದ ತಯಾರಿಸಿದ ವಿಶ್ವದ ಮೊದಲ ಉಪಗ್ರಹ ಉಡಾವಣೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.