![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 14, 2022, 9:45 PM IST
ಶಿಕಾರಿಪುರ: ವೀರ ಸಾವರ್ಕರ್ ಚಿತ್ರ ಕಿತ್ತು ಹಾಕಿದವರಿಗೆ ಉಗ್ರ ಶಿಕ್ಷೆ ಆಗಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.
ಈಸೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಡಮಾನಿನ ಸೆಲ್ಯೂಲರ್ ಜೈಲಿನಲ್ಲಿ ಸಾವರ್ಕರ್ ಬಂಧಿಯಾಗಿ ನೋವು ಅನುಭವಿಸಿದ್ದರು. ಸಾವರ್ಕರ್ ಅವರ ಇಡೀ ಕುಟುಂಬ ಸ್ವಾತಂತ್ರ್ಯ ಹೋರಾಟದಲ್ಲಿ ಬಲಿದಾನವಾಗಿತ್ತು. ಶಿವಮೊಗ್ಗದಲ್ಲಿ ಆದ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ದೇಶದ್ರೋಹಿ ಚಟುವಟಿಕೆಯಾಗಿದೆ ಎಂದರು.
ವೀರ ಸಾವರ್ಕರ್ ಬಗ್ಗೆ ಗೊತ್ತಿಲ್ಲದೆ ಹಾಗೂ ದೇಶಕ್ಕಾಗಿ ಹೋರಾಡಿದವರ ಚರಿತ್ರೆ ಓದದಂತಹ ವ್ಯಕ್ತಿಗಳಿಂದ ಈ ರೀತಿ ಅವಮಾನ ನಿರಂತರವಾಗಿ ಆಗುತ್ತಿದೆ. ಶಿವಮೊಗ್ಗದಲ್ಲಿ ಶನಿವಾರ ಸಾವರ್ಕರ್ ಫೋಟೊ ಕಿತ್ತು ಹಾಕುವ ಮೂಲಕ ಜನಪ್ರತಿನಿಧಿಗಳನ್ನು ಅವಮಾನ ಮಾಡಿದ್ದಾರೆ. ಆದ್ದರಿಂದ ಈ ಜನಪ್ರತಿನಿಧಿ ರಾಜೀನಾಮೆ ನೀಡಬೇಕು. ಈ ಜನಪ್ರತಿನಿಧಿಯನ್ನು ಪೊಲೀಸರು ಬಂಧಿಸಿದ್ದು, ಸರ್ಕಾರ ಅವರಿಗೆ ಉಗ್ರ ಶಿಕ್ಷೆ ನೀಡಬೇಕು. ಸ್ವಾತಂತ್ರ್ಯಕ್ಕೆ ಹೋರಾಡಿದ ಸೇನಾನಿಗಳಿಗೆ ಅವಮಾನ ಮಾಡುವಂತಹ ಧೈರ್ಯ ಯಾರಿಗೂ ಬರಬಾರದು. ಹೋರಾಟಗಾರರಿಗೆ ಅವಮಾನ, ಅನ್ಯಾಯವಾದರೇ ಭಾರತದ ಜನ ಸಹಿಸಿಕೊಳ್ಳಬಾರದು ಎಂದರು.
You seem to have an Ad Blocker on.
To continue reading, please turn it off or whitelist Udayavani.