Thirthahalli: ಆರಗ – ಆರ್ ಎಂಎಂ ನೇತೃತ್ವದಲ್ಲಿ ಅದ್ದೂರಿ ತೆಪ್ಪೋತ್ಸವ
ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಸಂಚಾಲಕರಿಲ್ಲದೆ ನಡೆಯಲಿದೆ ತೆಪ್ಪೋತ್ಸವ
Team Udayavani, Dec 7, 2024, 5:47 PM IST
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಗೆ ಈ ಬಾರಿ ಹೊಸ ನಿರ್ಣಯವೊಂದು ತೆಗೆದುಕೊಳ್ಳಲಾಗಿದ್ದು ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ತೆಪ್ಪೋತ್ಸವ ಸಂಚಾಲಕರಿಲ್ಲದೆ ರಥೋತ್ಸವ ಮತ್ತು ತೆಪ್ಪೋತ್ಸವ ನಡೆಸಲು ಸಭೆಯಲ್ಲಿ ತೀರ್ಮಾನ ಮಾಡಲಾಯಿತು.
ಶನಿವಾರ ಸಂಜೆ ಗ್ರಾಮೀಣಾಭಿವೃದ್ಧಿ ಸಭಾಂಗಣದಲ್ಲಿ ನಡೆದ ತೆಪ್ಪೋತ್ಸವ ಪೂರ್ವಭಾವಿ ಸಭೆಯಲ್ಲಿ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಮಲೆನಾಡು ಪ್ರದೇಶಾಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್’ಎಂ ಮಂಜುನಾಥ್ ಗೌಡರ ನೇತೃತ್ವದಲ್ಲಿ ಅದ್ದೂರಿ ತೆಪ್ಪೋತ್ಸವ ಹಾಗೂ ಎಳ್ಳಮಾವಾಸ್ಯೆ ಜಾತ್ರೆಯನ್ನು ನಡೆಸಲು ತೀರ್ಮಾನಿಸಲಾಯಿತು.
ಸಭೆ ಆರಂಭವಾದಾಗ ಸಭೆಯಲ್ಲಿ ಹೈಡ್ರಾಮಾ ಆರಂಭವಾಗಿತ್ತು. ಬಿಜೆಪಿ ಪರವಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಚೆನ್ನಾಗಿ ಕೆಲಸ ಮಾಡಿದ್ದಾರೆ.
ಪಾರದರ್ಶಕವಾಗಿ ಲೆಕ್ಕ ಪತ್ರ ಕೊಟ್ಟಿದ್ದಾರೆ. ಅವರನ್ನೇ ಪುನಃ ಸಂಚಾಲಕರನ್ನಾಗಿ ಮಾಡಿ ಹಳೆ ಸಮಿತಿ ಜೊತೆಗೆ ಹೊಸಬರನ್ನು ಸೇರಿಸಿ ದಸರಾ ಕಾರ್ಯಕ್ರಮ ಆದಂತೆ ಆಗುವುದು ಬೇಡ ಎಂದು ಮಾಜಿ ತಾಲೂಕು ಪಂಚಾಯಿತಿ ಸದಸ್ಯ ಕುಕ್ಕೆ ಪ್ರಶಾಂತ್ ಸಲಹೆ ನೀಡಿದರು.
ತಕ್ಷಣವೇ ಪಟ್ಟಣ ಪಂಚಾಯಿತಿ ಸದಸ್ಯ ಕಂಡಿಲ್ ರಾಘವೇಂದ್ರ ಶೆಟ್ಟಿ ತೆಪ್ಪೋತ್ಸವ ಮೊದಲು ಹುಟ್ಟಿದ್ದಾ? ಕುಕ್ಕೆ ಪ್ರಶಾಂತ್ ಮೊದಲು ಹುಟ್ಟಿದ್ದಾ? ತಿಳಿದಿಲ್ಲ. ನಾವು ಗೌರವಯುತವಾಗಿ ಸಭೆಯಲ್ಲಿ ಮಾತನಾಡುತ್ತಿದ್ದೇವೆ ಅಂದ ಮೇಲೆ ನೀವು ಹಾಗೆ ಮಾತನಾಡಬೇಕು ಎಂದು ಹೇಳಿದಾಗ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ತೀರ್ಥಹಳ್ಳಿ ಇತಿಹಾಸದಲ್ಲಿ ಮೊದಲ ಬಾರಿ ಹೀಗೆ ಗೊಂದಲ ಆಗುತ್ತಿದೆ. ಯಾರೋ ಒಬ್ಬರಿಂದ ಪ್ರತ್ಯೇಕ ಆಗುವುದು ಬೇಡ, ನಾವು ಬೇರೆ ನೀವು ಬೇರೆ ಅನ್ನುವುದು ಬೇಡ. ದೇವಸ್ಥಾನದ ಕಾರ್ಯಕ್ರಮಕ್ಕೆ ಹುಳಿ ಹಿಂಡುವ ಕೆಲಸ ಆಗುವುದು ಬೇಡ. ಈ ಬಾರಿ ನನ್ನ ಹಾಗೂ ಆರ್ ಎಂ ಮಂಜುನಾಥ್ ಗೌಡರ ನೇತೃತ್ವದಲ್ಲಿ ಹಾಗೂ ತಹಸೀಲ್ದಾರ್, ಪ ಪಂ ಮುಖ್ಯಾಧಿಕಾರಿಗಳು, ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳ ಜೊತೆಗೆ ಹಳೆ ಸಮಿತಿ ಜೊತೆಗೆ ಎಳ್ಳಮಾವಾಸ್ಯೆ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ ಎಂದರು.
ಆರ್’ಎಂ ಮಂಜುನಾಥ್ ಗೌಡ ಮಾತನಾಡಿ ಇಲ್ಲಿ ಅಭಿಪ್ರಾಯ ಹೇಳಲು ಎಲ್ಲರಿಗೂ ಮುಕ್ತ ಅವಕಾಶ ಇದೆ. ಅವರು ಮಾತನಾಡಿದಾಗ ನೀವು ಚಪ್ಪಾಳೆ ಹೊಡೆಯುವುದು, ನೀವು ಮಾತನಾಡಿದಾಗ ಅವರು ಚಪ್ಪಾಳೆ ಹೊಡೆಯುವುದಕ್ಕೆ ಇದು ರಾಜಕಾರಣ ಸಭೆಯಲ್ಲ, ದೇವಸ್ಥಾನಕ್ಕೆ ಸಂಬಂಧಪಟ್ಟ ರಾಮೇಶ್ವರ ತೆಪ್ಪೋತ್ಸವ ಪೂರ್ವ ಬಾವಿ ಸಭೆ ಎನ್ನುತ್ತಿದ್ದಂತೆ ಸಭೆ ಮದ್ಯ ಒಬ್ಬರು ನಿಮ್ಮವರು ಹೊಡೆದಿದ್ದು ಮೊದಲು ಚಪ್ಪಾಳೆ ಎನ್ನುತ್ತಿದ್ದಂತೆ ಆರ್ ಎಂ ಮಂಜುನಾಥ್ ಗೌಡ ಗರಂ ಆಗಿ ನಾನೇ ಈ ಬಾರಿ ಜಾತ್ರೆ ಮಾಡುತ್ತೇನೆ, ನನಗೂ ಅನುಭವ ಇದೆ ಎಂದು ಆರ್ಭಟಿಸಿದಾಗ ಇಡೀ ಸಭೆ ಮೌನವಾಯಿತು.
ಅಧಿಕಾರಿಗಳೇ ಜಾತ್ರೆ ನಡೆಸಲಿ ನಾವು ಅವರಿಗೆ ಸಹಕಾರ ನೀಡೋಣ. ಈ ಮನಸ್ತಾಪ ಎಲ್ಲಾ ಬೇಡ, ಶಾಸಕರು ಇದ್ದಾರೆ ತೀರ್ಮಾನ ಮಾಡುತ್ತಾರೆ. ಇದು ರಾಜಕಾರಣ ವಿಚಾರ ಅಲ್ಲ. ಯಾರೇ ಆದರೂ ಇದು ನಮ್ಮ ಊರಿನ ಜಾತ್ರೆ ಅದನ್ನು ಎಲ್ಲರು ಸೇರಿ ಮಾಡಬೇಕು. ಅದನ್ನು ಬಿಟ್ಟು ಹೀಗೆ ಗಲಾಟೆ ಮಾಡುವುದಾದರೆ ಅಧಿಕಾರಿಗಳೇ ಜಾತ್ರೆ ನಡೆಸುತ್ತಾರೆ ಎಂದು ಗರಂ ಆದರು.
ಹಿರಿಯ ಮುಖಂಡರ ಹೊಂದಾಣಿಕೆ ಕಿರಿಯರಲ್ಲಿ ಇಲ್ಲವೇ ..!?
ಶಾಸಕ ಆರಗ ಜ್ಞಾನೇಂದ್ರ ಹಾಗೂ ಆರ್ ಎಂ ಮಂಜುನಾಥ್ ಗೌಡರ ಮಾತಿನ ಶೈಲಿ ಸಭೆಯಲ್ಲಿದ್ದವರನ್ನು ಬೆರಗುಗೊಳಿಸುವಂತೆ ಮಾಡಿತು. ಸಭೆ ಆರಂಭದಲ್ಲಿ ಕಿರಿಯ ಕಾರ್ಯಕರ್ತರಲ್ಲಿರುವ ಹೊಂದಾಣಿಕೆ ಹೇಗೆ ಎಂಬುದು ತಿಳಿದರೆ, ಅದನ್ನೆಲ್ಲಾ ಸರಿಪಡಿಸುವ ಮೂಲಕ ಜಾತ್ರೆಯ ಸ್ಪಷ್ಟ ಚಿತ್ರಣ ಕೊಟ್ಟ ಹಿರಿಯ ರಾಜಕಾರಣಿಗಳನ್ನು ನೋಡಿದರೆ ಹಿರಿಯ ಮುಖಂಡರ ಹೊಂದಾಣಿಕೆ ಕಿರಿಯರಲ್ಲಿ ಇಲ್ಲವೇ ..!? ಎಂಬ ಅನುಮಾನ ಸಹ ಮೂಡಿತು.
ಇದನ್ನೂ ಓದಿ: Holehonnur: ಸರಕಾರದಿಂದ ಬಿಡುಗಡೆಯಾಗದ ಹಣ… ಗ್ರಾಮ ಪಂಚಾಯತ್ ಸದಸ್ಯನಿಂದ ರಸ್ತೆ ದುರಸ್ಥಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
MUST WATCH
ಹೊಸ ಸೇರ್ಪಡೆ
Hubli: ತೀವ್ರತೆ ಪಡೆದ ಬಂದ್; ಬಸ್-ಆಟೋ ಇಲ್ಲದೆ ಪರದಾಡಿದ ಜನತೆ
Bhopal: ಉಗ್ರರನ್ನು ಇರಿಸಲಾಗಿದ್ದ ಕೇಂದ್ರ ಕಾರಾಗೃಹದ ಬಳಿ ಚೀನಾ ನಿರ್ಮಿತ ಡ್ರೋನ್ ಪತ್ತೆ…
Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!
Bigg Boss: ಫಿನಾಲೆಗೂ ಮುನ್ನ ವಾರದ ಮಧ್ಯದಲ್ಲೇ ಎಲಿಮಿನೇಷನ್; ಹೊರಗೆ ಹೋದದ್ದು ಇವರೇ
Champions Trophy: ರಾಹುಲ್, ಶಮಿ, ಜಡೇಜಾ ಸ್ಥಾನ ಪಡೆಯುವುದು ಅನುಮಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.