ಜಾನುವಾರುಗಳಿಗೆ ಚರ್ಮಗಂಟು ರೋಗ ಬಾಧೆ
ಶಿವಮೊಗ್ಗ ಜಿಲ್ಲೆ 60 ಕ್ಕೂ ಹೆಚ್ಚು ಹಳ್ಳಿಗಳ ಜಾನುವಾರಿಗೆ ಅಂಟಿದ ರೋಗ
Team Udayavani, Oct 24, 2020, 7:24 PM IST
ಶಿವಮೊಗ್ಗ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದ್ದು, ರಾಸುಗಳು ತೊಂದರೆ ಅನುಭವಿಸುವಂತೆ ಆಗಿದೆ. ಪಾಕ್‌ಸ್ ವಿರೀಡೆ ಎಂಬ ಗುಂಪಿನ ವೈರಾಣುವಿನಿಂದ ದನ ಮತ್ತು ಎಮ್ಮೆಗಳಿಗೆ ಬರುವ ಕಾಯಿಲೆ ಇದಾಗಿದೆ. ಜಿಲ್ಲೆಯ ಬಯಲುಸೀಮೆ ಪ್ರದೇಶ ಸೇರಿದಂತೆ ಹಲವೆಡೆ ಜಾನುವಾರುಗಳಿಗೆ ಚರ್ಮಗಂಟು ರೋಗ ಕಾಣಿಸಿಕೊಂಡಿದೆ.
ರೋಗ ತಗುಲಿದ ಪ್ರಾಣಿಗಳಸಂಪರ್ಕದಿಂದ ಕಲುಷಿತ ನೀರು ಮತ್ತು ಮೇವಿನಿಂದಲೂ ಇದು ಹರಡುವ ಸಾಧ್ಯತೆ ಇರುತ್ತದೆ. ಈ ರೋಗ ಮನುಷ್ಯರಿಗೆ ಹರಡುವುದಿಲ್ಲ. ಚರ್ಮಗಂಟು ರೋಗ ತಗುಲಿದ ದನಗಳಲ್ಲಿ ಅತಿಯಾದ ಜ್ವರ ಕಾಣಿಸಿಕೊಳ್ಳುತ್ತದೆ. ರಾಸುಗಳು ಮಂಕಾಗಿ ಮೂಗು, ಕಣ್ಣುಗಳಲ್ಲಿ ಸೋರುವಿಕೆ, ಮೇವು ತಿನ್ನದೇಇರುವುದು, ಜೊಲ್ಲು ಸುರಿಸದೇ ಇರುವುದು, ಊತ ಕಾಣಿಸಿಕೊಳ್ಳುತ್ತದೆ. ಕಾಲುಗಳಲ್ಲಿ ಗೆಡ್ಡೆಗಳಾದರೆ ನಡೆದಾಡಲು ತೊಂದರೆಯಾಗುತ್ತದೆ. ವಾರದ ನಂತರ ಚರ್ಮದಲ್ಲಿ 3 ರಿಂದ 5 ಸೆಂ.ಮೀ.ನಷ್ಟು ಅಗಲದ ಗಂಟುಗಳು ಕಾಣಿಸಿಕೊಂಡು ಒಡೆದು ಗಾಯಗಳಾಗಿ ನೋವು ಉಂಟಾಗುತ್ತದೆ. ಸೂಕ್ತ ಚಿಕಿತ್ಸೆ ನೀಡದಿದ್ದಲ್ಲಿ ತೊಂದರೆಯಾಗುತ್ತದೆ. ರೋಗಗ್ರಸ್ತ ರಾಸುಗಳನ್ನು ಆರೋಗ್ಯವಂತ ದನಗಳಿಗೆ ಬೇರ್ಪಡಿಸಿ ಪಶು ವೈದ್ಯರಿಂದ ಸೂಕ್ತ ಚಿಕಿತ್ಸೆ ಕೊಡಿಸಬೇಕಿದೆ. ರಾಸುಗಳನ್ನುಸಾಕುವವರು ಸಾಧ್ಯವಾದರೆ ಸೊಳ್ಳೆಪರದೆ ಬಳಸಬೇಕು. ಚರ್ಮದ ಗಂಟುಗಳ ಮೇಲೆ ಹೊಂಗೆ ಎಣ್ಣಿ ಅಥವಾ ಬೇವಿನ ಎಣ್ಣೆ ಹಚ್ಚಿ ಸೊಳ್ಳೆ, ನೊಣಗಳ ಹಾವಳಿಯನ್ನು ಹತೋಟಿಗೆ ತರಬೇಕು. ರೋಗ ಕಾಣಿಸಿಕೊಂಡ ಪ್ರದೇಶದಲ್ಲಿ ರಾಸುಗಳ ಸಾಗಾಣಿಕೆ, ಜಾತ್ರೆ, ಪಶುಮೇಳ ನಡೆಸಬಾರದು.
ರಾಸುಗಳು ಚೇತರಿಸಿಕೊಳ್ಳಲು ಕನಿಷ್ಟ 2 ರಿಂದ 3 ವಾರಗಳ ಚಿಕಿತ್ಸೆ ಅಗತ್ಯ. ರೋಗ ತೀವ್ರಗೊಂಡ ಸಂದರ್ಭದಲ್ಲಿ ಮೇಕೆ ಸಿಡುಬು ನಿರೋಧಕ ಲಸಿಕೆಯನ್ನು ಬಳಸಿಈ ರೋಗವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಬಹುದಾಗಿದೆ. ರೋಗ ಲಕ್ಷಣ ಕಾಣಿಸಿಕೊಂಡಜಾನುವಾರು ಮಾಲೀಕರು ಸ್ಥಳೀಯ ಪಶು ಆಸ್ಪತ್ರೆಗೆ ಭೇಟಿ ನೀಡಿ ಸಲಹೆ ಪಡೆಯಬಹುದಾಗಿದೆ.
ಜಿಲ್ಲೆಯಲ್ಲಿ ಸುಮಾರು 60 ಹಳ್ಳಿಗಳಲ್ಲಿ ಈ ಕಾಯಿಲೆ ಕಾಣಿಸಿಕೊಂಡಿದ್ದು, ಇಲಾಖೆಯಿಂದ ಸೂಕ್ತ ಚಿಕಿತ್ಸೆ ನೀಡಿದ ನಂತರ ನಿಯಂತ್ರಣಕ್ಕೆ ಬಂದಿದೆ. ಇದುವರೆಗೂ ಸುಮಾರು 7000 ಲಸಿಕೆಯನ್ನು ಹಾಕಲಾಗಿದೆ. ಇದು ಮಾರಣಾಂತಿಕ ಕಾಯಿಲೆ ಅಲ್ಲ. ಆದರೆ ರೋಗ ಕಾಣಿಸಿಕೊಂಡ ಜಾನುವಾರುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು. ಗಾಯವಾದಾಗ ಹೆಚ್ಚು ಹರಡದಂತೆ ಹೊಂಗೆ ಮತ್ತು ಬೇವಿನ ಎಣ್ಣೆ ಹಚ್ಚಬೇಕು ಮತ್ತು ಇಲಾಖೆಯೊಂದಿಗೆ ಸಂಪರ್ಕಿಸಿ ಲಸಿಕೆ ಹಾಕಿಸಬೇಕು. –ಡಾ|ಟಿ.ಎಂ. ಸದಾಶಿವ, ಪಶುಪಾಲನಾ ಇಲಾಖೆ ಜಂಟಿ ನಿರ್ದೇಶಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Anandapura: ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿ; ತಪ್ಪಿದ ಅನಾಹುತ
ಸಾಗರಕ್ಕೆ ಆಗಮಿಸಿದ ಡಾ.ನಾ.ಡಿಸೋಜಾ ಪಾರ್ಥಿವ ಶರೀರ; ಗಣ್ಯರು, ಅಧಿಕಾರಿಗಳಿಂದ ಅಂತಿಮ ದರ್ಶನ
Hosanagar: ಪ್ರಪಾತಕ್ಕೆ ಉರುಳಿದ ಬಸ್; ಸಣ್ಣ ಪುಟ್ಟ ಗಾಯಗಳಿಂದ ಪ್ರಯಾಣಿಕರು ಪಾರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.