ರೈತ ಅನುವುಗಾರರ ಮುಂದುವರಿಸಿ
Team Udayavani, Jun 11, 2020, 1:35 PM IST
ಸೊರಬ: ರೈತ ಅನುವುಗಾರರ ಸಂಘದಿಂದ ಶಿರಸ್ತೇದಾರ್‌ಗೆ ಮನವಿ ಸಲ್ಲಿಸಲಾಯಿತು
ಸೊರಬ: ಕೃಷಿ ಇಲಾಖೆಯಲ್ಲಿನ ರೈತ ಅನುವುಗಾರ ಸಿಬ್ಬಂದಿಯನ್ನು ಮುಂದಿನ ಆರ್ಥಿಕ ವರ್ಷದ ಅವಧಿಗೂ ಮುಂದುವರೆಸುವಂತೆ ಒತ್ತಾಯಿಸಿ ರೈತ ಅನುವುಗಾರರ ಸಂಘದಿಂದ ತಾಲೂಕು ಕಚೇರಿಯಲ್ಲಿ ಶಿರಸ್ತೇದಾರ್ ಚನ್ನಕೇಶವ ಅವರಿಗೆ ಮನವಿ ಸಲ್ಲಿಸಲಾಯಿತು.
ಕೃಷಿ ಇಲಾಖೆಯಲ್ಲಿನ ರೈತ ಅನುವುಗಾರರ ಸೇವೆಯನ್ನು 2020-21ನೇ ಸಾಲಿನಲ್ಲಿ ಇಲಾಖೆಯ ಚಟುವಟಿಕೆಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಮುಂದುವರೆಸಬೇಕು. ಮುಂಗಾರು ಬಿತ್ತನೆ ಬಗ್ಗೆ ಹಾಗೂ ಇತರೆ ಕೃಷಿ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲು ರೈತ ಅನುವುಗಾರರನ್ನು ಬಳಸಿಕೊಳ್ಳಲಾಗುತ್ತಿದೆ. ಕೋವಿಡ್-19 ಪರಿಸ್ಥಿತಿಯಲ್ಲಿ ರೈತ ಅನುವುಗಾರರನ್ನು ಸೇವೆಯಲ್ಲಿ ಮುಂದುವರೆಸುವ ಜೊತೆಗೆ ಗೌರವಧನವನ್ನು 10 ಸಾವಿರ ರೂ., ನೀಡಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ರೈತ ಅನುವುಗಾರರ ಸಂಘದ ಜಿಲ್ಲಾಧ್ಯಕ್ಷ ಎಂ. ಸೋಮಪ್ಪ, ತಾಲೂಕು ಉಪಾಧ್ಯಕ್ಷ ಗಣಪತಿ, ಮಂಜುನಾಥ, ಶಿವಲಿಂಗಸ್ವಾಮಿ, ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ
Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.