ಅರಣ್ಯ ಹಕ್ಕು ಅರ್ಜಿ ವಜಾ ಸಹಿಸಲಸಾಧ್ಯ: ಮಧು
Team Udayavani, Feb 16, 2022, 3:23 PM IST
ಸೊರಬ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳರೈತ ವಿರೋಧಿ ನಿಲುವುಗಳಿಂದ ರೈತರುಕಂಗಾಲಾಗಿ ಬೀದಿಗೆ ಬಂದಿವೆ. ಇತ್ತ ತಾಲೂಕಿನಲ್ಲಿಮಂಜೂರಾದ ಬಗರ್‌ಹುಕುಂ ಹಾಗೂಅರಣ್ಯ ಹಕ್ಕು ಸಾಗುವಳಿದಾರ ಹಕ್ಕುಪತ್ರಗಳುಹಾಗೂ ಅರ್ಜಿಗಳನ್ನು ಶಾಸಕರ ಕುಮ್ಮಕ್ಕಿನಿಂದಅ ಧಿಕಾರಿಗಳು ವಜಾ ಮಾಡುತ್ತಿರುವುದನ್ನುಸಹಿಸಲು ಸಾಧ್ಯವಿಲ್ಲ ಎಂದು ಮಾಜಿಶಾಸಕ ಎಸ್. ಮಧು ಬಂಗಾರಪ್ಪ ಆಕ್ರೋಶವ್ಯಕ್ತಪಡಿಸಿದರು.
ಮಂಗಳವಾರ ಪಟ್ಟಣದ ತಾಲೂಕುಕಚೇರಿ ಮುಂಭಾಗ ಕಾಂಗ್ರೆಸ್ ವತಿಯಿಂದಹಮ್ಮಿಕೊಂಡಿದ್ದ ಬೃಹತ್ ರೈತ ಪ್ರತಿಭಟನೆಯಲ್ಲಿಪ್ರತಿಭಟನಾಕಾರರನುದ್ದೇಶಿಸಿ ಅವರುಮಾತನಾಡಿದರು.ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪಹಾಗೂ ಮಾಜಿ ಸಚಿವ ಕಾಗೋಡು ತಿಮ್ಮಪ್ಪಅವರು ಅ ಧಿಕಾರಾವ ಧಿಯಲ್ಲಿ ರೈತರ ಹಿತಕಾಯುವ ದೃಷ್ಟಿಯಿಂದ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಿದರು. ಬಗರ್‌ಹುಕುಂ ಸಾಗುವಳಿದಾರರಿಗೆ ಉಳಲು ನೆಲದಹಕ್ಕನ್ನು ಕೊಡಿಸಿದರು.
ಅವರ ಹಾದಿಯಲ್ಲಿತಾವು ಸಹ ಶಾಸಕರಾಗಿದ್ದಾಗ ಸಾವಿರಾರುಬಗರ್‌ಹುಕುಂ ಸಾಗುವಳಿದಾರರಿಗೆ ಪಕ್ಷ ಭೇದಮರೆತು ಜಾತ್ಯಾತೀತವಾಗಿ ಭೂಮಿಯನ್ನುಮಂಜೂರು ಮಾಡಿ ಹಕ್ಕುಪತ್ರ ನೀಡಲಾಗಿತ್ತು.ಆದರೆ, ಇಂದಿನ ಶಾಸಕರು ಪಿತೂರಿ ಮೂಲಕಭೂಮಿ ಹಕ್ಕನ್ನು ರೈತರಿಂದ ಕಸಿದುಕೊಳ್ಳಲುಅಧಿ ಕಾರಿಗಳ ಮೂಲಕ ಹುನ್ನಾರ ನಡೆಸಿದ್ದಾರೆ.ರೈತರು ಧೃತಿಗೆಡುವ ಅವಶ್ಯಕತೆ ಇಲ್ಲ. ಎಸ್.ಬಂಗಾರಪ್ಪನವರ ಪುತ್ರನಾಗಿ ಸದಾ ರೈತರಪರವಾಗಿ ನಿಲ್ಲುವುದಾಗಿ ತಿಳಿಸಿದರು.
ಬಗರ್‌ವಿಧಾನಸಭಾ ಮಾಜಿ ಅಧ್ಯಕ್ಷಕಾಗೋಡು ತಿಮ್ಮಪ್ಪ ಮಾತನಾಡಿ, ರೈತರಿಗೆಭೂಮಿಯ ಹಕ್ಕನ್ನು ಕೊಡಿಸಲು ಪುನಃಮಧು ಬಂಗಾರಪ್ಪ ನೇತೃತ್ವದಲ್ಲಿ ಹೋರಾಟಆರಂಭವಾಗಿದೆ ರೈತರಿಂದ ಉತ್ತಮ ಸ್ಪಂದನೆದೊರೆಯುತ್ತಿದೆ. ಕೇಂದ್ರ ಮತ್ತು ರಾಜ್ಯಸರ್ಕಾರಗಳ ನೀತಿಯಿಂದ ರೈತರು ಬೀದಿಗೆಇಳಿಯುವ ಸ್ಥಿತಿ ಬಂದಿದೆ. “ಹೋರಾಟವೇಜೈಲು, ಅನ್ಯಾಯ ಬಯಲು’ ಎನ್ನುವಮನಸ್ಥಿತಿಯಿಂದ ಪ್ರತಿಯೊಬ್ಬರೂ ತಮ್ಮ ಹಕ್ಕಿಗಾಗಿಹೋರಾಟ ಮಾಡಲೇಬೇಕಾದ ಅನಿವಾರ್ಯತೆಇದೆ ಎಂದರು.
ಪ್ರತಿಭಟನೆಯಲ್ಲಿ ಕಾಡಾಮಾಜಿ ಅಧ್ಯಕ್ಷ ನಗರ ಮಹಾದೇವಪ್ಪ, ಜಿಲ್ಲಾಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಲಕ್ಷಿ ¾àಕಾಂತ್‌ಚಿಮಣೂರು, ಸೊರಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷಅಣ್ಣಪ್ಪ ಹಾಲಘಟ್ಟ, ಆನವಟ್ಟಿ ಬ್ಲಾಕ್ ಕಾಂಗ್ರೆಸ್‌ಅಧ್ಯಕ್ಷ ಆರ್.ಸಿ. ಪಾಟೀಲ್, ಜಿಪಂ ಮಾಜಿಸದಸ್ಯರಾದ ವೀರೇಶ್ ಕೊಟಗಿ, ಶಿವಲಿಂಗೇಗೌಡ,ತಾರಾ ಶಿವಾನಂದ, ರಾಜೇಶ್ವರಿ, ಪ್ರಮುಖರಾದನಾಗರಾಜ ಚಿಕ್ಕಸವಿ, ಎಚ್. ಗಣಪತಿ,ಎಂ.ಡಿ. ಶೇಖರ್, ರವಿ ಬರಗಿ ಇತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.