ಬರುವ ವರ್ಷ ಶ್ರೀಧರ ಸ್ವಾಮಿಗಳ ವಿಶೇಷ 50ನೇ ಆರಾಧನೆ
Team Udayavani, Apr 18, 2022, 7:09 PM IST
ಸಾಗರ: ಮುಂದಿನ ವರ್ಷ ಶ್ರೀಧರ ಸ್ವಾಮಿಗಳ 50ನೇ ಆರಾಧನಾ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಹವನ, ಧಾರ್ಮಿಕ ಕಾರ‍್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಶ್ರೀಧರ ಮಹಾಮಂಡಲದ ಕಾರ್ಯದರ್ಶಿ ಕೆ.ವಿ. ಶ್ರೀಧರರಾವ್ ಹೇಳಿದರು.
ತಾಲೂಕಿನ ವರದಪುರದ ಶ್ರೀಧರಾಶ್ರಮದಲ್ಲಿ ಸೋಮವಾರ ಶ್ರೀಧರಸ್ವಾಮಿಗಳ 49ನೇ ಆರಾಧನಾ ಮಹೋತ್ಸವದಲ್ಲಿ ನೂತನ ವೆಬ್‌ಸೈಟ್ ಲೋಕಾರ್ಪಣೆ ನಡೆದ ಸಂದರ್ಭದಲ್ಲಿ ಅವರು ಮಾತನಾಡಿ, ಶ್ರೀರಾಮ ನವಮಿ ದಿನದಿಂದ 8 ದಿನಗಳ ಕಾಲ ಧಾರ್ಮಿಕ ಆಚರಣೆ ಮುಂತಾದವುಗಳ ಜತೆಗೆ 50ನೇ ಆರಾಧನೆಯನ್ನು ವಿಶೇಷವಾಗಿ ನಡೆಸಲಾಗುವುದು. ಕಳೆದ 2 ವರ್ಷಗಳಲ್ಲಿ ಕೊರೊನಾ ಸಾಂಕ್ರಮಿಕದ ಕಾರಣದಿಂದಾಗಿ ಆಶ್ರಮದಲ್ಲಿನ ಧಾರ್ಮಿಕ ಕಾರ‍್ಯಕ್ರಮಗಳಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ನಿರ್ಬಂಧಿಸಲಾಗಿತ್ತು. ಹೊರ ರಾಜ್ಯಗಳಿಂದಲೂ ಭಕ್ತರು ಆಶ್ರಮಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಸರಕಾರದ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಲಾಗುತ್ತಿದೆ. ಭಕ್ತಸಮೂಹಕ್ಕೆ ಆಗಿರುವ ತೊಂದರೆಗೆ ಮಹಾಮಂಡಲ ವಿಷಾದಿಸುತ್ತದೆ ಎಂದರು.
ವೆಬ್‌ಸೈಟ್ ವಿನ್ಯಾಸಗೊಳಿಸಿದ ಶ್ರೀಧರಭಟ್ ಕೆಳದಿ, ಕೋಶಾಧ್ಯಕ್ಷ ಭೀಮರಾವ್, ಮಹಾಮಂಡಲದ ನಿರ್ದೇಶಕ ಎಂ.ಜಿ.ಕೃಷ್ಣಮೂರ್ತಿ ಮತ್ತಿತರರು, ಪಿ.ಆರ್.ಕೃಷ್ಣಮೂರ್ತಿ, ಬಿ.ಆರ್.ಗಣಪತಿ ಬಂದಗದ್ದೆ, ಪ್ರಧಾನ ಅರ್ಚಕ ರಾಮಭಟ್ಟ, ಮಧು ಮಾಲ್ವೆ, ಮಹಾರಾಷ್ಟ್ರ ಸೇರಿದಂತೆ ವಿವಿಧ ಕಡೆಗಳಲ್ಲಿನ ಭಕ್ತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.