ಶಿವಮೊಗ್ಗ :  ಗೆಣಸಿನಕುಣಿಯಲ್ಲೊಂದು ಸ್ಪಂಜು ನೆಲ

ಅಧ್ಯಯನವೂ ಅಗತ್ಯ|ಪ್ರವಾಸೋದ್ಯಮಕ್ಕೂ ಪೂರಕ| ಶತಮಾನಗಳ ಹಿಂದೆ ಮಾಯವಾದ ಕೆರೆ ಮೇಲಿನ ವಿಸ್ಮಯ|ಕೆರೆಯಲ್ಲ, ಹೂಳಲ್ಲ, ಕಾಲಿಟ್ಟರೆ ಕಂಪಿಸಿ ಜೀವಭಯ ಸೃಷ್ಟಿ

Team Udayavani, Mar 19, 2021, 9:00 AM IST

Shivamogga

ಸಾಗರ: ಕಾಲಿಟ್ಟರೆ ಸ್ಪಂಜಿನಂತೆ ವರ್ತಿಸುವ, ಮನುಷ್ಯನ ಭಾರಕ್ಕೆ ಅಲ್ಲಿಯೇ ಸರಿದಾಡಿ ಜೀವಭಯ ಹುಟ್ಟಿಸುವ ಹಚ್ಚ ಹಸುರಿನ ಭೂ ಪ್ರದೇಶವೊಂದು ತಾಲೂಕಿನ ಆವಿನಹಳ್ಳಿ ಸಮೀಪದ ಗೆಣಸಿನಕುಣಿಯಲ್ಲಿದೆ.

ಗೆಣಸಿನಕುಣಿಯ ಸಿದ್ದೇಶ್ವರ ದೇವಾಲಯದ ಎದುರಿನ ಕೆರೆ ಪಕ್ಕದಲ್ಲಿ ಸೊಪ್ಪಿನ ಬೆಟ್ಟದ ನಡುವೆ ಹಸಿರು ಜೆಡ್ಡಿನಿಂದ ಕೂಡಿದ ಬಯಲು ಪ್ರದೇಶವಿದೆ. ಮಲೆನಾಡಿನ ನೀರಿನ ಒರತೆ ಇರುವ ಪ್ರದೇಶಗಳಲ್ಲಿ ಇಂತಹ ಭೂ ಸ್ವರೂಪ ಸಾಮಾನ್ಯವಾದರೂ ಮೆಟ್ಟಿದಾಗ ನೆಲದ ಮಣ್ಣಿನ ಪದರ ಸ್ಪ್ರಿಂಗ್‌ನಂತೆ ಮೇಲೆ ಕೆಳಗೆ ಆಗುವ ವಿಶಿಷ್ಟ ಅನುಭವ ನೀಡುತ್ತದೆ.

ಒಂದು ಕಾಲದಲ್ಲಿ ಗೆಣಸಿನಕುಣಿ ಸಿದ್ದೇಶ್ವರ ದೇಗುಲದ ಎದುರು ಮೂರು ಕೆರೆಗಳಿದ್ದವು. ದೇವಾಲಯದ ಎದುರಿನ ಕೆರೆಯಲ್ಲಿ ಈಗಲೂ ನೀರಿದ್ದು, ಗ್ರಾಪಂ ನೇತೃತ್ವದಲ್ಲಿ ದುರಸ್ತಿ ಕೆಲಸ ನಡೆದಿದೆ. ಈ ಕೆರೆಯ ಮೇಲೆ ಇರುವ ಇನ್ನೊಂದು ಕೆರೆ ಹೂಳು ತುಂಬಿದ್ದರೂ ಅಸ್ತಿತ್ವದಲ್ಲಿದೆ. ಆದರೆ ಕೆಳಗಿನ ಭಾಗದ ಸ್ಪಂಜು ಭೂಮಿ ವಿಸ್ಮಯದ ಜಾಗ ಈ ಭಾಗದಲ್ಲಿದೆ ಎನ್ನಲಾದ ಮೂರನೇ ಕೆರೆ ಪ್ರದೇಶ ಎಂದು ಇಲ್ಲಿನ ಗ್ರಾಪಂ ಸದಸ್ಯ ಕುಮಾರ್‌ ಕಂಚಿಮನೆ ಪ್ರತಿಪಾದಿಸುತ್ತಾರೆ.

ಅಲ್ಲೊಂದು ಕೆರೆ ಇರಬಹುದು ಎಂಬುದಕ್ಕೆ ಸಾಕ್ಷಿ ಎನ್ನುವಂತೆ ತುಸು ಮೇಲೆ ನೀರಿರುವ ಪುಷ್ಕರಣಿಯೊಂದು ಕಂಡುಬರುತ್ತಿದೆ. ಬಹುಪಾಲು ಕಡೆ ಕೆರೆಯಿದ್ದ ಜಾಗ ನಿರ್ವಹಣೆಯ ಕೊರತೆಯಿಂದ ಹೂಳು ತುಂಬುತ್ತ ಹೋಗುತ್ತದೆ. ಇದರಿಂದ ಕೆಸರು ಮಣ್ಣಿನ ಜೌಗು ಪ್ರದೇಶ ನಿರ್ಮಾಣವಾಗುತ್ತದೆ. ಆದರೆ ಗೆಣಸಿನಕುಣಿಯ ಸ್ಪಂಜು ಭೂಮಿ ಕೌತುಕದಲ್ಲಿ ಹೂಳು ಕಾಣಿಸುವುದಿಲ್ಲ.

ಹಸಿರು ಹುಲ್ಲು ಹಾಸು ಕೃತಕವಾಗಿ ಸಿಂಥೆಟಿಕ್‌ ಟರ್ಫ್‌ ಹಾಕಿದಂತೆ ಚೂರು ಬಲ ಹಾಕಿ ಒತ್ತಿದಾಗಲೆಲ್ಲ ಒಳಹೋಗುತ್ತದೆ. ನರ್ತಿಸಿದರೆ ನೆಲವೂ ನರ್ತಿಸಿದ ಅನುಭವವಾಗುತ್ತದೆ. ನಾಲ್ಕು ವರ್ಷಗಳ ಹಿಂದೆ ಆಗ ಆನಂದಪುರದಲ್ಲಿ ಉಪತಹಶೀಲ್ದಾರ್‌ ಆಗಿ ಕಾರ್ಯ ನಿರ್ವಹಿಸಿದ್ದ ಪುಟ್ಟರಾಜ ಗೌಡರು ಮೊದಲ ಬಾರಿಗೆ ಈ ವಿಸ್ಮಯದ ಮಾಹಿತಿ ಪಡೆದು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು. ಇದರ ಹಿಂದಿನ ವೈಜ್ಞಾನಿಕ ಹಿನ್ನೆಲೆ ಅರಿಯುವ ಪ್ರಯತ್ನವಾಗಿ ಅವರು ಸಂಬಂಧಿಸಿದ ಇಲಾಖೆಗಳಿಗೂ ಮಾಹಿತಿ ನೀಡಿದ್ದರು. ಆದರೆ ಹೆಚ್ಚಿನ ಸಂಶೋಧನೆಗಳು ಮಾತ್ರ ನಡೆದಿಲ್ಲ.

 

land

 ಮಳೆಗಾಲದಲ್ಲೂ ನೀರು ನಿಲ್ಲುವುದಿಲ್ಲ

ಸ್ವಾರಸ್ಯ ಎಂದರೆ ಈ ಪ್ರದೇಶ ಕೆಲ ವರ್ಷಗಳ ಹಿಂದೆ ಅಕ್ಷರಶಃ ಜೌಗು ಪ್ರದೇಶವೇ ಆಗಿತ್ತು. ಇದನ್ನು ಈ ಭಾಗದ ಜನ ಹುಡ್ಲು ಕೆರೆ ಎನ್ನುತ್ತಿದ್ದರು.

ಹುಲ್ಲಿನ ಆಸೆಗೆ ಈ ಜಾಗಕ್ಕೆ ತೆರಳುವ ಹತ್ತಾರು ಜಾನುವಾರುಗಳು ಇಲ್ಲಿನ ಹೂಳಿನಲ್ಲಿ ಸಿಲುಕಿಕೊಂಡ ಪ್ರಕರಣಗಳು ನಡೆದಿತ್ತು. ಆಗ ಊರವರು ಅವುಗಳನ್ನು ರಕ್ಷಿಸುತ್ತಿದ್ದ ಘಟನೆಗಳನ್ನು ಕುಮಾರ್‌ ನೆನಪಿಸಿಕೊಳ್ಳುತ್ತಾರೆ.

ಇತ್ತೀಚೆಗೆ ಈ ಸ್ಥಳಕ್ಕೆ ಆಗಮಿಸಿ ಪರೀಕ್ಷೆ ನಡೆಸಿರುವ ಅನಾಮಿಕರು ಇಲ್ಲಿನ ಹುಲ್ಲುಹಾಸಿನ ಮಧ್ಯದಲ್ಲಿ ಗುಳಿಯೊಂದನ್ನು ತೋಡಿರುವುದು ಕಂಡುಬರುತ್ತದೆ. ಸ್ಥಳೀಯ ಸಿದ್ದೇಶ್ವರ ದೇವಾಲಯದ ಅರ್ಚಕರಾಗಿರುವ ಆನಂದರಾವ್‌ ಕೆ.ಜೆ. ಇದರೊಳಗೆ ಕಾಲು ಹಾಕಿ ಪರೀಕ್ಷಿಸಿ ಹೇಳುತ್ತಾರೆ. “ಒಂದೂವರೆ ಅಡಿಗೇ ಗಟ್ಟಿ ನೆಲವಿದೆ. ಯಾವುದೇ ಹೂಳು ಕಾಣಿಸುವುದಿಲ್ಲ’. ಇಂತಹದು ದೇಶದ ಹಲವೆಡೆ ಇದೆ. ರಾಜ್ಯದಲ್ಲಿ ಇದಕ್ಕೆ ಕಂಪಲು ಎಂತಲೂ ಕರೆಯುತ್ತಾರೆ ಎಂಬ ಮಾತಿದೆ. ಸ್ವಾರಸ್ಯವೆಂದರೆ, ಜೋರು ಮಳೆಗಾಲದಲ್ಲಿಯೂ ಈ ಜಾಗದಲ್ಲಿ ನೀರು ನಿಲ್ಲುವುದಿಲ್ಲ.

ಈ ರೀತಿಯ ಜೌಗು ಪ್ರದೇಶ ನಿರ್ಮಾಣವಾಗುವ ಹಿನ್ನೆಲೆಯಲ್ಲಿ ಹಲವು ವಾದಗಳಿವೆ. ಸಣ್ಣ ನದಿಯ ಅಂಚಿನುದ್ದಕ್ಕೆ ಇರುವ ಜೌಗು ನೆಲದಲ್ಲಿ ಮರಳು, ಅಂಟು ಜೇಡಿ ಮುಂತಾದ ಮಣ್ಣು ಕಣಗಳು ಒಟ್ಟುಗೂಡುತ್ತವೆ. ಸಾವಯವ ವಸ್ತುಗಳು ನಿಧಾನವಾಗಿ ಸಂಗ್ರಹವಾಗಿ ಇಂಕ್‌ μಲ್ಲರ್‌ ತಂತ್ರದ ಮಾದರಿಯಲ್ಲಿ ನೀರು ಹೀರಿಕೊಳ್ಳುತ್ತದೆ. ತನ್ನ ತೂಕಕ್ಕಿಂತ 13 ಪಟ್ಟು. ತೇವಾಂಶವನ್ನು ಹೊಂದಿರುವ ದೈತ್ಯ ಸ್ಪಂಜಿನಂತೆ ಕಾರ್ಯ ನಿರ್ವಹಿಸುವ ಪೀಟ್‌ ಜೌಗು ಪ್ರದೇಶಗಳು ಹಸಿರು ಹಾಸಿನ ಗುಮ್ಮಟವನ್ನು ರೂಪಿಸುತ್ತವೆ. ಈ ಕಾರಣದಿಂದ ಇಂತಹ ಭೂಮಿ ಮೇಲೆ ನಡೆದಾಗ ಸ್ಪಂಜಿನ ಮೇಲೆ ನಡೆದ ಅನುಭವವಾಗುತ್ತದೆ. ಆದರೆ ಇಂತಹ ಪ್ರದೇಶ ನಿರ್ಮಾಣಕ್ಕೆ ಸಾವಿರಾರು ವರ್ಷ ಬೇಕಾಗುತ್ತದೆ ಎಂಬ ಪ್ರತಿಪಾದನೆಯಿದೆ. ಗೆಣಸಿನಕುಣಿಯ ಜೌಗು ಭೂಮಿ ಸ್ಪಂಜಿನ ನೆಲವಾಗಲು ಸಾವಿರಾರು ವರ್ಷ ತೆಗೆದುಕೊಂಡಿದೆ ಎಂಬ ವಾದಕ್ಕೆ ಸಾಕ್ಷ್ಯಗಳಿಲ್ಲ.

ಎಲ್ಲಿದೆ?

ಸಾಗರ- ಸಿಗಂದೂರು ರಸ್ತೆಯಲ್ಲಿ ಸುಮಾರು 13 ಕಿಮೀ ಸಾಗಿದರೆ ಆವಿನಹಳ್ಳಿ ಸಿಗುತ್ತದೆ. ಅಲ್ಲಿಂದ ಮೂರು ಕಿಮೀ ದೂರದಲ್ಲಿ ಗೆಣಸಿನಕುಣಿ. ಅಲ್ಲಿಂದ ಅನತಿ ದೂರದಲ್ಲಿರುವ ಸಿದ್ದೇಶ್ವರ ದೇವಾಲಯದ ಎದುರು ಇರುವ ಕೆರೆ ಪಕ್ಕದಲ್ಲಿ ಈ ಸ್ಪಂಜು ಭೂಮಿ ಕಂಡುಬರುತ್ತಿದೆ.

land

ವಿಶಿಷ್ಟ ಸ್ಮಾರಕವಾಗಿ ಉಳಿಸಿಕೊಳ್ಳಿ!

ಗೆಣಸಿನಕುಣಿಯ ಈ ಸ್ಥಳ ಪರಿಸರ ವಿಸ್ಮಯವಾಗಿರುವಾಗ, ವೈಜ್ಞಾ,ನಿಕ ಸಂಶೋಧನೆಗಳಿಗಿಂತ ಇಂತಹ ಸ್ಥಳವನ್ನು ಸಂರಕ್ಷಿಸುವುದು ಅತ್ಯಂತ ಅಗತ್ಯ. ಇಡೀ ಪ್ರದೇಶವನ್ನು ಆಡಳಿತ ತನ್ನ ವಶಕ್ಕೆ ತೆಗೆದುಕೊಂಡು ಜನ, ಪ್ರಾಣಿಗಳ ಪ್ರವೇಶವನ್ನು ನಿರ್ಬಂ ಧಿಸಬೇಕು. ಈಗ ಜನ ಹಾಗೂ ಜಾನುವಾರುಗಳ ಓಡಾಟದಿಂದ ಆಗಿರುವ ಹಾನಿಯನ್ನು ತಡೆದರೆ ಇಲ್ಲಿನ ಭೂಮಿಯ ಸ್ಪಂಜಿನ ಅನುಭವ ಹೆಚ್ಚುವುದು ಖಚಿತ. ನಂತರ ಅಧ್ಯಯನದಲ್ಲಿ ಆಸಕ್ತರಿಗೆ ಹಾಗೂ ಕೌತುಕಪ್ರಿಯ ಜನರಿಗೆ ಸೀಮಿತ ಅವಕಾಶ ಕಲ್ಪಿಸುವ ಮೂಲಕ ವಿಶಿಷ್ಟತೆಯನ್ನು ಕಾಪಾಡಬಹುದು. ಸ್ಥಳೀಯ ಆವಿನಹಳ್ಳಿ ಗ್ರಾಪಂ ಈ ಬಗ್ಗೆ ವಿಶೇಷ ಗಮನ ಕೊಡಬೇಕಾದ ಅಗತ್ಯವಿದೆ ಎಂದು ಆವಿನಹಳ್ಳಿಯ ಮಂಜುನಾಥ್‌ ಆಶಯ ವ್ಯಕ್ತಪಡಿಸುತ್ತಾರೆ.

ಮಾ.ವೆಂ.ಸ. ಪ್ರಸಾದ್‌

ಟಾಪ್ ನ್ಯೂಸ್

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

10

Year Ender: Horror movies-2024 ರ ಟಾಪ್‌ 5 ಹಾರರ್ ಚಲನಚಿತ್ರಗಳು

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ

Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-ct

Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?

ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ‌ ಕಾಂಗ್ರೆಸ್ ಶಾಸಕ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

dhankar (2)

Jagdeep Dhankhar; ರಾಜ್ಯಸಭಾ ಸಭಾಪತಿ ವಿರುದ್ದದ ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ತಿರಸ್ಕೃತ

Yakshagana Tenku

Yakshagana;ಕನ್ನಡ ಭಾಷೆಯ ಮೌಲ್ಯವನ್ನು ಉಳಿಸುವಲ್ಲಿ ಸಾರ್ವಕಾಲಿಕ ಕೊಡುಗೆ

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

Mollywood: ಸೂಪರ್‌ ಸ್ಟಾರ್ ಮೋಹನ್‌ ಲಾಲ್‌ಗೆ ‘ಆವೇಶಮ್‌ʼ ನಿರ್ದೇಶಕ ಆ್ಯಕ್ಷನ್ ಕಟ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್

ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜೀನಾಮೆ ನೀಡುವುದು ಉತ್ತಮ: ಲಾಲು ಪ್ರಸಾದ್ ಯಾದವ್ ಕಿಡಿ

Is Ashwin made a hasty decision: Is this how much Kohli is worth in the dressing room?

BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ :‌ ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.