ಶ್ರೀಧರ ದೀಕ್ಷಿತ್ ಸನ್ಯಾಸ ಸ್ವೀಕಾರ ನಾಳೆ
Team Udayavani, Jan 27, 2018, 6:20 AM IST
ಸಾಗರ: ತಾಲೂಕಿನ ತ್ಯಾಗರ್ತಿಯ ಸಚ್ಚಿದಾನಂದ ಆಶ್ರಮ ಸತ್ಯಪೀಠದ ಶ್ರೀಧರ ದೀಕ್ಷಿತ್ ಸ್ವಾಮೀಜಿಗಳು ಭಾನುವಾರ
(ಜ.28) ಶಿವಮೊಗ್ಗ ಸಮೀಪದ ಮತ್ತೂರಿನಲ್ಲಿ ಸನ್ಯಾಸ ಸ್ವೀಕಾರ ಮಾಡಲಿದ್ದಾರೆ.
ಕೂಡಲಿ ಶೃಂಗೇರಿಯ ವಿದ್ಯಾರಣ್ಯ ಭಾರತೀ ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಮತ್ತೂರಿನ ವಿಶ್ವಾಸಾನಂದ ತೀರ್ಥರು ಸನ್ಯಾಸ ದೀಕ್ಷೆ ಉಪದೇಶ ನೀಡಲಿದ್ದಾರೆ. ಮತ್ತೂರಿನ ವೇದಬ್ರಹ್ಮ ಮಾರ್ಕಾಂಡೇಯ ಅವಧಾನಿಗಳ ನಡೆಯಲಿದ್ದು, ಪೂರ್ವಭಾವಿಯಾಗಿ ಗುರುವಾರದಿಂದಲೇ ಕಾರ್ಯಕ್ರಮಗಳು ಆರಂಭವಾಗಿವೆ. ಸಾಗರದ ವೆಂಕಟೇಶ್ ದೀಕ್ಷಿತ್ ಹಾಗೂ ರಮಾಬಾಯಿಯವರ ಮಗನಾಗಿ 1951ರಲ್ಲಿ ಜನಿಸಿದ ಶ್ರೀಧರ ದೀಕ್ಷಿತ್, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ಸಾಗರದಲ್ಲೇ ಮುಗಿಸಿದರು. ನಂತರ ಬೆಂಗಳೂರಿನಲ್ಲಿ ಲೈಬ್ರರಿ ತರಬೇತಿ ಪಡೆದು ನಗರದ ಲಾಲ್‌ಬಹದ್ದೂರ್ ಕಾಲೇಜಿನಲ್ಲಿ ಗ್ರಂಥಾಲಯ ಸಹಾಯಕರಾಗಿ 26 ವರ್ಷ ಸೇವೆ ಸಲ್ಲಿಸಿದ್ದಾರೆ. ನಂತರ ಆಧ್ಯಾತ್ಮಿಕ ಸೆಲೆಯಿಂದ ಪ್ರೇರೇಪಣೆಯಾಗಿ ಸರ್ಕಾರಿ ನೌಕರಿಯಿಂದ ಸ್ವಯಂ ನಿವೃತ್ತಿ ಹೊಂದಿ ಬಳ್ಳಾರಿಯ ಸಿಂಹಾದ್ರಿ ಸ್ವಾಮಿಗಳಿಂದ ಪಂಚೀಕರಣ ಶಾಸ್ತ್ರದ ಕುರಿತು ಅನುಗ್ರಹಿತರಾದರು.
2002ರಲ್ಲಿ ತ್ಯಾಗರ್ತಿಯ ದೇವಸ್ಥಾನವೊಂದರಲ್ಲಿ ಒಂದು ವರ್ಷ ತಪಸ್ಸನ್ನು ನಡೆಸಿದ ನಂತರ ಅಲ್ಲಿಯೇ ಸಮೀಪದಲ್ಲಿ
ಆಶ್ರಮ ನಿರ್ಮಿಸಿಕೊಂಡು ಭಕ್ತರಿಗೆ ಆಧ್ಯಾತ್ಮದ ಕುರಿತಾಗಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Constitution: ಕಾಂಗ್ರೆಸ್ಸಿಗರಿಂದ ಸಂವಿಧಾನದ ರಕ್ಷಕರಂತೆ ಕಪಟ ನಾಟಕ: ಬಿ.ವೈ.ವಿಜಯೇಂದ್ರ
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.