Shigandur: ಜ. 14, 15 ರಂದು ಸಿಗಂದೂರು ಚೌಡೇಶ್ವರಿ ಜಾತ್ರಾ ಮಹೋತ್ಸವ
Team Udayavani, Jan 4, 2024, 9:42 AM IST
ಸಾಗರ: ಇಲ್ಲಿನ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ಧರ್ಮಾಧಿಕಾರಿ ಎಸ್. ರಾಮಪ್ಪ ನೇತೃತ್ವದಲ್ಲಿ ಜನವರಿ 14 ಮತ್ತು 15 ರಂದು ಮಕರ ಸಂಕ್ರಮಣ ಜಾತ್ರಾ ಮಹೋತ್ಸವ ನಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ.
14ರಂದು ಪ್ರಾತಃಕಾಲ 4 ಗಂಟೆಗೆ ಮಹಾಭಿಷೇಕ, ಅಲಂಕಾರ, ಆಭರಣ ಪೂಜೆ, ಚಂಡಿಕಾ ಹೋಮ ನೆರವೇರಲಿದ್ದು, ಈ ಬಾರಿಯ ಜಾತ್ರಾ ಮಹೋತ್ಸವಕ್ಕೆ ಆರ್ಯ ಈಡಿಗ ಸಂಘದ ರಾಜ್ಯ ಘಟಕದ ಅಧ್ಯಕ್ಷ ಎಂ. ತಿಮ್ಮೇಗೌಡ ಚಾಲನೆ ನೀಡಲಿದ್ದಾರೆ. ಬೆಳಿಗ್ಗೆ 8 ಗಂಟೆಗೆ ರಥ ಪೂಜೆಯೊಂದಿಗೆ ದೇವಿ ಮೂಲ ಸ್ಥಾನಕ್ಕೆ ಹೊರಡಲಿದ್ದು, ಕೇರಳದ ಶಿವಗಿರಿಯ ಬ್ರಹ್ಮಶ್ರೀ ನಾರಾಯಣ ಗುರು ಮಠದ ಪೀಠಾಧಿಪತಿ ಸಚ್ಚಿದಾನಂದ ಸ್ವಾಮೀಜಿ ಸೀಗೇ ಕಣಿವೆಯಲ್ಲಿ ಧರ್ಮ ಜ್ಯೋತಿಗೆ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ 12 ಗಂಟೆಗೆ ಜ್ಯೋತಿ ದೇವಸ್ಥಾನ ಪ್ರವೇಶ ಮಾಡಲಿದೆ. ರಂಭಾಪುರಿ ಮಹಾಸಂಸ್ಥಾನ ಮಳಲಿಮಠದ ಗುರು ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಅದೇ ದಿನ ರಾತ್ರಿ 9.30ಕ್ಕೆ ಸಿಗಂದೂರು ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯಲಿದೆ.
15ರ ಬೆಳಿಗ್ಗೆ 5ರಿಂದ ನವ ಚಂಡಿಕಾ ಹೋಮ, ರಾತ್ರಿ 8 ಗಂಟೆಗೆ ದುರ್ಗಾ ದೀಪ ನಮಸ್ಕಾರ, ಗುರು ಪೂಜೆ, ದೇವಿ ಪಾರಾಯಣ, ರಂಗಪೂಜೆ, ರಾತ್ರಿ 8.30ರಿಂದ ಕುದ್ರೋಳಿ ಗಣೇಶ ಮತ್ತು ಬಳಗದಿಂದ ಮ್ಯಾಜಿಕ್ ಶೋ ನಡೆಯಲಿದೆ. ಜಾತ್ರೆಯ ಪ್ರಯುಕ್ತ 9 ದಿನಗಳ ಕಾಲ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವಳದ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್.ಆರ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: Koppala: ರಾತ್ರೋರಾತ್ರಿ ಪಂಪ್ ಸೆಟ್ ಕೇಬಲ್ ಕಳ್ಳತನ ಮಾಡಿ ರೈತರ ನಿದ್ದೆಗೆಡಿಸಿದ ಖದೀಮರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.