ತವರು ಜಿಲ್ಲೆಗೂ ಸಿಕ್ಕಿಲ್ಲ ವಿಶೇಷ ಉಡುಗೊರೆ!
Team Udayavani, Mar 9, 2021, 1:36 PM IST
ಶಿವಮೊಗ್ಗ: ಸಿಎಂ ತವರು ಜಿಲ್ಲೆಗೆ ಈ ಬಜೆಟ್‌ನಲ್ಲಿ ನಿರೀಕ್ಷೆಯಷ್ಟು ಯೋಜನೆಗಳು ಘೋಷಣೆ ಆಗಿಲ್ಲ. ಆದರೆ ಈ ವರೆಗೆ ಬಜೆಟ್ ಹೊರತಾಗಿಯೇ ಅನೇಕ ಯೋಜನೆಗಳಿಗೆ ಜಿಲ್ಲೆಯಲ್ಲಿ ಚಾಲನೆ ಸಿಕ್ಕಿರುವುದರಿಂದ ಜಿಲ್ಲೆಯ ಜನ ಬೇಸರಗೊಳ್ಳುವ ಪ್ರಮೇಯವೂ ಇಲ್ಲ.
ಜಿಲ್ಲೆಯ ಪ್ರಮುಖ ಬೇಡಿಕೆಗಳಿಗೆ ಈ ಬಜೆಟ್‌ನಲ್ಲಿ ಧ್ವನಿ ಸಿಕ್ಕಿಲ್ಲ. ಭದ್ರಾವತಿಯ ಎಂಪಿಎಂ ಕಾರ್ಖಾನೆ ಪುನಶ್ಚೇತನ ಬಗ್ಗೆ ದಶಕಗಳಿಂದ ಬೇಡಿಕೆ ಇದ್ದು ಬಜೆಟ್‌ನಲ್ಲಿ ಸ್ಪಷ್ಟತೆ ಸಿಕ್ಕಿಲ್ಲ. ಕಾರ್ಖಾನೆಗೆ ಬೇಕಾದ ಕಚ್ಚಾವಸ್ತು ಪೂರೈಕೆಗೆ ಎಂಪಿಎಂಗೆನೀಡಿದ್ದ ಅರಣ್ಯ ಭೂಮಿಯ ಗುತ್ತಿಗೆ ಅವ ಧಿಯನ್ನು ಈಗಾಗಲೇ ವಿಸ್ತರಣೆ ಮಾಡಲಾಗಿದೆ. ಒಂದು ಬಾರಿ ಖಾಸಗಿ ಕಂಪನಿಗಳಿಂದ ಟೆಂಡರ್ ಆಹ್ವಾನಿಸಲಾಗಿತ್ತು. ಯಾರೂ ಭಾಗವಹಿಸಿರಲಿಲ್ಲ. ಈಗ ಮತ್ತೂಮ್ಮೆ ಕೆಲ ಮಾರ್ಪಾಡು ಮಾಡಿ ಟೆಂಡರ್ ಕರೆಯಲಾಗಿದ್ದು ಈವರೆಗೆ ಯಾವುದೇ ಪ್ರಗತಿ ಕಂಡಿಲ್ಲ.
ಎಂಪಿಎಂ ನೌಕರರನ್ನು ಜಾಗ ಖಾಲಿ ಮಾಡಿಸಲಾಗಿದ್ದು, ಎಂಪಿಎಂ ಅರಣ್ಯ ರಕ್ಷಕರು ಈಗ ಅತಂತ್ರ ಸ್ಥಿತಿಯಲ್ಲಿ ಇದ್ದಾರೆ. ಭದ್ರಾವತಿ-ಶಿವಮೊಗ್ಗ ಸೇರಿ ಪೊಲೀಸ್ ಕಮಿಷನರೇಟ್ ಮಾಡಲು ಈಗಾಗಲೇ ಸಿದ್ಧತೆ ಆರಂಭವಾಗಿದ್ದು ಎಲ್ಲಠಾಣೆಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಕಮಿಷನ ರೇಟ್ ಘೋಷಣೆ ಬಾಕಿ ಇದೆ. ಪಶುವೈದ್ಯಕೀಯ ಕಾಲೇಜನ್ನು ಮೇಲ್ದರ್ಜೆಗೆ ಏರಿಸುವ ಬೇಡಿಕೆ,ಕೈಗಾರಿಕೆ ಘೋಷಣೆ, ಮಾಚೇನಹಳ್ಳಿಯಲ್ಲಿ ಇರುವ ಕಿಯೋನಿಕ್ಸ್ ಐಟಿ, ಬಿಟಿ ಘಟಕವನ್ನು ವಿಸ್ತರಿಸಿದ್ದರೆ ಇನ್ನಷ್ಟು ಉದ್ಯೊಗಾವಕಾಶ ಲಭ್ಯವಾಗುತ್ತಿತ್ತು.
ಉಳಿದಂತೆ ಅಮೃತ್ ಯೋಜನೆ ಕುಡಿವ ನೀರು ಗುಣಮಟ್ಟ ಪರಿಶೀಲನಾ ಘಟಕ, ಪ್ರತಿ ಜಿಲ್ಲೆಗೆ ಗೋಶಾಲೆ, ಜ್ಞಾನಪೀಠ ಪುರಸ್ಕೃತರು ಓದಿದ ಶಾಲೆಗಳ ಸಮಗ್ರ ಅಭಿವೃದ್ಧಿ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಜೆ ಕಾಲೇಜು,ಕಟ್ಟಡ ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಗೃಹ ಸೌಲಭ್ಯ, ಸರಕಾರಿ ಕಚೇರಿಗಳಲ್ಲಿ ಉದ್ಯೋಗಸ್ಥ ಮಹಿಳೆಯರಿಗೆಶಿಶುಪಾಲನಾ ಕೇಂದ್ರ, ಸಮುದಾಯ ಹಸಿ ಗೊಬ್ಬರ ಘಟಕ ಯೋಜನೆಗಳು ಸಹ ಜಿಲ್ಲೆಗೆ ಸಿಗಲಿವೆ. ರಾಷ್ಟ್ರೀಯ ಖನಿಜ ನೀತಿ ಮಾದರಿಯಲ್ಲಿ ರಾಜ್ಯ ಖನಿಜ ನೀತಿ ಜಾರಿ ಮಾಡುವ ಇಂಗಿತ ವ್ಯಕ್ತಪಡಿಸಿರುವುದರಿಂದ ಕಲ್ಲುಗಣಿಗಾರಿಕೆ ಸಮಸ್ಯೆಗಳು ಇತ್ಯರ್ಥಗೊಳ್ಳುವ ಭರವಸೆ ದೊರೆತಿದೆ. ಗಣಿ, ಗುತ್ತಿಗೆ, ನವೀಕರಣಕ್ಕೆ ಏಕಗವಾಕ್ಷಿ ಯೋಜನೆ ಜಾರಿ ಮಾಡಿರುವುದರಿಂದ ಅಕ್ರಮ ಸಮಸ್ಯೆಗಳು ಕಡಿಮೆಯಾಗುವ ವಿಶ್ವಾಸವಿದೆ.
ಜಿಲ್ಲೆಗೆ ಸಿಕ್ಕಿದ್ದೇನು? :
- ಚಿಕ್ಕಮಗಳೂರು, ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡುಗು ಜಿಲ್ಲೆಗಳಲ್ಲಿ ಅಡಕೆ ಬೆಳೆಗಾರರನ್ನು ಬಾಧಿಸುತ್ತಿರುವ ಹಳದಿ ಎಲೆ ರೋಗದ ಕುರಿತು ಸಂಶೋಧನೆ ತೀವ್ರಗೊಳಿಸಲು ಮತ್ತು ಪರ್ಯಾಯ ಬೆಳೆ ಪ್ರೋತ್ಸಾಹಕ್ಕೆ 25 ಕೋಟಿ ರೂ.
- ಶಿವಮೊಗ್ಗದ ಪಶುವೈದ್ಯಕೀಯ ಕಾಲೇಜಿನಲ್ಲಿ ಸಂಶೋಧನಾ ಕೇಂದ್ರ ಸ್ಥಾಪನೆ. ಇದಕ್ಕಾಗಿ ಎರಡು ಕೋಟಿ ರೂ. ನಿಗದಿ. ಪಶುವೈದ್ಯಕೀಯ ವಿಜ್ಞಾನದಲ್ಲಿ ಆಯುರ್ವೇದ ಔಷಧಗಳ ಅಳವಡಿಕೆ ಉತ್ತೇಜಿಸಲು ಈ ಕೇಂದ್ರ ಸ್ಥಾಪನೆ.
- ಶಿವಮೊಗ್ಗದಲ್ಲಿರುವ ಆಯುರ್ವೇದ ಕಾಲೇಜನ್ನು ಆಯುಷ್ ವಿಶ್ವವಿದ್ಯಾಲಯವನ್ನಾಗಿ ಮೇಲ್ದರ್ಜೆಗೇರಿಸುವ ಘೋಷಣೆ.
- ಶಿವಮೊಗ್ಗ ಮತ್ತು ಮೈಸೂರಿನಲ್ಲಿ ನೂರು ಕೋಟಿ ರೂ. ವೆಚ್ಚದಲ್ಲಿ ಕಿದ್ವಾಯಿ ಸಂಸ್ಥೆ ಮಾದರಿಯಲ್ಲಿ ಪ್ರಾದೇಶಿಕ ಕ್ಯಾನ್ಸರ್ ಚಿಕಿತ್ಸಾ ಕೇಂದ್ರ.
- ವೈಜ್ಞಾನಿಕ ಸಂಚಾರ ನಿರ್ವಹಣಾ ವ್ಯವಸ್ಥೆಯಡಿ ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಶಿವಮೊಗ್ಗ-ಸವಳಂಗ-ಶಿಕಾರಿಪುರ- ಶಿರಾಳಕೊಪ್ಪಮಾರ್ಗದಲ್ಲಿ ಅತ್ಯಾಧುನಿಕ ಸಂಚಾರ ವ್ಯವಸ್ಥೆ, ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸಿಸ್ಟಮ್ ಮತ್ತು ಸೇಫ್ ಸಲ್ಯೂಷನ್ ಪ್ರಾಯೋಗಿಕವಾಗಿ ಆರಂಭ.
- ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಕ್ರಮವಾಗಿ 384 ಕೋಟಿ ರೂ. ಮತ್ತು 220 ಕೋಟಿ ರೂ. ಅನುದಾನ ನೀಡಲಾಗಿದೆ.
- ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಾಲುಸಂಕ ನಿರ್ಮಿಸಲು ಗ್ರಾಮಬಂಧ ಸೇತುವೆ ಯೋಜನೆ ಅಡಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಟಾನ
ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರಕಾರಪ್ರತಿ ವರ್ಷ ಬಜೆಟ್‌ನಲ್ಲಿ ನೂರಾರು ಘೋಷಣೆಮಾಡುತ್ತವೆ. ಆದರೆ ಈವರೆಗೆ ಒಂದೂ ಅನುಷ್ಠಾನವಾಗಿಲ್ಲ.ಅಭಿವೃದ್ಧಿಗಳು ಪುಸ್ತಕಕ್ಕೆ ಸೀಮಿತವಾಗಿದೆ. ಬಡವರು, ಮಧ್ಯಮ ವರ್ಗದವರು ಬೆಲೆ ಏರಿಕೆಯಿಂದತತ್ತರಿಸಿದ್ದಾರೆ. ಇಂತಹ ಸಮಯದಲ್ಲಿ ಸೆಸ್ ಕಡಿಮೆ ಮಾಡಿ ಜನರಿಗೆ ಅನುಕೂಲ ಮಾಡಬಹುದಿತ್ತು. ಆಪ್ರಯತ್ನ ಕಂಡಿಲ್ಲ. ಜಿಪಂ ಚುನಾವಣೆ, ವಿಧಾನಸಭೆ,ಲೋಕಸಭೆ ಉಪಚುನಾವಣೆ ಕೇಂದ್ರೀತವಾಗಿ ಬಜೆಟ್ ಮಂಡನೆಯಾಗಿದೆ. ಕಳೆದ ಬಾರಿ ಘೋಷಣೆಮಾಡಿದ್ದ ಆಯುಷ್ ವಿವಿ, ಜೋಗ ಜಲಪಾತಅಭಿವೃದ್ಧಿ ಸೇರಿದಂತೆ ಅನೇಕ ಘೋಷಣೆಗಳು ಈಡೇರಿಲ್ಲ. ಇದೊಂದು ನಿರಾಶಾದಾಯಕ, ಬೋಗಸ್ ಬಜೆಟ್.-ಎಚ್.ಎಸ್.ಸುಂದರೇಶ್,ಕಾಂಗ್ರೆಸ್ ಜಿಲ್ಲಾಧ್ಯಕ್ಷ
ಮಹಿಳಾ ದಿನಾಚರಣೆ ದಿನದಂದೇ ಮಂಡಿಸಿರುವ ರಾಜ್ಯ ಬಜೆಟ್‌ನಲ್ಲಿ ಮಹಿಳೆಯರು,ರೈತರ, ಜನರ ಹಿತ ಕಾಪಾಡ ಲಾಗಿದೆ.ಮಹಿಳೆಯರಿಗೆ ಶೇ. 4 ರಷ್ಟು ಬಡ್ಡಿದರ ದಲ್ಲಿ ಸಾಲ ಸೌಲಭ್ಯಕಲ್ಪಿಸಿರುವುದು, ಮಹಿಳೆಯರಿಗೆ ಉದ್ಯೋಗದಲ್ಲಿ ಶೇ. 10 ಮೀಸಲಾತಿ. ಪ್ರತೀ ಜಿಲ್ಲೆಗೆ 2 ಶಿಶುಪಾಲನ ಕೇಂದ್ರಗಳು.60 ಸಾವಿರ ಮಹಿಳೆಯರಿಗೆ ಸ್ವಯಂ ಉದ್ಯೋಗಹೀಗೆ ಹಲವು ಹೊಸ ಯೋಜನೆ ಘೋಷಿಸಲಾಗಿದೆ.ರೈಲ್ವೆ ಕಾಮಗಾರಿ ಭೂ ಸ್ವಾದೀನಕ್ಕೆ 2630 ಕೋಟಿ ರೂಮೀಸಲಿಡಲಾಗಿದೆ. ಸಾವಯವ ಕೃಷಿಗೆ 500 ಕೋಟಿ,ದೊಡ್ಡ ಕೊಡುಗೆಯಾಗಿದೆ. ಆರೋಗ್ಯ, ಶಿಕ್ಷಣ ಗ್ರಾಮೀಣ ಅಭಿವೃದ್ಧಿಗೆ ಒತ್ತು ನೀಡ ಲಾಗಿದೆ. ಶಿವಮೊಗ್ಗಕ್ಕೆ ಕಿದ್ವಾಯಿ ಆಸ್ಪತ್ರೆ, ಆಯುಷ್ ಕಾಲೇಜ್ ಹಾಗೂ ವಿಮಾನ ನಿಲ್ದಾಣಕ್ಕೆ ರೂ. 384 ಕೋಟಿ ನೀಡಿರುವುದು ಬಹಳ ದೊಡ್ಡಕೊಡುಗೆಯಾಗಿದೆ.– ಟಿ.ಡಿ.ಮೇಘರಾಜ್, ಬಿಜೆಪಿ ಜಿಲ್ಲಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.