ಮಗು ಮೇಲೆ ಬೀದಿ ನಾಯಿಗಳ ದಾಳಿ
Team Udayavani, Mar 12, 2018, 6:25 AM IST
ಶಿರಾಳಕೊಪ್ಪ: ಮನೆಯಲ್ಲಿ ಮಲಗಿದ್ದ ಐದು ತಿಂಗಳ ಹಸುಗೂಸಿನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ
ಪರಿಣಾಮ ಮಗು ತೀವ್ರವಾಗಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ.
ಮಾರಣಾಂತಿಕ ಗಾಯಕ್ಕೊಳಗಾದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಪಟ್ಟಣದ ಮಿಡ್ಲ್ ಸ್ಕೂಲ್ ಹಿಂಭಾಗ ಈ ಘಟನೆ ನಡೆದಿದ್ದು, ಲಕ್ಷ್ಮಣ ಕಲಾಲ್ ಎಂಬುವರ ಮಗುವನ್ನು ಬೀದಿ ನಾಯಿಗಳು ಕಚ್ಚಿ ಗಾಯಗೊಳಿಸಿವೆ. ಮಗುವಿನ ಮುಖ, ಕಿವಿ, ಕುತ್ತಿಗೆ ಭಾಗದಲ್ಲಿ ಕಚ್ಚಿವೆ. ಅಲ್ಲಿಯೇ ಇದ್ದ ಮತ್ತೂಬ್ಬ ಪುಟ್ಟ ಬಾಲಕಿ ಅರ್ಪಿತಾ ಕಿರುಚಾಡಿ ನಾಯಿಯನ್ನು ಓಡಿಸಿದ್ದಾಳೆ.
ಲಕ್ಷ್ಮಣ ಕಲಾಲ್ ಅವರದ್ದು ಅವಿಭಕ್ತ ಕುಟುಂಬವಾಗಿದ್ದು ಮನೆಯಲ್ಲಿ ಸಾಕಷ್ಟು ಜನರಿದ್ದರು. ಆದರೆ ನಾಯಿ ದಾಳಿ
ವೇಳೆ ಪುಟ್ಟ ಬಾಲಕಿ ಹೊರತುಪಡಿಸಿ ಯಾರೂ ಇರಲಿಲ್ಲ. ಮಗುವಿನ ತಾಯಿ ಮನೆ ಹಿಂಭಾಗದಲ್ಲಿ ಕೆಲಸ ಮಾಡುತ್ತಿದ್ದು, ಮತ್ತಿಬ್ಬರು ಮಹಿಳೆಯರು ಕುಡಿಯುವ ನೀರು ತರಲು ಹೊರ ಹೋಗಿದ್ದರು. ಆದರೆ ಮನೆಯ ಮುಂದಿನ ಬಾಗಿಲು ತೆರೆದಿಟ್ಟಿದ್ದರಿಂದ ಈ ಅವಘಡ ಸಂಭವಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.