ಕಠಿಣ ಶ್ರಮದಿಂದ ಯಶಸ್ಸು
Team Udayavani, Jun 10, 2018, 5:34 PM IST
ಶಿವಮೊಗ್ಗ: ಯಾವುದೇ ಕ್ಷೇತ್ರವಿರಲಿ, ಯಶಸ್ಸು ಸುಲಭವಾಗಿ ದಕ್ಕುವುದಿಲ್ಲ. ಕಠಿಣ ಶ್ರಮದ ಜೊತೆ ಜೊತೆಯಲ್ಲಿ ಬದ್ದತೆ ಹಾಗೂ ಅರ್ಪಣಾ ಮನೋಭಾವ ಇದ್ದಾಗ ಮಾತ್ರ ಯಶಸ್ಸು ಸಹಜವಾಗಿ ದೊರೆಯುತ್ತದೆ ಎಂದು ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಹೇಳಿದರು.
ಶಿವಮೊಗ್ಗ ಬೆಳ್ಳಿ ಮಂಡಲ, ಸಿನಿಮೊಗೆ- ಶಿವಮೊಗ್ಗ ಚಿತ್ರ ಸಮಾಜದಿಂದ ಆಯೋಜಿಸಿದ್ದ ರಾಘು ಶಿವಮೊಗ್ಗ ಅವರ ನಿರ್ದೇಶನದ “ಚೂರಿಕಟ್ಟೆ’ ಚಿತ್ರ ಪ್ರದರ್ಶನ-ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಶೇಷವಾಗಿ ಅತ್ಯಂತ ಪೈಪೋಟಿ ಇರುವ ಚಿತ್ರರಂಗದಲ್ಲಿ ಬದ್ಧತೆ ಇಲ್ಲದಿದ್ದರೆ ಭವಿಷ್ಯ ಇಲ್ಲ ಎಂದ ಅರ್ಥೈಸಿದರು.
ಇಂದು ಪ್ರದರ್ಶಿಸಲ್ಪಡುತ್ತಿರುವ ಚೂರಿಕಟ್ಟೆ ಸಿನಿಮಾ ಒಂದು ಯಶಸ್ವಿ ಪ್ರಯೋಗ.
ಆದರೆ, ಇದನ್ನು ಚಿತ್ರಮಂದಿರಗಳಲ್ಲಿ ನೋಡುವುದರ ಮೂಲಕ ನಿರ್ಮಾಪಕರಿಗೆ ಆಸರೆಯಾಗಬೇಕು. ವಾಸ್ತವದಲ್ಲಿ
ಸಾಗರ ತಾಲೂಕಿನ ಚೂರಿಕಟ್ಟೆ ಗ್ರಾಮ ಋಣಾತ್ಮಕ ಚಿಂತನೆಗೆ ಹೆಸರಾಗಿತ್ತು ಎಂದ ಅವರು, ದಾರಿಹೋಕರಿಗೆ ಚೂರಿ ಹಾಕಿ ಬೆದರಿಸುವುದು, ಕೊಲೆ ಸುಲಿಗೆ ಕೃತ್ಯಗಳೇ ಮೇಲುಗೈ ಸಾಧಿಸಿತ್ತು. ಈ ಕಾರಣಕ್ಕಾಗಿಯೇ ಇದಕ್ಕೆ “ಚೂರಿಕಟ್ಟೆ’ ಎಂಬ ಹೆಸರು ಬಂದಿತ್ತು. ಆದರೆ ಕ್ರಮೇಣ ಇಡೀ ಗ್ರಾಮದ ಚಿತ್ರಣವೇ ಬದಲಾಗಿದ್ದು ಸಂಪೂರ್ಣ ಧನಾತ್ಮಕ
ಚಿಂತನೆಗಳು ಮೈಗೂಡಿವೆ. ಈಗ ಪರಿಸ್ಥಿತಿ ಬದಲಾಗಿದೆ ಎಂದರು.
ಸದಭಿರುಚಿಯ ಚಿತ್ರಗಳನ್ನು ನೋಡಿ ಬೆಂಬಲಿಸಬೇಕಾದ್ದು ಕನ್ನಡಿಗರ ಕರ್ತವ್ಯ ಎಂದ ಅವರು, ಪ್ರಸ್ತುತ ಚೂರಿಕಟ್ಟೆ
ಸಿನಿಮಾದಲ್ಲಿ ಬಿಂಬಿಸಲಾಗಿರುವ ಧನಾತ್ಮಕ ಚಿಂತನೆಗಳನ್ನು ಬೆಂಬಲಿಸುವುದರ ಮೂಲಕ ನಿರ್ಮಾಪಕರು, ನಿರ್ದೇಶಕರಲ್ಲಿ ಆತ್ಮ ವಿಶ್ವಾಸ ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ ಚಿತ್ರ ಸಮಾಜ ಹಮ್ಮಿಕೊಂಡಿರುವ ಈ ಕಾರ್ಯಕ್ರಮ ಅತ್ಯಂತ ಸಕಾಲಿಕ ಎಂದರು.
ಚಿತ್ರದ ನಿರ್ದೇಶಕ ಶಿವಮೊಗ್ಗ ರಾಘು ಮಾತನಾಡಿ, ಚೂರಿಕಟ್ಟೆ ಋಣಾತ್ಮಕ ಮನಃಸ್ಥಿತಿಯ ಸಂಕೇತವಾದ ಗ್ರಾಮ. ಚಿತ್ರದ ಕಥೆ ಕೂಡ ಸ್ವಲ್ಪ ಇದೇ ಧಾಟಿಯಲ್ಲಿ ಇರುವುದರಿಂದ ಆ ಹೆಸರನ್ನೇ ಇಡಲಾಗಿದೆ. ಆದರೆ, ಚಿತ್ರ ಧನಾತ್ಮಕ ಚಿಂತನೆಯೊಂದಿಗೆ ಸಂಪನ್ನಗೊಳ್ಳಲಿದೆ ಎಂದರು.
ಶಿವಮೊಗ್ಗ ಬೆಳ್ಳಿ ಮಂಡಲದ ಕಾರ್ಯಾಧ್ಯಕ್ಷ ಡಿ.ಎಸ್.ಅರುಣ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಿವಮೊಗ್ಗ ಬೆಳ್ಳಿಮಂಡಲದ ಉಪಾಧ್ಯಕ್ಷ ಡಾ| ಕೆ.ಆರ್. ಶ್ರೀಧರ್ ಇದ್ದರು. ಬೆಳ್ಳಿಮಂಡಲದ ಖಜಾಂಚಿ ಎನ್. ಆರ್. ಪ್ರಕಾಶ್ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಜಿ. ವಿಜಯಕುಮಾರ್‌ರಿಂದ ನಿರೂಪಿಸಿದರು. ಜಿಲ್ಲಾ ಸಂಚಾಲಕ ವೈದ್ಯ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Shivamogga: ಮಾಂಗಲ್ಯ ಸರ ಕಿತ್ತು ಪರಾರಿಯಾದ ಖರ್ತನಾಕ್ ಕಳ್ಳರು; ಸಿಸಿಟಿವಿಯಲ್ಲಿ ಸೆರೆ
Mollywood: ʼಮಾರ್ಕೊʼ ಬಳಿಕ ಮೋಹನ್ ಲಾಲ್ ನಿರ್ದೇಶನದ ʼಬರೋಜ್ʼ ಚಿತ್ರಕ್ಕೂ ಪೈರಸಿ ಕಾಟ
BGT; ಬಾರ್ಡರ್-ಗಾವಸ್ಕರ್ ಟ್ರೋಫಿ ವಿತರಣೆಗೆ ಗಾವಸ್ಕರ್ ಗೆ ಆಹ್ವಾನವಿಲ್ಲ! ದಿಗ್ಗಜನ ಬೇಸರ
Gundlupete: ಅಕ್ರಮವಾಗಿ 3 ಕೆ.ಜಿ. 100 ಗ್ರಾಂ ಗಾಂಜಾ ಸಾಗಣೆ: ಬಂಧನ
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.