ಅಕ್ರಮ ಶೆಡ್ ನಿರ್ಮಾಣ ಪ್ರಯತ್ನಕ್ಕೆ ತಹಶೀಲ್ದಾರ್‌ರಿಂದ ತಡೆ
Team Udayavani, Feb 26, 2022, 7:13 PM IST
ಸಾಗರ: ತಾಲೂಕಿನ ತ್ಯಾಗರ್ತಿ ಸಮೀಪದ ನಾಡಕಲಸಿ ಗ್ರಾಮದ ಸರ್ವೆ ನಂ. 133 ಮತ್ತು 134ರ ಸರ್ಕಾರಿ ಭೂಮಿ ಗೋಮಾಳ ಅತಿಕ್ರಮಣ ಮಾಡಿ ಮರಗಿಡಗಳನ್ನು ಕಡಿದು ಶೆಡ್ ನಿರ್ಮಾಣ ಮಾಡಲು ಆಗಮಿಸಿದ ಸಾಗರ ಪೇಟೆ ನಿವಾಸಿಗಳನ್ನು ನಾಡಕಲಸಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ವಿರೋಧಿಸಿ ಕಂದಾಯ ಇಲಾಖೆ ಅಧಿಕಾರಿಗಳ ನೆರವಿನಿಂದ ಶೆಡ್ ತೆರವುಗೊಳಿಸಿ ವಾಪಸ್ ಕಳಿಸಿದ ಘಟನೆ ಶನಿವಾರ ನಡೆದಿದೆ.
ಸಾಗರ ಪೇಟೆ ನಿವಾಸಿಗಳಾದ ಲಲಿತಮ್ಮ ಹೆಸರಿನಲ್ಲಿ 25 ವರ್ಷದ ಹಿಂದೆ ನಾಡಕಲಸಿ ಗ್ರಾಮದ ಸರ್ವೆ ನಂ 133 ರಲ್ಲಿ ನಾಲ್ಕು ಎಕರೆ ೩೮ ಗುಂಟೆ ಜಮೀನು ಬಗರ್ ಹುಕುಂನಲ್ಲಿ ಮಂಜೂರಾತಿ ಆಗಿತ್ತು ಎನ್ನಲಾಗಿದೆ. ಸಾಗುವಳಿ ಮಾಡದೆ ಇರುವ ದಟ್ಟ ಅರಣ್ಯ ಮರಗಿಡಗಳು ಇರುವ ಈ ಪ್ರದೇಶದಲ್ಲಿ ಗ್ರಾಮಸ್ಥರ ತೀವ್ರ ವಿರೋಧದಿಂದ ಉಪ ವಿಭಾಗಾಧಿಕಾರಿಗಳು ಮಂಜೂರಾತಿ ರದ್ದುಗೊಳಿಸಿ ಸರ್ಕಾರಿ ಕಾಯ್ದಿರಿಸಿದ ಭೂಮಿ ಎಂದು ಬೋರ್ಡ್ ಹಾಕಲಾಗಿತ್ತು. ಆದರೆ
ಶನಿವಾರ ಏಕಾಏಕಿ ಜನರ ಗುಂಪು ಕಟ್ಟಿಕೊಂಡು ಮರಗಳನ್ನು ಕಡಿಯಲು ತಯಾರಿ ನಡೆಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿ ಕಂದಾಯ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರು.
ಸ್ಥಳಕ್ಕೆ ಆಗಮಿಸಿದ ಕಂದಾಯ ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮಸ್ಥರ ಸಮ್ಮುಖದಲ್ಲಿ ಶೆಡ್ ತೆರವುಗೊಳಿಸಿ ಅತಿಕ್ರಮ ಸಾಗುವಳಿ ಮಾಡುತ್ತಿರುವವರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಲೋಕನಾಥ್ ಬಿಳಿಸಿರಿ ಮಾತನಾಡಿ, ಹಿಂದಿನ ಅಧಿಕಾರಿಗಳ ಸಮ್ಮುಖದಲ್ಲಿ ಆಗಿರುವ ತೀರ್ಮಾನದಂತೆ ಇದನ್ನು ಕಾಯ್ದಿರಿಸಿದ ಜಾಗ ಎಂದು ಸೂಚನಾ ಫಲಕ ಹಾಕಲಾಗಿದೆ. ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗ ಇದಾಗಿದ್ದು ಇವರು ಬೇರೆ ಊರಿನಿಂದ ಗೂಂಡಾಗಳನ್ನು ಕರೆತಂದು ಅತಿಕ್ರಮ ಸಾಗುವಳಿ ಮಾಡಲು ಹುನ್ನಾರ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಅತಿಕ್ರಮ ಸಾಗುವಳಿ ಮಾಡಲು ಬಿಡುವುದಿಲ್ಲ ಎಂದು ಹೇಳಿದರು
ತಹಶೀಲ್ದಾರ್ ಚಂದ್ರಶೇಖರ್ ನಾಯ್ಕ್ ಮಾತನಾಡಿ, ನಾಡಕಲಸಿ ಗ್ರಾಮದ ಸರ್ವೆ ನಂ ೧೩೩ರಲ್ಲಿ ಯಾವುದೇ ಸಾಗುವಳಿ ಇಲ್ಲ ಯಾರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಲು ಪ್ರಯತ್ನಿಸಿದರೆ ಕಾನೂನು ಕ್ರಮ ಜರುಗಿಸಲಾಗುವುದು. ತಾಲೂಕಿನಲ್ಲಿ ಬಗರ್ ಹುಕುಂ ಹೆಸರಿನಲ್ಲಿ ಹೊಸ ಒತ್ತುವರಿ ಆಗುತ್ತಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಹೇಳಿದರು
ಈ ಸಂದರ್ಭದಲ್ಲಿ ಭೂನ್ಯಾಯ ಮಂಡಳಿ ಸದಸ್ಯ ದೇವೇಂದ್ರಪ್ಪ ಎಲಕುಂದ್ಲಿ, ನಾಡಕಲಸಿ ಗ್ರಾಪಂ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ ಬೊಮ್ಮತ್ತಿ,ಬಾಲಸುಂದರಗೌಡ, ನರೇಂದ್ರ ಮಳಲಿಕೊಪ್ಪ, ನಾರಾಯಣ, ಗ್ರಾಮ ಲೆಕ್ಕಿಗ ಪ್ರಕಾಶ್ ಸಿಂಗ್, ಅರಣ್ಯ ಇಲಾಖೆ ಅಧಿಕಾರಿ ಅಣ್ಣಪ್ಪ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.