ಮತಾಂಧ ಟಿಪು ಜಯಂತಿ ಆಚರಣೆ ಖಂಡನೀಯ: ವಿಎಚ್‌ಪಿ
Team Udayavani, Nov 8, 2017, 5:27 PM IST
ಸೊರಬ: ರಾಜ್ಯ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸುತ್ತಿರುವುದನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸೊರಬ ತಾಲೂಕು ಶಾಖೆ ವತಿಯಿಂದ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಭಾವೀ ಪ್ರಜೆಗಳಾದ ಯುವ ಜನತೆಗೆ ಮತ್ತು ಮಕ್ಕಳಿಗೆ ನಮ್ಮ ನಾಡಿನಲ್ಲಿ ಜನಿಸಿ, ಸಮಾಜದ ಒಳಿತಿಗಾಗಿ ಶ್ರಮಿಸಿದ ಸಾಧು, ಸಂತರು, ರಾಜರುಗಳನ್ನು ಸಮಾಜ ಸುಧಾರಕರನ್ನು ಪರಿಚಯಿಸುವುದು ಸಮಾಜದ ಹಾಗು ಸರ್ಕಾರದ ಪವಿತ್ರ ಕರ್ತವ್ಯ. ನಮ್ಮ ಯುವಜನತೆಯೂ ಅಂತಹ ಮಹಾಪುರುಷರಾಗಿ ಬೆಳೆಯಲಿ ಹಾಗು ಸಮಾಜದ ಉನ್ನತಿಗಾಗಿ ಶ್ರಮಿಸಲಿ ಎನ್ನುವುದು ಎಲ್ಲರ ಆಶಯ.
ಆದರೆ ಹಾಗೆ ಮಾಡುವಾಗ ಅತ್ಯಂತ ವಿವಾದಾಸ್ಪದ ಚರಿತ್ರೆಯನ್ನು ಹೊಂದಿರುವ ಟಿಪ್ಪು ಸುಲ್ತಾನನ ಜಯಂತಿಯನ್ನು ಸರ್ಕಾರ ಆಚರಿಸುತ್ತಾ ಇರುವುದು ಹಿಂದೂಗಳ ಭಾವನೆಯನ್ನು ಕೆರಳಿಸುತ್ತಿದೆ. ದಕ್ಷಿಣ ಭಾರತದಲ್ಲಿ ಕಂಡು ಬರುತ್ತಿರುವ ಮತಾಂಧತೆ
ಹಾಗು ಭಯೋತ್ಪಾದನೆಯ ಮೂಲ ಕಾರಣ ಟಿಪ್ಪು ಸುಲ್ತಾನ್ ಹಾಗೂ ಹೈದರಾಲಿ. ನಾಲ್ಕು ಒಳ್ಳೆಯ ಕೆಲಸ ಹಾಗೂ ನೂರಾರು ಮನೆಹಾಳು ಕೆಲಸಗಳನ್ನು ಮಾಡಿರುವ ಟಿಪ್ಪು ಸುಲ್ತಾನನನ್ನು ನಾವು ಏಕೆ ಆದರ್ಶವೆಂದು ನೆನೆಯಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.
ಟಿಪ್ಪು ಸುಲ್ತಾನ್ ಒಬ್ಬ ಮತಾಂಧ. ರಾಜ್ಯ ವಿಸ್ತಾರಕ್ಕಾಗಿ ರಾಜರು ಯುದ್ಧ ಮಾಡುವುದು ಸಹಜ. ಆದರೆ ಯುದ್ಧಾ ನಂತರ ಪ್ರಜೆಗಳ ಮೇಲೆ ಅತ್ಯಾಚಾರ, ಮಾರಣ ಹೋಮ, ಮತಾಂತರ, ಶ್ರದ್ಧಾಕೇಂದ್ರಗಳ ನಾಶ ಇಂತಹ ಕೃತ್ಯಗಳೇ ಅವನ ಸಾಧನೆಗಳು. ಮೇಲುಕೋಟೆ, ಕೇರಳದ ಕಲ್ಲಿಕೋಟೆ, ಕೊಡಗು, ಮಂಗಳೂರುಗಳಲ್ಲಿ ಆತ ನಡೆಸಿದ ಕಾರ್ಯ ಹಾಗೂ ನರಹತ್ಯೆಗಳು ಎಂಥ ವರ ಎದೆಯಲ್ಲೂ ರಕ್ತ ಹೆಪ್ಪುಗಟ್ಟಿಸುತ್ತವೆ. ಆತನೇನಾದರೂ ಬ್ರಿಟಿಷರನ್ನು ಯುದ್ಧದಲ್ಲಿ ಸೋಲಿಸಿ, ದಕ್ಷಣ ಭಾರತದಲ್ಲಿ ಅಧಿಪತ್ಯ ಸ್ಥಾಪಿಸಲ್ಪಟ್ಟಿದ್ದರೆ, ಭಾರತ ಸ್ವತಂತ್ರವಾಗುವ ಸಂದರ್ಭದಲ್ಲಿ ದಕ್ಷಿಣ ಭಾರತದಲ್ಲಿ ಇನ್ನೊಂದು ಪಾಕಿಸ್ಥಾನ ರಚನೆಯಾಗುತ್ತಿತ್ತು ಎಂದರು. ಚರಿತ್ರೆಯನ್ನು ಒಮ್ಮುಖವಾಗಿ ಮಾತ್ರ ಅಭ್ಯಾಸ ಮಾಡಿ, ತಮಗೆ ಬೇಕಾದಂತೆ ತಿರುಚಿ, ಇಡೀ ಒಂದು ಸಮುದಾಯವನ್ನೇ ದಾರಿ ತಪ್ಪಿಸಿ, ಮತ- ಅಧಿಕಾರ ಗಳಿಕೆಯೇ ಉದ್ದೇಶವಾಗಿರುವವರಿಗೆ ಟಿಪ್ಪು ಒಬ್ಬ ಪರಮತ ಸಹಿಷ್ಣು ರಾಜನಾಗಿ ಕಾಣುತ್ತಾನೆಯೇ ಹೊರತು ಉಳಿದೆಲ್ಲ ಭಾರತೀಯರಿಗೆ ಆತ ಖಳನಾಯಕನಾಗಿಯೇ ಉಳಿಯುತ್ತಾನೆ ಎಂದರು.
ಜಿಲ್ಲಾ ವಿಶ್ವ ಹಿಂದು ಪರಿಷತ್ ಕಾರ್ಯಕರ್ತ ಮನಿಪಾಲ್, ತಾಲೂಕು ಸಂಚಾಲಕ ರವಿ ಗುಡಿಗಾರ್, ದಯಾನಂದ ಆಚಾರ್, ರಜನಿ ನಾಯ್ಕ, ಪ್ರಸನ್ನ ಕೆ.ವಿ., ಶಶಿಕುಮಾರ್, ಚಂದನ್ ಸೊಪ್ಪಿನಕೇರಿ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnuru: ಕಿರು ಅರಣ್ಯ ಪ್ರದೇಶದಲ್ಲಿ ಕಡವೆ ಬೇಟೆ; ಆರೋಪಿ ಬಂಧನ
Hosanagara: ಚಾಲಕನ ನಿಯಂತ್ರಣ ತಪ್ಪಿ ಕ್ಯಾಂಟರ್ ಪಲ್ಟಿ; ದೇಗುಲಕ್ಕೆ ಹಾನಿ
Shimoga: ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮಗುಚಿ ನಾಪತ್ತೆಯಾಗಿದ್ದ ಮೂವರ ಶವ ಪತ್ತೆ
K. S. Eshwarappa: ಮುಸ್ಲಿಮರಿಗೆ ಮೀಸಲು ನೀಡಿದರೆ ಸಂತರ ನೇತೃತ್ವದಲ್ಲಿ ದಂಗೆ
Shivamogga: ತೆಪ್ಪ ಮಗುಚಿ ಶರಾವತಿ ಹಿನ್ನೀರಿನಲ್ಲಿ ಮೂವರು ಯುವಕರು ನಾಪತ್ತೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.