Protest: ಬೇಕೇ ಬೇಕು ನೀರು ಬೇಕು.. ಗ್ರಾಮಪಂಚಾಯಿತಿ ಎದುರು ಖಾಲಿ ಕೊಡಪಾನ ಹಿಡಿದು ಪ್ರತಿಭಟನೆ
Team Udayavani, Jan 11, 2024, 11:54 AM IST
ತೀರ್ಥಹಳ್ಳಿ : ತಾಲೂಕಿನ ಬಸವಾನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸ ಅಗ್ರಹಾರ ಗ್ರಾಮಕ್ಕೆ ಕಳೆದ 10 – 15 ದಿನಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಸರಬರಾಜು ಮಾಡದೆ ಉದ್ದಟತನದಿಂದ ವರ್ತಿಸುತ್ತಿರುವ ಗ್ರಾಮ ಪಂಚಾಯಿತಿ ಅಧಿಕಾರಿಗಳ ವಿರುದ್ಧ ಹೊಸ ಅಗ್ರಹಾರ ಗ್ರಾಮಸ್ಥರು ಗ್ರಾಮಪಂಚಾಯಿತಿ ಎದುರೇ ಪ್ರತಿಭಟನೆ ನಡೆಸುತ್ತಿದ್ದಾರೆ.
ಬೇಕೇ ಬೇಕು ಕುಡಿಯುವ ನೀರು ಬೇಕು, ಹೋರಾಟ ಹೋರಾಟ ನೀರಿಗಾಗಿ ಹೋರಾಟ ಎಂದು ಖಾಲಿ ಕೊಡಪಾನ ಮತ್ತು 200 ಲೀಟರ್ ಡ್ರಮ್ ಗಳನ್ನು ಇಟ್ಟುಕೊಂಡು ಗ್ರಾಮದ ಗ್ರಾಮಸ್ಥರು ಮೂಲ ಸೌಕರ್ಯಕ್ಕಾಗಿ ಹಾಗೂ ಶುದ್ಧ ಕುಡಿಯುವ ನೀರು ಗ್ರಾಮಕ್ಕೆ ಸಿಗುವವರೆಗೂ ಅನಿರ್ದಿಷ್ಟಾವಧಿಯ ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮದ ಅನೇಕ ಗ್ರಾಮಸ್ಥರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: Kottigehara: ಕಂಠಪೂರ್ತಿ ಕುಡಿದು ನಡುರಸ್ತೆಯಲ್ಲಿ ಮಲಗಿದ ಭೂಪ… ಕಂಗಾಲಾದ ವಾಹನ ಸವಾರರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.