ತ್ಯಾಜ್ಯದ ರಾಶಿ: ಸಾಂಕ್ರಾಮಿಕ ರೋಗ ಭೀತಿ
Team Udayavani, Sep 17, 2021, 2:06 PM IST
ತೀರ್ಥಹಳ್ಳಿ: ತಾಲೂಕಿನಾದ್ಯಂತ ಕೊರೊನಾ ನಡುವೆ ನಿಂತ ನೀರಿನಲ್ಲಿಉತ್ಪತ್ತಿಯಾಗುತ್ತಿರುವ ಸೊಳ್ಳೆಗಳಿಂದಅನೇಕ ರೋಗಗಳು ಹರಡುತ್ತಿದ್ದು ಮೇಲಿನಕುರುವಳ್ಳಿ ಗ್ರಾಪಂ ವ್ಯಾಪ್ತಿಯ ಮೇಲಿನಕುರುವಳ್ಳಿಯಲ್ಲಿ ಎಲ್ಲೆಂದರಲ್ಲಿ ಸೊಳ್ಳೆಉತ್ಪತ್ತಿ ಕೇಂದ್ರವಾಗಿ ಕಂಡು ಬರುತ್ತಿರುವತ್ಯಾಜ್ಯದ ರಾಶಿ ಕಂಡು ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.
ಕೊಳೆತು ದುರ್ನಾತಬೀರುತ್ತಿರುವ ಈ ತ್ಯಾಜ್ಯವು ಮಳೆಯನೀರಿನೊಂದಿಗೆ ಬೆರೆತು ರಸ್ತೆಯಲ್ಲಿಎಲ್ಲೆಂದರಲ್ಲಿ ಹರಿಯುತ್ತಿದ್ದು ಇದರಿಂದಸಾಂಕ್ರಾಮಿಕ ರೋಗಗಳ ಭೀತಿಯನ್ನುಎದುರಿಸಬೇಕಾಗಿದೆ.ಹಲವಾರು ಬಾರಿ ಈ ತ್ಯಾಜ್ಯಹಾಕುತ್ತಿರುವುದರ ಬಗ್ಗೆ ಗ್ರಾಮಸ್ಥರು ಲಿಖೀತವಾಗಿ ದೂರು ನೀಡಿ ಗ್ರಾಪಂಎದುರೇ ಸ್ಥಳೀಯ ಯುವಕರು ಧರಣಿ ಕುಳಿತರೂ ಧರಣಿ ಕುಳಿತ ಒಂದೆರೆಡು ದಿನ ನೆಪ ಮಾತ್ರಕ್ಕೆ ತ್ಯಾಜ್ಯವನ್ನು ತೆಗೆದರೂಮತ್ತೆ ಅದೇ ಜಾಗದಲ್ಲಿ ತ್ಯಾಜ್ಯದ ರಾಶಿಕಂಡು ಬರುತ್ತಿದೆ.
ಗ್ರಾಪಂನಲ್ಲಿ ಸ್ವತ್ಛತೆಯಬಗ್ಗೆ ಯಾವುದೇ ರೀತಿಯ ಕಟ್ಟುನಿಟ್ಟಿನಕ್ರಮಕ್ಕೆ ಮುಂದಾಗದೇ ಇರುವುದರಿಂದ ಸ್ಥಳೀಯರು ಈ ತ್ಯಾಜ್ಯದಿಂದ ಬಹಳಷ್ಟುತೊಂದರೆ ಅನುಭವಿಸುವಂತಾಗಿದೆ.ಮೇಲಿನ ಕುರುವಳ್ಳಿ- ಮೇಳಿಗೆ ಸಂಪರ್ಕಕಲ್ಪಿಸುವ ಮುಖ್ಯ ರಸ್ತೆಯ ಬುಕ್ಲಾಪುರ,ಹೆನ್ನಂಗಿ ಸೇತುವೆಯ ಬಳಿ ಮೂಟೆಗಟ್ಟಲೆರಾಶಿ ರಾಶಿ ತ್ಯಾಜ್ಯವು ರಸ್ತೆಯ ಮೇಲೆಲ್ಲಾ ಹರಿದಾಡುತ್ತಿದೆ. ಅದರ ಪಕ್ಕದಲ್ಲಿಯೇಇರುವ ತ್ಯಾಜ್ಯ ಸಂಗ್ರಹಣಾ ತೊಟ್ಟಿ ಇದ್ದುಅದನ್ನು ಸಹ ಅಡ್ಡ ಹಾಕಿದ್ದಾರೆ.
ಇದನ್ನುನೋಡಿದ ಕೆಲವರು ತ್ಯಾಜ್ಯದ ಮೂಟೆಗಳನ್ನುಪಕ್ಕದಲ್ಲಿಯೇ ಇರುವ ಹಳ್ಳಕ್ಕೆ ಎಸೆಯುತ್ತಿದ್ದಾರೆಎಂಬ ದೂರು ಗ್ರಾಮಸ್ಥರಿಂದ ಕೇಳಿಬರುತ್ತಿದೆ. ಇದರಂತೆಯೇ ಮೇಲಿನಕುರುವಳ್ಳಿ ಸರ್ಕಲ್ ಸಮೀಪ ಆಟೋಚಂದ್ರಣ್ಣನವರ ಮನೆ ಎದುರು ರಸ್ತೆಯಲ್ಲಿತ್ಯಾಜ್ಯ ಕೊಳೆತು ನಾರುತ್ತಿದೆ. ಹಾಗೆಯೇಯಾವಾಗಲೂ ಜನ ಓಡಾಡುವಪ್ರದೇಶವಾದ ಉಜ್ಜೀವನ್ ಬ್ಯಾಂಕ್ ಎದುರುರಸ್ತೆಯಲ್ಲಿ ತ್ಯಾಜ್ಯದ ರಾಶಿ ಯಾವಾಗಲೂಕಂಡು ಬರುತ್ತಿದೆ.
ಈ ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ಮತ್ತಿತರ ಪದಾರ್ಥಗಳನ್ನು ಹಸುಗಳುತಿಂದು ಸಾವನ್ನಪ್ಪಿದ ಘಟನೆಯೂಕೂಡ ನಡೆದಿದೆ. ರಸ್ತೆಯ ಬದಿ ಅಲ್ಲಲ್ಲಿ ಅನೇಕ ಕಡೆಗಳಲ್ಲಿ ಕಸದ ರಾಶಿ ಕಂಡುಬರುತ್ತಿದ್ದು ದುರ್ನಾತ ಬೀರುತ್ತಿದೆ.ಇದರಿಂದ ಈ ಮಾರ್ಗದಲ್ಲಿ ಸಂಚರಿಸುವಸಾರ್ವಜನಿಕರು, ವಾಹನ ಸವಾರರುನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.ಬುಕ್ಲಾಪುರ ಸೇತುವೆ ಬಳಿ ಎರೆಡು ಮೂರುಕಡೆಗಳಲ್ಲಿ ಕಸ ಎಸೆಯಲಾಗಿದ್ದು ಆ ಜಾಗಜನನಿಬಿಡವಾಗಿದ್ದು ಒಂದು ರೀತಿಯಲ್ಲಿ ಕಸಡಂಪಿಂಗ್ ಯಾರ್ಡ್ ಆಗಿ ಮಾರ್ಪಟ್ಟಿದೆ.
ಮೇಲಿನ ಕುರುವಳ್ಳಿ ಗ್ರಾಪಂಗೆ ಸಂಬಂಧಪಟ್ಟವರೇ ಅನೇಕರು ವಾಹನಗಳಲ್ಲಿ ಕಸಎಸೆದು ಬರುವುದು ಕಂಡು ಬರುತ್ತಿದ್ದುಈ ಜಾಗಕ್ಕೆ ಗ್ರಾಪಂ ವತಿಯಿಂದ ರಸ್ತೆಯಬದಿಯಲ್ಲಿ ಕಸ ಎಸೆಯದಂತೆ ನಾಮಫಲಕಅಳವಡಿಸಲಿ ಎಂದು ಸ್ಥಳೀಯರೊಬ್ಬರುತಿಳಿಸಿದ್ದಾರೆ.ಹೆದ್ದಾರಿ ಪಕ್ಕ ಕಸ ಎಸೆಯುವವರವಿರುದ್ಧ ದಂಡ ಹಾಕುವಂತಹ ಕಠಿಣಕ್ರಮ ಕೈಗೊಂಡರೆ ಮಾತ್ರ ಇದಕ್ಕೆ ಕಡಿವಾಣಹಾಕಬಹುದು ಎಂದು ಸ್ಥಳೀಯ ಕೃಷಿಕರಾದಅನಂತರಾಜ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Snuff: ನಶ್ಯ ತಂದಿಟ್ಟ ಸಮಸ್ಯೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.