Illegal Theater: ಚಿತ್ರ ಮಂದಿರದಲ್ಲಿ ಕಾನೂನು ಬಾಹಿರವಾಗಿ ಚಿತ್ರ ಪ್ರದರ್ಶನ ಆಗುತ್ತಿತ್ತಾ ?

ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಲೈಸೆನ್ಸ್ ನೀಡಿದ್ರಾ!?

Team Udayavani, Aug 25, 2023, 3:52 PM IST

9-theerthhalli

ತೀರ್ಥಹಳ್ಳಿ : 1987 ಅಕ್ಟೋಬರ್ 1 ರಲ್ಲಿ ವಿನಾಯಕ ಚಿತ್ರಮಂದಿರ ಪ್ರಾರಂಭವಾಗಿತ್ತು. ನನ್ನ ತಂದೆ ವೆಂಕಟರಮಣ ಕಾಮತ್ ಹೆಸರಲ್ಲಿ ಲೈಸೆನ್ಸ್ ಇತ್ತು. ಆ ಜಾಗದಲ್ಲಿ ಚಿತ್ರಮಂದಿರಕ್ಕೂ ಮೊದಲು ವಿನಾಯಕ ಸಾಮಿಲ್ ಇತ್ತು. 2002 ರಲ್ಲಿ ನಮ್ಮ ತಂದೆ ತೀರಿಕೊಂಡರು.

ನನ್ನ ತಾಯಿಗೆ ಹಾಗೂ ಸಹೋದರ ರವೀಂದ್ರ ಕಾಮತ್ ಹೆಸರಿಗೆ ತಂದೆಯವರು ವಿಲ್ ಮಾಡಿದ್ದರು. 2002 ರಿಂದ 2006 ರವರೆಗೆ ಅವರ ಹೆಸರಿಗೆ ಖಾತೆ ಬದಲಾವಣೆ ಆಗಿರಲಿಲ್ಲ.

ಜಿಲ್ಲಾಧಿಕಾರಿಗಳ ಬಳಿ ಲೈಸೆನ್ಸ್ ಬಗ್ಗೆ ಕೇಳಿದಾಗ 1 ವರ್ಷದವರೆಗೂ ಅಲೆದಾಡಿಸಿದ್ದರು. ಕೊನೆಗೆ 2008ರಲ್ಲಿ ನನ್ನ ಹೆಸರಿಗೆ ವರ್ಗಾವಣೆ ಆಗಿತ್ತು ಎಂದು ಚಿತ್ರಮಂದಿರದ ಮಾಲೀಕ ಗಣೇಶ್ ಕಾಮತ್ ತಿಳಿಸಿದರು.

ಪಟ್ಟಣದ ವಿನಾಯಕ ಚಿತ್ರಮಂದಿರದ ಕಟ್ಟಡ ಕುಸಿತದ ಬಗ್ಗೆ ಆ.25ರ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನನ್ನ ಹೆಸರಿಗೆ ವರ್ಗಾವಣೆ ಆಗಿದ್ದರೂ 2022 ಜನವರಿ 1 ರಿಂದ ಲೈಸೆನ್ಸ್ ನವೀಕರಣಗೊಳ್ಳದೆ ಕಾನೂನು ಬಾಹಿರವಾಗಿ ಚಿತ್ರಪ್ರದರ್ಶನ ಮುಂದುವರೆದಿದೆ. ಚಿತ್ರಮಂದಿರದ ಶಿಥಿಲಾವಸ್ಥೆಯ ಬಗ್ಗೆ ಮತ್ತು ಲೈಸನ್ಸ್ ನವೀಕರಣಗೊಳ್ಳದೇ ಕಾನೂನುಬಾಹಿರವಾಗಿ

ಚಿತ್ರ ಪ್ರದರ್ಶನಗೊಳ್ಳುತ್ತಿರುವ ಬಗ್ಗೆ ಎಲ್ಲಾ ವಿವರಣೆಗಳ ಸಹಿತವಾಗಿ ಜಿಲ್ಲಾಧಿಕಾರಿ ಕಚೇರಿಗೆ 2022ರ ಮೇ.13ರಂದು ಲಿಖಿತ ಅರ್ಜಿ ಸಲ್ಲಿಸಿದ್ದೇನೆ ಎಂದರು.

ಆದರೆ ಈ ವಿಷಯದ ಬಗ್ಗೆ ಜಿಲ್ಲಾಧಿಕಾರಿ ಯಾವುದೇ ಕ್ರಮ ಕೈಗೊಳ್ಳದಿದ್ದಾಗ ವಕೀಲರ ಮುಖಾಂತರ 2023ರ ಜೂನ್‌ 5 ರಂದು ಪ್ರತ್ಯೇಕ ಅರ್ಜಿ ಸಲ್ಲಿಸಿದ್ದೇನೆ. ಆದರೆ 2023ರ ಆಗಸ್ಟ್‌ 22 ರಂದು ರಾತ್ರಿ 9.30 ರ ಸುಮಾರಿಗೆ ಚಿತ್ರಮಂದಿರದ ಕಟ್ಟಡದ ಮುಂಭಾಗದ ಛಾವಣಿಯು ಕುಸಿದು ಹಲವಾರು ಅನಾಹುತಗಳು ಸಂಭವಿಸಿವೆ. ಸಕಾಲದಲ್ಲಿ ಜಿಲ್ಲಾಧಿಕಾರಿ ಸ್ಥಳ ಪರಿಶೀಲನೆ ಮಾಡಿ, ಚಿತ್ರಮಂದಿರದ ನಿರ್ವಹಣೆಗೆ ಸಂಬಂಧಪಟ್ಟವರಿಗೆ ಸೂಕ್ತ ಆದೇಶ ನೀಡಿದ್ದಲ್ಲಿ ಈ ಅನಾಹುತ ಸಂಭವಿಸುತ್ತಿರಲಿಲ್ಲ ಎಂದು ನಮ್ಮ ಭಾವನೆ ಎಂದರು.

ಸಹೋದರರ ಮದ್ಯೆ ಇದ್ದ ಸಮಸ್ಯೆಯೇ ಚಿತ್ರಮಂದಿರಕ್ಕೆ ಮುಳುವಾಯ್ತಾ?

ಸಹೋದರರಿಬ್ಬರ ಹೆಸರಿನಲ್ಲಿ ಚಿತ್ರಮಂದಿರದ ಲೈಸೆನ್ಸ್ ಇದ್ದು ಸಹೋದರರ ಮುನಿಸುಗಳೇ ಚಿತ್ರಮಂದಿರದಲ್ಲಿನ ಸಮಸ್ಯೆಗೆ ಕಾರಣವಾಯ್ತಾ? ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಹಾಗೂ ಇತರೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರೂ ಅಧಿಕಾರಿಗಳು ಬರದಂತೆ ಸಹೋದರ ರವೀಂದ್ರ ಕಾಮತ್ ತಡೆದಿದ್ದಾರೆ ಎಂಬ ಅನುಮಾನವನ್ನು ಗಣೇಶ್ ಕಾಮತ್ ವ್ಯಕ್ತಪಡಿಸಿದರು.

ಚಿತ್ರಮಂದಿರಕ್ಕೆ ತಾನೊಬ್ಬನೇ ಮಾಲೀಕನಾಗಬೇಕು ಎಂಬ ಆಸೆಯಿಂದ ಲೈಸೆನ್ಸ್ ರಿನೀವಲ್ ಮಾಡಲು ರವೀಂದ್ರ ಕಾಮತ್ ಬಿಟ್ಟಿಲ್ಲಾ ಎಂಬ ಅನುಮಾನ ವ್ಯಕ್ತಪಡಿಸಿದರು.

ಕೋರ್ಟ್ ನಲ್ಲಿ ಚಿತ್ರಮಂದಿರ ಲಾಸ್ ನಲ್ಲಿ ನೆಡೆಯುತ್ತಿದೆ ಎಂದು ಈಗಾಗಲೇ ರವೀಂದ್ರ ಕಾಮತ್ ಹೇಳಿದ್ದಾರೆ. ಪುನಃ ಅದನ್ನು ಕಟ್ಟಲು 35 ಲಕ್ಷ ಹಣ ಬೇಕು. ಈ ಎಲ್ಲಾ ಕಾರಣಕ್ಕೆ ಅದೆಲ್ಲವೂ ಕಷ್ಟವಾಗಲಿದೆ. ಹಾಗಾಗಿ ನಮಗೆ ಚಿತ್ರಮಂದಿರ ನಡೆಸಲು ಇಷ್ಟವಿಲ್ಲ ಎಂದು ತಿಳಿಸಿದ್ದಾರೆ.

ಇನ್ನು ಮುಂದಿನ ದಿನಗಳಲ್ಲಿ ಚಿತ್ರಮಂದಿರ ಪ್ರದರ್ಶನವಾಗುವುದಾದರೆ ಜಿಲ್ಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಯಾವುದೇ ರೀತಿಯಲ್ಲಿ ಅನಾಹುತ ಜರುಗದಂತೆ ಹಾಗೂ ಲೈಸೆನ್ಸ್ ನವೀಕರಣಗೊಳ್ಳದೇ ಚಿತ್ರಪ್ರದರ್ಶನ ಮುಂದುವರೆಯದಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಟಾಪ್ ನ್ಯೂಸ್

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Manipu: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

Manipur: ಸಿಎಂ ಬಿರೇನ್‌ ಸಿಂಗ್‌ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ

DK-Shivakumar

Racial Remark: ಕುಮಾರಸ್ವಾಮಿಯವರ “ಕರಿಯ” ಎಂದದ್ದು ತಪ್ಪು: ಡಿ.ಕೆ.ಶಿವಕುಮಾರ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bsy

Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Patna: ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಕಣ್ಣು ನಾಪತ್ತೆ!; ಇಲಿ ಕಚ್ಚಿದೆ ಎಂದ ವೈದ್ಯರು

Sabarimala Virtual Queue Booking Limit Increase

Kerala govt: ಶಬರಿಮಲೆ ವರ್ಚುವಲ್‌ ಕ್ಯೂ ಬುಕ್ಕಿಂಗ್‌ ಮಿತಿ ಹೆಚ್ಚಳ

UP-Jhansi

Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು

PM-Nigirya

G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್‌, ಗಯಾನಾ ಪ್ರವಾಸ ಶುರು

Chattisgadh-Petrol

Chhattisgarh: ನೀರಿನ ಬಾವೀಲಿ ಪೆಟ್ರೋಲ್‌: ಸಂಗ್ರಹಕ್ಕೆ ಮುಗಿಬಿದ್ದ ಜನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.