ನಾಪತ್ತೆಯಾಗಿದ್ದ ಆನೆ ದಂತ ಎಸ್ಪಿ ಕಚೇರಿಯಲ್ಲೇ ಪತ್ತೆ!

Team Udayavani, Feb 27, 2019, 1:00 AM IST

ane-danta.jpg

ಶಿವಮೊಗ್ಗ: ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಿಂದ ಕಾಣೆಯಾಗಿದ್ದ ಆನೆ ದಂತವು ಅದೇ ಕಟ್ಟಡದಲ್ಲಿ ಪತ್ತೆಯಾಗುವ ಮೂಲಕ ಹಲವು ಅನುಮಾನ ಹುಟ್ಟು ಹಾಕಿದೆ.

ಈ ಕುರಿತು ಮಂಗಳವಾರ ಮಾಹಿತಿ ನೀಡಿದ ಅಪರ ಪೊಲೀಸ್‌ ವರಿಷ್ಠಾಧಿಕಾರಿ ಮುತ್ತುರಾಜ್‌, ನೂತನ ಎಸ್‌ಪಿ ಎಂ. ಅಶ್ವಿ‌ನಿ ಅವರು ಅಧಿಕಾರ ವಹಿಸಿಕೊಂಡ ಅನಂತರ ಕಚೇರಿ ಮೇಲಿದ್ದ ದಾಸ್ತಾನು ಕೊಠಡಿಯಲ್ಲಿನ 8-10 ವರ್ಷಗಳ ಪೇಪರ್‌, ರಿಜಿಸ್ಟರ್‌ ಇರುವ ಕೊಠಡಿಯನ್ನು ಸ್ವತ್ಛ ಮಾಡಲು ಸೂಚಿಸಿದ್ದರು. ಅದರಂತೆ ಸೋಮವಾರ ಸ್ವತ್ಛತಾ ಕಾರ್ಯ ಆರಂಭವಾಗಿತ್ತು. ಈ ವೇಳೆ ಗೌರಮ್ಮ ಎಂಬ ಸಿಬಂದಿಗೆ ಪೇಪರ್‌ನಲ್ಲಿ ಸುತ್ತಿಟ್ಟ ರೀತಿಯಲ್ಲಿ ಆನೆ ದಂತ ಪತ್ತೆಯಾಗಿದೆ. ಈ ಮಾಹಿತಿ ತಿಳಿಸಿದ ಕೂಡಲೇ ಅದನ್ನು ತತ್‌ಕ್ಷಣ ವಶಕ್ಕೆ ಪಡೆಯಲಾಗಿದೆ. ಈ ವಿಷಯವನ್ನು ಸಿಐಡಿ ಅ ಧಿಕಾರಿಗಳಿಗೆ ತಿಳಿಸಲಾಗಿದೆ. ಅವರು ಮುಂದಿನ ತನಿಖೆ ಕೈಗೊಳ್ಳಲಿದ್ದಾರೆ ಎಂದರು.

2014ರ ಅನಂತರ ಆನೆ ದಂತ ಕಳವಾಗಿದೆ ಎಂದು ಹಿಂದಿನ ಎಸ್‌ಪಿ ಅಭಿನವ್‌ ಖರೆ ತನಿಖೆಗೆ ಆದೇಶಿ ಸಿದ್ದರು. ಪ್ರಾಥಮಿಕ ತನಿಖೆ ಮಾಡಿ ಕಳೆದ ವರ್ಷ ದೊಡ್ಡಪೇಟೆ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
2018ನೇ ಮೇ 22ರಂದು ಎಸ್‌ಪಿ ಕಚೇರಿಯ ರಹಸ್ಯ ಶಾಖೆಯ ಶೀಘ್ರ ಲಿಪಿಗಾರ ಎ.ಬಿ. ಶ್ರೀನಾಥ್‌ ಅವರು ದೊಡ್ಡಪೇಟೆ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ರಾಜ್ಯ ಕಾನೂನು, ಸುವ್ಯವಸ್ಥೆಯ ಎಡಿಜಿಪಿ ಕಮಲ್‌ ಪಂತ್‌ ಆಗಮಿಸಿ ತನಿಖೆಗೆ ಚುರುಕು ನೀಡುವ ಪ್ರಯತ್ನ ನಡೆಸಿದ್ದರು. ಅದರ ಭಾಗವಾಗಿ ಕರ್ತವ್ಯ ಲೋಪದ ಆಧಾರದ ಮೇಲೆ ಇಬ್ಬರು ಪೇದೆಗಳನ್ನು ಅಮಾನತು ಗೊಳಿಸಲಾಗಿತ್ತು. ಇನ್‌ಸ್ಪೆಕ್ಟರ್‌ಗೆ ತನಿಖೆಯ ಜವಾಬ್ದಾರಿ ನೀಡಲಾಗಿತ್ತು. ಆದರೆ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದ ಕಾರಣ 2019ರ ಜನವರಿ ಸಿಐಡಿ ತನಿಖೆಗೆ ವಹಿಸಲಾಗಿತ್ತು.

ಅಧಿಕಾರ ಹಸ್ತಾಂತರ ಸಂದರ್ಭಗಳಲ್ಲೆಲ್ಲ ಅಧಿಕಾರಿಗಳು ದಂತಗಳ ಮುಂದೆ ನಿಂತು ಫೋಟೋ ತೆಗೆಸಿ ಕೊಳ್ಳುತ್ತಿದ್ದರು. ಮುರುಗನ್‌ ಅಧಿಕಾರ ಸ್ವೀಕರಿಸಿದಾಗಲೂ ಇದ್ದವು. ಅನಂತರ ನಾಪತ್ತೆಯಾಗಿದ್ದವು. ಮೇಜಿನ  ಮೇಲೆ ಅಲಂಕೃತ ಮರದ ಪೀಠದ ಮೇಲೆ ಸುಂದರವಾಗಿ ಇಡಲಾಗಿದ್ದ ದಂತವನ್ನು ಅಪಹರಿಸಿದ್ದವರಾರು? ಮತ್ತೆ ತಂದಿಟ್ಟರೇ? ಎಂಬುದು ನಿಗೂಢವಾಗಿದೆ.

ಟಾಪ್ ನ್ಯೂಸ್

ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

Mangaluru ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Madikeri: ಅರೆಭಾಷಿಕ ಗೌಡರ ಅವಹೇಳನ: ಕ್ರಮಕ್ಕೆ ಆಗ್ರಹ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ;  ಓರ್ವನ ಬಂಧನ

Aranthodu ಕಲ್ಲುಗುಂಡಿ: ಮಟ್ಕಾ ಅಡ್ಡೆಗೆ ಪೊಲೀಸರ ದಾಳಿ; ಓರ್ವನ ಬಂಧನ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

Karkala: ಎಂಬಿಎ ವಿದ್ಯಾರ್ಥಿ ಬಾವಿಗೆ ಹಾರಿ ಆತ್ಮಹ*ತ್ಯೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Eshwara Khandre: ಉದ್ದಿಮೆಗಳಿಗೆ 30 ದಿನದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಕ್ಲಿಯರೆನ್ಸ್‌

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

Congress ಶಾಸಕ ನರೇಂದ್ರಸ್ವಾಮಿಗೆ ಕೆಎಸ್‌ಪಿಸಿಬಿ ಅಧ್ಯಕ್ಷ ಪಟ್ಟ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

ಎ.ಎಂ. ಪ್ರಸಾದ್‌ ಮುಂದಿನ ಮುಖ್ಯ ಮಾಹಿತಿ ಆಯುಕ್ತ? ಮಾಹಿತಿ ಆಯೋಗಕ್ಕೂ ಸದಸ್ಯರ ನೇಮಕ?

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

B. Y. Vijayendra: ನನ್ನನ್ನು ಟಾರ್ಗೆಟ್‌ ಮಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಲ್ಲ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

Congress: ಶಾಸಕರು, ಸದಸ್ಯರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

Mangaluru ಬಾಲ್ಯ ವಿವಾಹ: ನಿಗಾ ವಹಿಸಲು ಜಿ.ಪಂ ಸಿಇಒ ಸೂಚನೆ

1-swee

Digital ಬಿಟ್ಟು ಮುದ್ರಿತ ಪಠ್ಯಪುಸ್ತಕ ಮಾದರಿಗೆ ಮರಳಿದ ಸ್ವೀಡನ್‌!

UCC

UCC ಕೈಪಿಡಿಗೆ ಉತ್ತರಾಖಂಡ ಒಪ್ಪಿಗೆ: ಶೀಘ್ರವೇ ಜಾರಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

ಮಾರನಹಳ್ಳಿ-ಅಡ್ಡಹೊಳೆ ಹೆದ್ದಾರಿ ದುರಸ್ತಿ: ಡಾ| ಹೆಗ್ಡೆ ಅವರಿಗೆ ಮನವಿ

1-telanga

America; ಗುಂಡು ಹಾರಿಸಿ ತೆಲಂಗಾಣದ ಯುವಕನ ಹ*ತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.