ನಗರ ಹೋಬಳಿಯ ಸಮಸ್ಯೆಗೆ ಸಿಗುವುದೇ ಮುಕ್ತಿ
Team Udayavani, Jun 25, 2019, 10:32 AM IST
ಹೊಸನಗರ: ಮಲೆನಾಡಿನ ಮಡಿಲು, ಮುಳುಗಡೆಯ ತವರು ನಗರ ಹೋಬಳಿ ಹಲವು ದಶಕಗಳಿಂದ ಸಾಕಷ್ಟು ಸಮಸ್ಯೆಗಳಿಂದ ನಲುಗಿದೆ. ನಾಡಿಗಾಗಿ ತ್ಯಾಗ ಮಾಡಿದ ಇಲ್ಲಿಯ ಜನ ಮಾತ್ರ ಇಂದಿಗೂ ಇಲ್ಲಗಳ ನಡುವೆಯೇ ಬದುಕು ಸಾಗಿಸುತ್ತಿದ್ದು, ಇವುಗಳಿಗೆಲ್ಲ ಪರಿಹಾರ ಸಿಕ್ಕೀತು ಎಂಬ ಆಶಾಭಾವದಲ್ಲಿದ್ದಾರೆ.
ಜೂನ್.25 ರ ಮಂಗಳವಾರ ಶಿವಮೊಗ್ಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಗ್ರಾಮವಾಸ್ತವ್ಯಕ್ಕಾಗಿ ಹೋಬಳಿ ಕೇಂದ್ರ ನಗರಕ್ಕೆ ಬರುತ್ತಿದ್ದು ಇಲ್ಲಿಯ ಜನರ ಪಾಲಿಗೆ ಹೊಸ ನಿರೀಕ್ಷೆ ಹುಟ್ಟಿಸಿದೆ. ತಮ್ಮ ಸಮಸ್ಯೆಗಳ ಅಹವಾಲು ಸಲ್ಲಿಸಲು ಕಾಯುತ್ತಿದ್ದಾರೆ.
ಮುಳುಗಡೆ ತವರು: ನಗರ ಹೋಬಳಿ ಎಂದರೆ ಮುಳುಗಡೆಯ ತವರು ಎಂದೇ ಪ್ರಖ್ಯಾತಿ. ಕಾರಣ ಲಿಂಗನಮಕ್ಕಿ ಜಲಾಶಯದ ಜೀವನಾಡಿ ಎಂದೇ ಕರೆಸಿಕೊಳ್ಳುವ ಈ ಹೋಬಳಿಯಲ್ಲಿ ವಾರಾಹಿ ಯೋಜನೆಯ ಮಾಣಿ ಡ್ಯಾಂ, ಚಕ್ರ-ಸಾವೇಹಕ್ಲು ಅವಳಿ ಜಲಾಶಯ, ಪಿಕಪ್ ಮತ್ತು ಖೈರಗುಂದ ಡ್ಯಾಂಗಳು ಜನ್ಮತಳೆದಿವೆ. ಸುತ್ತಲೂ ಹಿನ್ನೀರು ಆವರಿಸಿಕೊಂಡಿರುವ ಇಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ.
ಬಗರ್ ಹುಕುಂ ಸಮಸ್ಯೆ: ಬಗರ್ ಹುಕುಂ ಈ ಭಾಗದ ಜನರನ್ನು ಸಾಕಷ್ಟು ವರ್ಷಗಳಿಂದ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ತಮ್ಮ ಮನೆ ಹಾಗೂ ಜಮೀನಿನ ಹಕ್ಕುಪತ್ರಕ್ಕಾಗಿ ಹೋಬಳಿಯ ನಿವಾಸಿಗಳು ಇನ್ನಿಲ್ಲದ ಹೋರಾಟ ಮಾಡುತ್ತಲೇ ಬಂದಿದ್ದಾರೆ. ಪ್ರತಿಭಟನೆ ತೀವ್ರಗೊಂಡಾಗ ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಖುದ್ದು ಭೇಟಿ ನೀಡಿ ಇಲ್ಲಿಯ ಸಮಸ್ಯೆ ಆಲಿಸಿದ್ದಾರೆ. ಈಗ ಅವರೇ ಗ್ರಾಮವಾಸ್ತವ್ಯಕ್ಕೆ ಬರುತ್ತಿದ್ದು ಫಲಾನುಭವಿಗಳಲ್ಲಿ ನಿರೀಕ್ಷೆ ಹೆಚ್ಚಾಗಿದೆ.
ಶಿಥಿಲಗೊಂಡ ಸಂಡೋಡಿ ಸೇತುವೆ:ಕರಿಮನೆ ಗ್ರಾಪಂ ವ್ಯಾಪ್ತಿಯ ಮಳಲಿ ಗ್ರಾಮದಲ್ಲಿರುವ ಸಂಡೋಡಿ ಸೇತುವೆ ಸಂಪೂರ್ಣ ಶಿಥಿಲಗೊಂಡಿದ್ದು ಸೇತುವೆ ಮೇಲೆ ಸಂಚರಿಸಲು ಭಯಪಡುವಂತಾಗಿದೆ. ಸುಮಾರು 500 ಕುಟುಂಬಗಳ ಪ್ರಮುಖ ಸಂಪರ್ಕ ಸೇತುವಾಗಿರುವ ಸಂಡೋಡಿ ಸೇತುವೆಗೆ ತುರ್ತು ಪರಿಹಾರ ಕಂಡುಕೊಳ್ಳಬೇಕಿದೆ
ಪದವಿ ಕಾಲೇಜುಗಳಿಲ್ಲ: ಹೌದು ಹೋಬಳಿ ಕೇಂದ್ರ ನಗರದಲ್ಲಿ ಸರ್ಕಾರಿ ಪದವಿ ಕಾಲೇಜು ಬೇಕು ಎಂಬುದು ಗ್ರಾಮಸ್ಥರ ಬಹುದಿನದ ಬೇಡಿಕೆ. ಅಲ್ಲದೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರದ ಮತ್ತು ಕಾಲೇಜು ಹಾಸ್ಟೆಲ್ ಇಲ್ಲದಿರುವುದು ಕೂಡ ಇಲ್ಲಿಯ ಸಮಸ್ಯೆ. ತಾಲೂಕು ಕೇಂದ್ರ ಹೊಸನಗರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗಕ್ಕೆ ಹೋಗಿ ವಿದ್ಯಾರ್ಥಿನಿಲಯದಲ್ಲಿ ಉಳಿದು ವ್ಯಾಸಾಂಗ ಮಾಡುವುದು ಅನಿವಾರ್ಯವಾಗಿದೆ.
ಸಿಬ್ಬಂದಿ ಕೊರತೆ: ಇಡೀ ಹೋಬಳಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ವೈದ್ಯರು ಕೂಡ ಇಲ್ಲ. ನಗರ ಸರ್ಕಾರಿ ಸಂಯುಕ್ತ ಆಸ್ಪತ್ರೆಯಲ್ಲಿ ವೈದ್ಯರಿದ್ದರೂ ಸ್ಪಾಪ್ ನರ್ಸ್, ಸಿಬ್ಬಂದಿ ಕೊರತೆ ಇದೆ. ಸಂಪೇಕಟ್ಟೆಯಲ್ಲಿ ಆಸ್ಪತ್ರೆ ಕಟ್ಟಡ ನಿರ್ಮಾಣಗೊಂಡಿದ್ದರೂ ರೋಗಿಗಳ ಸೇವೆಗೆ ಇನ್ನು ಸಮರ್ಪಕವಾಗಿ ತೆರೆದಿಲ್ಲ. ಜಾನುವಾರು ಆಸ್ಪತ್ರೆಗಳಂತೂ ಹೆಸರಿಗಷ್ಟೇ ಎಂಬಂತಾಗಿದೆ. ವೈದ್ಯರ ಕೊರತೆ ಇಲ್ಲಿಯ ರೈತರನ್ನು ಬಾಧಿಸುತ್ತಿದೆ. ಹೈನುಗಾರಿಕೆಯನ್ನೇ ನಂಬಿ ಬಹಳಷ್ಟು ರೈತರು ಮತ್ತು ಕೂಲಿಕಾರ್ಮಿಕರು ತಮ್ಮ ಬದುಕು ಕಟ್ಟಿಕೊಂಡಿದ್ದು ಪಶು ಆಸ್ಪತ್ರೆ ಅವ್ಯವಸ್ಥೆಯಿಂದಾಗಿ ರೈತರು ಹೈನುಗಾರಿಕೆಯಿಂದ ವಿಮುಖರಾಗುವಂತೆ ಮಾಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ
Shimoga: ಮೊಬೈಲ್ ಕೊಡದಿದ್ದಕ್ಕೆ ಆತ್ಮಹತ್ಯೆಗೆ ಶರಣಾದ ಕಾಲೇಜು ವಿದ್ಯಾರ್ಥಿನಿ
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
New Delhi: ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡಿದ್ದ ಯುವಕ ಸಾ*ವು
Vijayapura; ಮಾಜಿ ಪ್ರಧಾನಿ ಡಾ.ಸಿಂಗ್ ನಿಧನ ಹಿನ್ನೆಲೆಯಲ್ಲಿ ವಿಜಯಪುರ ಬಂದ್ ಮುಂದೂಡಿಕೆ
Kollegala: ಶಾಲಾ ಮಕ್ಕಳಿಗೆ ನೀಡುವ KMF ಹಾಲಿನ ಪುಡಿ ಅಕ್ರಮ ದಾಸ್ತಾನು… ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.