Theerthahalli: ರಾಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ “ಮಹಾರುದ್ರ ಹೋಮ”
Team Udayavani, Sep 1, 2023, 1:17 PM IST
ತೀರ್ಥಹಳ್ಳಿ: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥವಾಗಿ ʼಮಹಾರುದ್ರ ಪುರಶ್ಚರಣ ಹೋಮ ನಡೆಸಲು ಸಂಕಲ್ಪಿಸಲಾಗಿದೆ.
ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರಾದ ಉಭಯ ಜಗದ್ಗುರುಗಳ ಪೂರ್ಣಾನುಗ್ರಹದಿಂದ ಶ್ರೀ ಶೋಭಕೃತ್‌ನಾಮ ಸಂವತ್ಸರದ ಶ್ರಾವಣ ಬಹುಳ ಏಕಾದಶಿ ಸೇ.10 ರ ಭಾನುವಾರ ಮತ್ತು ದ್ವಾದಶಿ ಸೇ.11 ರ ಸೋಮವಾರ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ʼಮಹಾರುದ್ರ ಪುರಶ್ಚರಣ ಹೋಮ ನಡೆಸಲಾಗುವುದು.
ಭಕ್ತಾದಿಗಳು ಈ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ತನು-ಮನ-ಧನದೊಂದಿಗೆ ಸಹಕರಿಸಿ, ಶ್ರೀ ಸ್ವಾಮಿಯ ತೀರ್ಥಪ್ರಸಾದವನ್ನು ಸ್ವೀಕರಿಸಿ,ಶ್ರೀ ರಾಮೇಶ್ವರ ದೇವರ ಕೃಪಾನುಗ್ರಹಕ್ಕೆ ಪಾತ್ರರಾಗಲು ಸೊಪ್ಪುಗುಡ್ಡೆ ರಾಘವೇಂದ್ರ ಕೋರಿದ್ದಾರೆ.
ದೇವಸ್ಥಾನದ ಕಾರ್ಯಕ್ರಮಗಳ ವಿವರ:
ಸೆ.10ರ ಭಾನುವಾರ ಶ್ರಾವಣ ಬಹುಳ ಏಕಾದಶಿ ಬೆಳಗ್ಗೆ ಗಂಟೆ 8-00 ಕ್ಕೆ ʼಫಲನ್ಯಾಸ, ದೇವತಾ ಪ್ರಾರ್ಥನೆ” ತುಂಗಾ ನದಿಯಿಂದ “ಆಕ್ರೋದಕ ಅನಯನ” ಗಣಹೋಮ, “ಮಹಾರುದ್ರ ಪುರಶ್ಚರಣ” ಹೋಮ ಪ್ರಾರಂಭ, ಮಧ್ಯಾಹ್ನ 01.30 ಕ್ಕೆ ʼಮಹಾಮಂಗಳಾರತಿʼ ಆಗಲಿದೆ.
ಸೆ. 11ರ ಸೋಮವಾರ ಶ್ರಾವಣ ಬಹುಳ ದ್ವಾದಶಿ ಬೆಳಗ್ಗೆ ಗಂಟೆ 8 ಗಂಟೆಯಿಂದ “ಪುಣ್ಯಾಹ” “ಮಹಾರುದ್ರ ಪುರಶ್ಚರಣೆ ಹೋಮ” ಹಾಗೂ ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಪ್ರಸಾದ ವಿನಿಯೋಗ” ನಂತರ ಸಾರ್ವಜನಿಕ “ಅನ್ನಸಂತರ್ಪಣೆ” ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ
B. Y. Raghavendra: 10 ವರ್ಷದಲ್ಲಿ ವಕ್ಫ್ ಆಸ್ತಿ ಶೇ.135 ಹೆಚ್ಚಳ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಯತ್ನಕ್ಕೆ ಹಿನ್ನಡೆ?
Naxal: ವಿಕ್ರಂ ವಿರುದ್ಧ ಆಗುಂಬೆ, ತೀರ್ಥಹಳ್ಳಿ, ಚಿಕ್ಕಮಗಳೂರು ಠಾಣೆಗಳಲ್ಲಿ ಹಲವು ಪ್ರಕರಣ
MUST WATCH
ಹೊಸ ಸೇರ್ಪಡೆ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.