Sagara: ಮನೆಗಳಲ್ಲಿ ಕಳ್ಳತನ; ಗ್ರಾಮೀಣ ಜನರಲ್ಲಿ ಆತಂಕ
Team Udayavani, Dec 16, 2023, 3:39 PM IST
ಸಾಗರ: ಅಡಕೆ ಬೆಳೆಗಾರರು, ಜಮೀನುದಾರರ ಮನೆಗಳಿಗೆ ನುಗ್ಗುತ್ತಿದ್ದ ಕಳ್ಳರು ತಮ್ಮ ಗುರಿಯನ್ನು ಬದಲಿಸುತ್ತಿದ್ದು ಗ್ರಾಮೀಣ ಭಾಗದ ಕೃಷಿ ಕಾರ್ಮಿಕರ ಮನೆಗಳಲ್ಲೇ ಹೆಚ್ಚು ಕಳ್ಳತನ ನಡೆಸುತ್ತಿರುವ ಘಟನೆಗಳು ಸಾಗರದಲ್ಲಿ ಹೆಚ್ಚಾಗುತ್ತಿವೆ.
4-5 ದಿನದ ಹಿಂದೆ ಸಾಗರದ ಬಳಸಗೋಡಿನ ನಾರಾಯಣಪ್ಪ ಎಂಬವರ ಮನೆಯ ಹಂಚು ತೆಗೆದು ಸುಮಾರು 70 ಸಾವಿರ ರೂ. ನಗದು, ಒಂದೂವರೆ ತೊಲ ತೂಕದ ಬಂಗಾರದ ಆಭರಣಗಳ ಕಳ್ಳತನವಾಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ನಾರಾಯಣಪ್ಪ ದಂಪತಿಗಳು ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭ ಈ ಕಳ್ಳತನ ನಡೆದಿದ್ದು, ಸಾಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾರಾಯಣಪ್ಪ ಬಾಳೆ ಕೃಷಿಯಲ್ಲಿ ಬಂದ ಹಣವನ್ನು ಮನೆ ರಿಪೇರಿ ಖರ್ಚಿಗೆ ತೆಗೆದಿರಿಸಿದ್ದರು. ಈ ಉಳಿತಾಯದ ಮೊತ್ತ ಹಾಗೂ ಬಂಗಾರ ಕಳ್ಳತನ ಆಗಿರುವುದರಿಂದ ದಂಪತಿ ಆತಂಕಕ್ಕೊಳಗಾಗಿದ್ದಾರೆ.
ಈಗಾಗಲೇ ಕರ್ಕಿಕೊಪ್ಪ, ಗೀಜಗಾರು, ಮಂಕಳಲೆ, ಶಿರವಾಳ ಮೊದಲಾದೆಡೆ ವಿವಿಧ ಕಳ್ಳತನದ ಪ್ರಕರಣಗಳು ನಡೆದಿವೆ.
ಕರ್ಕಿಕೊಪ್ಪದ ಘಟನೆ ಸಂಬಂಧ ಗ್ರಾಮಸ್ಥರೇ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಕೊಟ್ಟಿದ್ದರೂ ಅವರು ದುರ್ಬಲ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅಪರಾಧಿಗಳನ್ನು ರಕ್ಷಿಸುತ್ತಾರೆ ಎಂದು ಎಡಜಿಗಳೇ ಮನೆ ಭಾಗದ ಸಾರ್ವಜನಿಕರು ಇತ್ತೀಚೆಗೆ ಡಿವೈಎಸ್‌ಪಿ ಕಚೇರಿ ಎದುರು ಪ್ರತಿಭಟನೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CT Ravi Arrest; ಧೂರ್ತ ಸರ್ಕಾರ ನೀಚತನದ ಕೆಲಸ ಮಾಡಿದೆ: ಆರಗ ಜ್ಞಾನೇಂದ್ರ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Sakrebailu: ತಾಂತ್ರಿಕ ದೋಷದಿಂದ ಸುಟ್ಟು ಕರಕಲಾದ ಬಸ್
ಭದ್ರಾವತಿಯ ರೈಸ್ಮಿಲ್ನಲ್ಲಿ ಬಾಯ್ಲರ್ ಸ್ಫೋಟ: ಕಣ್ಮರೆಯಾಗಿದ್ದ ವ್ಯಕ್ತಿಯ ಶವ ಪತ್ತೆ
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.