Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ
Team Udayavani, May 10, 2024, 4:36 PM IST
ತೀರ್ಥಹಳ್ಳಿ : ತಾಲೂಕಿನ ಆರಗ ಗ್ರಾಮಪಂಚಾಯಿತಿ ವ್ಯಾಪ್ತಿಯ ಅರುಣಗಿರಿಯ ಶ್ರೀಲಕ್ಷ್ಮೀವೆಂಕಟರಮಣ ರಥೋತ್ಸವದ ಸಂದರ್ಭದಲ್ಲಿ ಖದೀಮರು ಮಹಿಳೆಯೋರ್ವಳ ಐದು ಪವನ್ ತೂಕದ (ಅಂದಾಜು ಈಗಿನ ಮೌಲ್ಯ 3 ಲಕ್ಷ ರೂ.) ಮಾಂಗಲ್ಯ ಸರವನ್ನು ಲಪಟಾಯಿಸಿದ ಘಟನೆ ನಡೆದಿದೆ.
ಮಧ್ಯಾಹ್ನ ತೇರು ಎಳೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಅಕ್ಷಯ ತೃತೀಯಯದ ದಿನ ಚಿನ್ನ ತೆಗೆದುಕೊಳ್ಳಬೇಕು ಎಂದು ಹೇಳುತ್ತಾರೆ ಆದರೆ ಕಳ್ಳನ ಕೈ ಚಳಕದಿಂದ ಮಹಿಳೆ ಚಿನ್ನ ಕಳೆದುಕೊಂಡು ಆತಂಕಕ್ಕೀಡಾಗಿದ್ದಾರೆ.
ಘಟನಾ ಸ್ಥಳದಲ್ಲಿದ್ದ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಅರುಣಗಿರಿಯಲ್ಲಿ ವೈಭವದ ಜಾತ್ರೆ
ತೀರ್ಥಹಳ್ಳಿ: ಎರಡನೇ ತಿರುಪತಿಯೆಂದೇ ಪ್ರಸಿದ್ಧಿ ಪಡೆದ ತಾಲೂಕಿನ ಆರಗ ಅರುಣಗಿರಿ ಬೆಟ್ಟದ ಶ್ರೀಲಕ್ಷ್ಮಿವೆಂಕಟರಮಣ ಸ್ವಾಮಿ ದೇವರ ರಥೋತ್ಸವವು ಶುಕ್ರವಾರ ಅಕ್ಷತ್ತದಿಗೆಯ ದಿವಸ ಅತ್ಯಂತ ಸಂಭ್ರಮ ಸಡಗರದಿಂದ ನಡೆಯಿತು. ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಎಳ್ಳಮಾವಾಸ್ಯೆಯ ಜಾತ್ರೆ ತಾಲೂಕಿನ ಪ್ರಥಮ ತಾಲೂಕಿನ ಜಾತ್ರಯಾದರೆ ಆರಗ ಅರುಣಗಿರಿಯ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವರ ರಥೋತ್ಸವ ಕೊನೆಯ ಜಾತ್ರಾ ಮಹೋತ್ಸವವಾಗಿರುತ್ತದೆ. ಆರಗ ಸೀಮೆಯ ಹಾಗೂ ತಾಲೂಕಿನ ಸಾವಿರಾರು ಭಕ್ತಾಧಿಗಳು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದರು. ಬಂದಂತಹ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ಹೊಮ್ಮಿಕೊಳ್ಳಲಾಗಿತ್ತು.
ಇದನ್ನೂ ಓದಿ: Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.