ತೀರ್ಥಹಳ್ಳಿ ಎಳ್ಳಮಾವಾಸ್ಯೆಯ ವೈಭವ ಜಾತ್ರೆ


Team Udayavani, Dec 17, 2022, 1:30 PM IST

ತೀರ್ಥಹಳ್ಳಿ ಎಳ್ಳಮಾವಾಸ್ಯೆಯ ವೈಭವ ಜಾತ್ರೆ

ತೀರ್ಥಹಳ್ಳಿ : ತೀರ್ಥಹಳ್ಳಿಯಲ್ಲಿ ಸಾರ್ವಜನಿಕ ಕಾರ್ಯಕ್ರಮವಾಗಿ ಮಾಡುವುದು ಎಂದರೆ ಅದು ದಸರಾ ಮತ್ತು ಎಳ್ಳಮಾವಾಸ್ಯೆ ಜಾತ್ರೆ. ಅದರಲ್ಲೂ ಈ ಜಾತ್ರೆ ತುಂಬಾ ಪ್ರಸಿದ್ಧವಾಗಿದೆ. ಪ್ರತಿವರ್ಷ ಡಿಸೆಂಬರ್ ತಿಂಗಳ ಕೊನೆ ಅಥವಾ ಜನವರಿ ಮೊದಲ ವಾರಗಳಲ್ಲಿ ನಡೆಯುವ ಈ ಪ್ರಸಿದ್ಧ ಜಾತ್ರೆಗೆ ಲಕ್ಷಾಂತರ ಜನರು ಆಗಮಿಸುತ್ತಾರೆ. ಒಟ್ಟು ಐದು ದಿನಗಳ ಕಾಲ ನಡೆಯುವ ಈ ಜಾತ್ರೆ ಸಾರ್ವಜನಿಕವಾಗಿ ತೀರ್ಥಸ್ನಾನ, ರಥೋತ್ಸವ ಮತ್ತು ತೆಪ್ಪೋತ್ಸವಗಳೆಂಬ ಮೂರು ಹಂತಗಳಲ್ಲಿ ಜರುಗುತ್ತದೆ.

ಅಮವಾಸ್ಯೆಗೆ ಎರಡು ದಿನ ಮೊದಲೇ ಆರಂಭವಾಗುವ ಜಾತ್ರೆಯ ಸಾಂಪ್ರದಾಯಿಕ ಆಚರಣಾ ವಿಧಿಗಳು ಮುಗಿಯುವುದು ಐದನೇಯ ದಿನದ ತೆಪ್ಪೋತ್ಸವ ಅಥವಾ ಓಕಳಿಯ ಕಾರ್ಯಕ್ರಮದಲ್ಲಿ. ಜನರಿಗೆ ಜಾತ್ರೆ ಎಂದರೆ ಮೂರು ದಿನಗಳದ್ದಾದರೂ ಕಾರ್ಯಕ್ರಮ ವ್ಯವಸ್ಥಾಪಕರು ಮತ್ತು ಪುರೋಹಿತ ವರ್ಗದವರಿಗೆ  ಐದು ದಿನಗಳು ಕಾರ್ಯಕ್ರಮ ನೆಡೆಯಲಿದೆ.

ಅಂಗಡಿ-ಮುಂಗಟ್ಟುಗಳನ್ನು ನೆಡೆಸುವವರು ಜಾತ್ರೆಗೆ ವಾರದ  ಮೊದಲೇ ಬಂದು ಸಿದ್ಧತೆ ಮಾಡಿಕೊಳ್ಳುತ್ತಾರೆ . ಮಕರ ಸಂಕ್ರಾಂತಿಯವರೆಗೂ ಜಾತ್ರೆಯನ್ನು ಅಂಗಡಿಗಳನ್ನು ಇಟ್ಟುಕೊಂಡು ಸಂಕ್ರಾಂತಿಯ ದಿನ ಚಿಕ್ಕರಥವನ್ನು ಎಳೆಯುವ ಮೂಲಕ ಜಾತ್ರೆಯನ್ನು  ಮುಗಿಸುತ್ತಾರೆ.

ತೀರ್ಥಹಳ್ಳಿಯ ತುಂಗಾ ನದಿಯ ದಡದ ಮೆಲ್ಬಾಗದಲ್ಲಿರುವ ಶ್ರೀ ರಾಮೇಶ್ವರನ ಸನ್ನಿಧಿಯಲ್ಲಿ ಜಾತ್ರೆ ನಡೆಯುತ್ತದೆ . ಬೇರೆ ಬೇರೆ ಊರುಗಳಿಂದ ಜನ ಸಾಗರೋಪ ಸಾಗರವಾಗಿ ತುಂಗಾ ನದಿಯ ಬಳಿ ಸೇರುತ್ತಾರೆ. ತುಂಗೆಯ ಒಡಲಲ್ಲಿ ತನ್ನ ಪಾಪವನ್ನು ಕಳೆದ ಪರಶುರಾಮನ ಕೊಂಡದಲ್ಲಿ ಭಕ್ತಿಯಿಂದ ಮುಳುಗಿ ಏಳುತ್ತಾರೆ. ಜಾತ್ರೆಯ ಸಮಯದಲ್ಲಿ ಭಕ್ತಾದಿಗಳಿಗೆ ಮೂರು ದಿನಗಳ ಪರ್ಯಂತ ಅನ್ನದಾಸೋಹ ಕಾರ್ಯಕ್ರಮ ನೆಡೆಯುತ್ತದೆ.

ತೀರ್ಥಹಳ್ಳಿಯು ಶಿವಮೊಗ್ಗ ನಗರದಿಂದ ಸುಮಾರು 65 ಕಿ.ಮೀ ಗಳಷ್ಟು ದೂರವಿದ್ದು ರಸ್ತೆಯ ಮೂಲಕ ಉತ್ತಮ ಸಂಪರ್ಕ ಹೊಂದಿದೆ. ಹಿಂದೆ ಇದನ್ನು ತೀರ್ಥರಾಜಾಪುರ ಎಂದೂ ಕರೆಯುತ್ತಿದ್ದರು.

ಹಿಂದೂ ಕ್ಯಾಲೆಂಡರಿನ ಪ್ರಕಾರ ಮಾರ್ಗಶಿರ ಮಾಸದ ಅಮವಾಸ್ಯೆಯಂದು ಆಚರಿಸಲಾಗುವ ಎಳ್ಳಮ್ಮಾವಾಸ್ಯೆಯನ್ನು ಅತಿ ವಿಶಿಷ್ಟ ಹಾಗೂ ಸಡಗರದಿಂದ ಆಚರಿಸಲಾಗುತ್ತದೆ.

ತೀರ್ಥಹಳ್ಳಿಯ ಪುರಾಣ ಪ್ರಸಿದ್ದ ದೇವಾಲಯವಾಗಿರುವ ಶ್ರೀ ರಾಮೇಶ್ವರ ದೇವಸ್ಥಾನದಿಂದ ಆರಂಭಗೊಳ್ಳುವ ಜಾತ್ರೆಯು ಸಾಕ್ಷಾತ್ ಹಳ್ಳಿಗಳಲ್ಲಿ ಕಂಡು ಬರುವ ಜಾತ್ರೆಗಳ ಕಳೆಯನ್ನೇ ನೆರೆದವರಿಗೆ ಉಣಬಡಿಸುತ್ತದೆ. ಅಪಾರ ಜನಜಂಗುಳಿ, ಬಾಯಲ್ಲಿ ನೀರೂರಿಸುವ ವಿವಿಧ ಭಕ್ಷ್ಯಗಳು, ಮನರಂಜನಾ ಚಟುವಟಿಕೆಗಳು, ಮಕ್ಕಳಿಗೋಸ್ಕರ ಸಿಗುವ ಆಟಿಕೆಗಳು, ಹಿರಿಯರು ಕೊಳ್ಳಲು ಉಡುಗೆ ತೊಡುಗೆಗಳು ಹೀಗೆ ಹಲವಾರು ಅಂಶಗಳು ಒಟ್ಟಾಗಿ ಸೇರಿ ಜಾತ್ರೆಯ ಕಳೆಯನ್ನು ರಂಗೇರಿಸುತ್ತವೆ.

ಶ್ರೀ ರಾಮೇಶ್ವರ ದೇವಸ್ಥಾನದ ಇತಿಹಾಸ ಮತ್ತು ವಾಸ್ತುಶಿಲ್ಪ:

ತುಂಗಾ ನದಿ ತೀರದ ಪಕ್ಕದಲ್ಲಿ ಎತ್ತರದ ಭೂಮಿಯಲ್ಲಿ ನಿಂತಿರುವ ಈ ದೇವಾಲಯವು ತೀರ್ಥಹಳ್ಳಿ ತಾಲೂಕಿನ ಪ್ರಮುಖ ಮುಜರಾಯಿ ದೇವಾಲಯದಲ್ಲಿ ಒಂದಾಗಿದೆ . ಈ ದೇವಾಲಯದಲ್ಲಿ ಋಷಿ ಪರಶುರಾಮನು ಸ್ಥಾಪಿಸಿದ ಶಿವಲಿಂಗವಿದೆ.  ಗರ್ಭಗುಡಿಯ ಹೊರಗೆ ದುರ್ಗಾ ಮತ್ತು ಗಣಪತಿಯ ವಿಗ್ರಹಗಳಿವೆ. ರಾಮತೀರ್ಥ, ಋಷಿ ಪರಶುರಾಮನು ತನ್ನ ಪರಶುವನ್ನು ತೊಳೆದ ಪವಿತ್ರ ಸ್ಥಳವು ನದಿಯ ದಡದಲ್ಲಿರುವ ದೇವಾಲಯದ ಪಕ್ಕದಲ್ಲಿ ಅಲಂಕರಿಸಲ್ಪಟ್ಟಿದೆ.

ರಾಮತೀರ್ಥದ ಸುತ್ತಲೂ ಅಷ್ಟೇ ಮುಖ್ಯವಾದ ಇತರ ತೀರ್ಥಗಳಿವೆ. ಚಕ್ರತೀರ್ಥ ಶಂಕತೀರ್ಥ ಗದಾತೀರ್ಥ ಮತ್ತು ಪದ್ಮತೀರ್ಥ ರಾಮತೀರ್ಥದ ಸಮೀಪದಲ್ಲಿ “ರಾಮ ಮಂಟಪ” ಎಂಬ ಕಲ್ಲಿನ ಮಂಟಪವಿದೆ ಮತ್ತು ಈ ಮಂಟಪದ ಮುಂಭಾಗದಲ್ಲಿ ಕಲ್ಲಿನ ತಳಪಾಯವಿದೆ. ಪಕ್ಕದ ಜೋಗಿಗುಡ್ಡದಲ್ಲಿ ಒಂದು ಗುಹೆಯನ್ನು ಹೊಂದಿದೆ. ಅಲ್ಲಿ ಜೋಗಿಗಳು ಅಲೆದಾಡುವ ತಪಸ್ವಿಗಳು ಕುಳಿತು ಧ್ಯಾನ ಮಾಡುತ್ತಿದ್ದರು. ಇದು ರಾಮತೀರ್ಥ ಮತ್ತು ಚಕ್ರತೀರ್ಥದ ನಡುವೆ ಇದೆ.

ಮಾತೃ ಹತ್ಯಾ ದೋಷ ಪರಿಹರಿಸಿದ ಕ್ಷೇತ್ರದ ಇತಿಹಾಸ ಏನು ?:

ಈ ಪ್ರದೇಶಕ್ಕೆ ಪರಶುರಾಮ ಕ್ಷೇತ್ರ ಎಂಬ ಹೆಸರಿದೆ. ಈ ಹೆಸರು ಬರಲು ಹಾಗೂ ಎಳ್ಳಮಾಸ್ಯೆಯನ್ನು ಅದ್ದೂರಿಯಾಗಿ ಆಚರಿಸುವ ಹಿಂದೆ ಬಲು ರೋಚಕವಾದ ಕಥೆಯೆ ಇದೆ. ಹಿಂದೆ ಜಮದಗ್ನಿ ಋಷಿಯ ಆದೇಶದಂತೆ ಅವರ ಮಗನಾದ ಪರಶುರಾಮನು ತನ್ನ ಕೊಡಲಿಯಿಂದ ತಾಯಿಯ ರುಂಡವನ್ನು ಕಡಿದು, ನಂತರ ಆ ಕೊಡಲಿಗೆ ತಾಕಿದ ರಕ್ತದ ಕಲೆಯನ್ನು ಅಳಿಸಲೆಂದು ಸಾಕಷ್ಟು ನದಿಗಳಲ್ಲಿ ಶುಚಿಗೊಳಿಸಿದರು ಆದರೂ ಎಳ್ಳಿನ ಗಾತ್ರದಷ್ಟು ಒಂದು ಹನಿ ರಕ್ತದ ಕಲೆಯು ಎಲ್ಲೂ ಹೋಗದಾಯಿತು. ಕೊನೆಗೆ ಈ ಕ್ಷೇತ್ರದಲ್ಲಿ ಹರಿಯುವ ತುಂಗಾ ನದಿಯಲ್ಲಿ ಪರಶುರಾಮನು ತನ್ನ ಕೊಡಲಿಯನ್ನು ಅದ್ದಿದಾಗ ಕೊಡಲಿಗೆ ತಾಕಿದ ಕೊನೆಯ ಒಂದು ಎಳ್ಳಿನ ಆಕಾರದ ಹನಿಯ ರಕ್ತದ ಕಲೆ ಹೊರಟು ಹೋಯಿತು.

ಈ ರೀತಿಯಾಗಿ ಪಾವಿತ್ರ್ಯತೆ ಹೊಂದಿರುವ ತುಂಗಾ ನದಿಯ ತೀರ್ಥಕ್ಕೆ ಸಮನಾಗಿರುವುದರಿಂದ ಇದಕ್ಕೆ ತೀರ್ಥರಾಜಾಪುರ ಎಂಬ ಹೆಸರು ಬಂದಿತು. ತದನಂತರದಲ್ಲಿ ತೀರ್ಥಹಳ್ಳಿ ಎಂದು ಹೆಸರಾಯಿತು. ಈ ಪವಿತ್ರ ತುಂಗಾ ನದಿಯ ರಾಮಕೊಂಡದಲ್ಲಿ ಮಿಂದರೆ ಅಥವಾ ಪುಣ್ಯ ದಿನಗಳಂದು ಸ್ನಾನ ಮಾಡಿದರೆ ಸರ್ವ ಪಾಪ ಕರ್ಮಗಳು ಅಳಿಸಿ ಹೋಗುತ್ತವೆ ಎಂಬ ಅಚಲವಾದ ನಂಬಿಕೆ ಇಂದಿಗೂ ಚಾಲ್ತಿಯಲ್ಲಿದೆ. ಆದ್ದರಿಂದ ಎಳ್ಳಮ್ಮಾವಾಸ್ಯೆಯ ದಿನದಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಈ ಕ್ಷೇತ್ರಕ್ಕೆ ಭೇಟಿ ನೀಡಿ ತುಂಗೆಯಲ್ಲಿ ಮಿಂದು ಪುನಿತರಾಗುತ್ತಾರೆ.

-ವರದಿ :ಶ್ರೀಕಾಂತ್ ವಿ ನಾಯಕ್

ಟಾಪ್ ನ್ಯೂಸ್

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

Perth test: Jasprit Bumrah’s bowling style in doubt: What is the controversy?

Perth test: ಜಸ್ಪ್ರೀತ್‌ ಬುಮ್ರಾ ಬೌಲಿಂಗ್‌ ಶೈಲಿ ಅನುಮಾನ: ಏನಿದು ವಿವಾದ?

Perth Test: Jaiswal scores century; record partnership with Rahul

Perth Test: ಜೈಸ್ವಾಲ್‌ ಶತಕದಾಟ; ರಾಹುಲ್‌ ಜತೆ ದಾಖಲೆಯ ಜೊತೆಯಾಟ

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು

6-1

Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?

5–COPD

COPD: ಕ್ರೋನಿಕ್‌ ಒಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ (ಸಿಒಪಿಡಿ)

Maryade Prashne Review

Maryade Prashne Review: ಮಧ್ಯಮ ವರ್ಗದ ಮರ್ಯಾದೆ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Sagara: ಟ್ರಾಫಿಕ್‌ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Shimoga: ಅರಣ್ಯ ಇಲಾಖೆ ಜತೆ ಸೇರಿ ಕಾಡಾನೆಗಳನ್ನು ಓಡಿಸಿದ ಜನ

Sagara: ತರಗತಿ ಕೊಠಡಿ ಅವ್ಯವಸ್ಥೆ; ಎಲ್‌ಬಿ ಕಾಲೇಜಿನ ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆ

Sagara: ತರಗತಿ ಕೊಠಡಿಯಲ್ಲಿ ಅವ್ಯವಸ್ಥೆ… ಕಾಲೇಜು ವಿದ್ಯಾರ್ಥಿಗಳಿಂದ ದಿಢೀರ್ ಪ್ರತಿಭಟನೆ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಘಾತ

Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

MUST WATCH

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

ಹೊಸ ಸೇರ್ಪಡೆ

9-someshwara

Someshwara: ಸಮುದ್ರಕ್ಕೆ ಹಾರಿದ ಯುವತಿಯ ರಕ್ಷಣೆ

3

Kannada: ವೀರ ಕನ್ನಡಿಗ: ತನು ಕನ್ನಡ, ಮನ(ನೆ) ಕನ್ನಡ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

8-madikeri

Madikeri:ರೈಲ್ವೆ ಕಂಬಿ ಬೇಲಿಯನ್ನೇ ಮುರಿದ ಕಾಡಾನೆಗಳು:ನಿತ್ಯ ಉಪಟಳದಿಂದ ಬೇಸತ್ತ ಗ್ರಾಮಸ್ಥರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.