ಕುಡಿಯುವ ನೀರಿಗೆ ಸೇರುತ್ತಿದೆ ಕೋಳಿ ತ್ಯಾಜ್ಯ: ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನತೆ
Team Udayavani, Sep 3, 2021, 2:39 PM IST
ತೀರ್ಥಹಳ್ಳಿ: ಕೋವಿಡ್ ಸಾಂಕ್ರಾಮಿಕ ರೋಗಗಳ ಭಯದ ನಡುವೆಯೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ವಾರ್ಡ್ ನಂಬರ್ ಹದಿನಾಲ್ಕರ ಕುರುವಳ್ಳಿ ಬಾದಾಳಗುಂಡಿ ಹತ್ತಿರ ಹಳ್ಳದಲ್ಲಿ ಕೋಳಿ ಅಂಗಡಿಯವರೊಬ್ಬರು ಪ್ರತಿದಿನ ಮುಂಜಾನೆ ರಾಶಿ-ರಾಶಿ ಕೋಳಿ ತ್ಯಾಜ್ಯವನ್ನು ತಂದು ಹಳ್ಳಕ್ಕೆ ಎಸೆಯುವುದು ಕಂಡು ಬರುತ್ತಿದ್ದು, ಈ ಕೋಳಿ ತ್ಯಾಜ್ಯದ ನೀರು ಕೊಳೆತು ನೇರವಾಗಿ ಬಾದಾಳಗುಂಡಿ ಮೂಲಕ ತುಂಗಾನದಿ ಸೇರುತ್ತಿದೆ. ಈ ಕೋಳಿ ತ್ಯಾಜ್ಯವನ್ನು ತಿನ್ನಲು ನಾಯಿ, ಹದ್ದು, ನರಿ, ಕಾಗೆಗಳು ಮುಗಿ ಬೀಳುತ್ತಿವೆ.
ಈ ಬಾದಾಳಗುಂಡಿ ನೀರು ಪುತ್ತಿಗೆ ಮಠದ ಎದುರು ಇರುವ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿಯ ಕುಡಿಯುವ ನೀರಿನ ಪಂಪ್‌ಹೌಸ್ ಬಳಿ ಶೇಖರಣೆಯಾಗಿ ತುಂಗಾ ನದಿ ಸೇರುತ್ತಿದೆ. ಈ ನೀರು ಸೇರುವ ಪಕ್ಕದಲ್ಲಿ ವಿಶೇಷವಾಗಿ ಅರ್ಚಕವೃಂದದವರಿಂದ ಪ್ರತಿನಿತ್ಯ ಶ್ರದ್ಧಾ ಭಕ್ತಿಯಿಂದ ತುಂಗಾ ನದಿಗೆ ತುಂಗಾರತಿ ನಡೆಯುತ್ತಿದ್ದು ಪ್ರತಿ ದಿನ ತಹಶೀಲ್ದಾರರು ಭಾಗವಹಿಸುತ್ತಾರೆ ಮತ್ತು ತ್ಯಾಜ್ಯ ಎಸೆದ ಪ್ರದೇಶದಲ್ಲಿನ ಬಾದಾಳಗುಂಡಿ ಹಳ್ಳ ದುರ್ವಾಸನೆ ಬೀರುತ್ತಿದೆ. ಇದೇ ಬಾದಾಳಗುಂಡಿಯಿಂದ ತುಂಗಾ ನದಿ ಸೇರಿದ ನೀರನ್ನು ಗ್ರಾಮ ಪಂಚಾಯಿತಿಯವರು ಮೇಲಿನ ಕುರುವಳ್ಳಿಯಲ್ಲಿ ಟ್ಯಾಂಕ್ ಒಂದರಲ್ಲಿ ಶೇಖರಣೆ ಮಾಡಿ ನೀರನ್ನು ಶುದ್ಧೀಕರಣ ಮಾಡದೆ ಮೇಲಿನ ಕುರುವಳ್ಳಿ, ಗ್ರಾಮದ ಜನರಿಗೆ ಕುಡಿಯುವ ನೀರು ಎಂದು ಮನೆ ಮನೆಗೆ ಬಿಡುತ್ತಿದ್ದಾರೆ.
ಇದನ್ನೂ ಓದಿ:ಬೆಳಗಾವಿ ಪಾಲಿಕೆಯ ಮೇಲೆ ಯಾರ ಹಿಡಿತವೂ ಇಲ್ಲ: ಬಿಜೆಪಿ ವಿರುದ್ಧ ಹೆಬ್ಬಾಳ್ಕರ್ ಟೀಕೆ
ಈ ನೀರು ಕುಡಿಯುವುದರಿಂದ ಸಾಂಕ್ರಾಮಿಕ ರೋಗ ಹರಡುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಈ ದಿಸೆಯಲ್ಲಿ ಸಂಬಂಧ ಪಟ್ಟ ಅಧಿಕಾರಿಗಳು ನಿದ್ದೆ ಮಂಪರುವಿನಿಂದ ಎದ್ದು ಯಾರು ಈ ತ್ಯಾಜ್ಯವನ್ನು ಹಾಕುವುದು ಎಂದು ಕಂಡು ಹಿಡಿದು ತಕ್ಷಣ ಕೋಳಿ ಅಂಗಡಿಯವರನ್ನು ಕರೆಯಿಸಿ ಕೋಳಿ ತ್ಯಾಜ್ಯವನ್ನು ಹಳ್ಳಕ್ಕೆ ಹಾಕುವುದಕ್ಕೆ ಕಡಿವಾಣ ಹಾಕಲಿ. ಇಲ್ಲದೆ ಹೋದಲ್ಲಿ ತುಂಗಾ ನದಿಯ ನೀರು ಮಲಿನವಾಗುವುದರ ಜೊತೆಗೆ ಈ ಕಲುಷಿತ ನೀರು ಕುಡಿದು ರೋಗರುಜಿನ ಬರುವುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Holehonnur: ಎರಡು ಪ್ರತ್ಯೇಕ ರಸ್ತೆ ಅಪಘಾತ
Shivamogga: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪಿಡಿಓ ಈಶ್ವರಪ್ಪ
Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Delhi: ನಕಲಿ ಕೇಸ್ ನಲ್ಲಿ ಸಿಎಂ ಅತಿಶಿ ಬಂಧನಕ್ಕೆ ಇ.ಡಿ, ಸಿಬಿಐಗೆ ಬಿಜೆಪಿ ಆದೇಶ: ಕೇಜ್ರಿ!
Suspension: ಸಿ.ಟಿ. ರವಿ ಪ್ರಕರಣ; ಖಾನಾಪುರ ಸಿಪಿಐ ಅಮಾನತು
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
CT Ravi:ಪ್ರಕರಣ ಮುಗಿದ ಬಳಿಕ ಧರ್ಮಸ್ಥಳಕ್ಕೂ,ಸವದತ್ತಿ ಯಲ್ಲಮ್ಮನ ದೇವಸ್ಥಾನಕ್ಕೂ ಹೋಗುತ್ತೇನೆ
Mudhol: ಮರಕ್ಕೆ ಡಿಕ್ಕಿ ಹೊಡೆದು ಕಾರು ಪಲ್ಟಿ; ಓರ್ವ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.