ಈ ದೇಶದ ಮೊದಲ ಭಯೋತ್ಪಾದಕ ನಾಥುರಾಮ್ ಗೋಡ್ಸೆ: ಕಿಮ್ಮನೆ ರತ್ನಾಕರ್
ರೋಹಿತ್ ಚಕ್ರತೀರ್ಥ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗೋ ಬ್ಯಾಕ್ ಚಳುವಳಿ
Team Udayavani, Dec 28, 2022, 9:54 PM IST
ತೀರ್ಥಹಳ್ಳಿ : ಈ ದೇಶದ ಮೊದಲ ಭಯೋತ್ಪಾದಕ ಯಾರು ಎಂದರೆ ಅದು ನಾಥುರಾಮ್ ಗೋಡ್ಸೆ ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದರು.
ಪಟ್ಟಣದ ಕುವೆಂಪು ವೃತ್ತದ ಬಳಿ ಕುವೆಂಪು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ನೆಡೆಸಿದ ಪ್ರತಿಭಟನಾಕಾರರ ಪರವಾಗಿ ಮಾತನಾಡಿದ ಅವರು, ಬಿಜೆಪಿಯವರು ಯೋಚನೆ ಮಾಡುವುದು ಒಂದೇ, ಅದೇನು ಅಂದರೆ ಒಂದು ಧರ್ಮ, ಒಂದು ಜಾತಿ, ಒಂದು ಭಾಷೆಯ ಆಲೋಚನೆ ಏನಿದೆ ಅದನ್ನು ಕಿತ್ತು ಬಿಸಾಕಬೇಕು.ಈ ದೇಶದಲ್ಲಿ ಇವರು ಹೀಗೆ ಜಾತಿ ಧರ್ಮದ ಮೇಲೆ ಆಡಳಿತ ಮಾಡುತ್ತ ಹೋದರೆ 31 ರಾಷ್ಟ್ರಗಳು ಈ ದೇಶದಲ್ಲೇ ಆಗುತ್ತೆ. ಆಡಳಿತ ಪಕ್ಷದವರು ಎಲ್ಲಾ ಜಾತಿ ಧರ್ಮದವರನ್ನ ಒಟ್ಟಾಗಿ ತೆಗೆದುಕೊಂಡು ಹೋಗಬೇಕು. ಅಂತರಗದಲ್ಲಿ ಹೇಗಾದರೂ ಇರಲಿ ಬಹಿರಂಗ ಹೇಳಿಕೆ ಕೊಡುವಾಗ ಆದರೂ ಸರಿ ಇರಬೇಕು ಎಂದರು.
ಬಿಜೆಪಿ ಪಕ್ಷದವರಿಗೆ ಗಾಂಧಿ ಮೇಲೂ ಕರುಣೆ ಇಲ್ಲ, ವಲ್ಲಭಾಯಿ ಪಟೇಲ್ ಮೇಲೂ ಕರುಣೆ ಇಲ್ಲ, ದೇಶಕ್ಕಾಗಿ ಹೊರಟ ಮಾಡಿದವರ ಮೇಲೂ ಕರುಣೆ ಇಲ್ಲ ಅವರೇದ್ದೆನಿದ್ದರೂ ಮೂಲ ಸಿದ್ದಾಂತದ ಮನಸ್ಮೃತಿ ಅನುಷ್ಠಾನ ಮಾಡಬೇಕು ಎನ್ನುವ ಯೋಚನೆ ಎಂದರು.
ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಆಗಮಿಸಿದ್ದ ರೋಹಿತ್ ಚಕ್ರತೀರ್ಥ ವಿರುದ್ಧ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಗೋ ಬ್ಯಾಕ್ ಚಳುವಳಿ ಮೂಲಕ ಪ್ರತಿಭಟನೆ ನೆಡೆಸಲಾಯಿತು. ರಾಷ್ಟ್ರಕವಿಯೊಬ್ಬರಿಗೆ ಅವಮಾನ ಮಾಡಿದ್ದಾರೆ. ಅಂತಹ ವ್ಯಕ್ತಿಯನ್ನು ತೀರ್ಥಹಳ್ಳಿಗೆ ಕರೆಸಿ ಕಾರ್ಯಕ್ರಮ ಆಯೋಜನೆ ಮಾಡಿರುವ ವ್ಯಕ್ತಿಗಳಿಗೆ ಬುದ್ದಿ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಡಗೋಲು ವಿಚಾರ ಮಂಥನ ವೇದಿಕೆ ಎಂಬ ಹೆಸರಿನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದಾರೆ. ಆದರೆ ಇಲ್ಲಿಯವರೆಗೆ ಆಯೋಜಕರು ಯಾರು ಎಂದು ಯಾರಿಗೂ ತಿಳಿದಿಲ್ಲ. ರೋಹಿತ್ ಚಕ್ರತೀರ್ಥ ಪರವಾಗಿ ಆಯೋಜಕರು ಗಟ್ಟಿನಿಲುವು ತಳೆದಿದ್ದಾರೆ ಅದು ಸರಿಯಲ್ಲ ಎಂದರು.
ಪ್ರತಿಭಟನಾಕಾರರು ವಶಕ್ಕೆ
ಕುವೆಂಪು ವೃತದಲ್ಲಿ ಪ್ರತಿಭಟನೆ ನೆಡೆಸಿ ನಂತರ ಕಡಗೋಲು ವಿಚಾರ ಮಂಥನ ವೇದಿಕೆ ಕಾರ್ಯಕ್ರಮದ ಬಳಿ ಹೋಗಿ ಪ್ರತಿಭಟನೆ ನೆಡೆಸುವುದಾಗಿ ಹೇಳುತ್ತಿದ್ದಂತೆ ಡಿವೈಎಸ್ಪಿ ಗಜಾನನ ವಾಮನ ಸುತರ ರವರ ಮಾರ್ಗದರ್ಶನದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
MUST WATCH
ಹೊಸ ಸೇರ್ಪಡೆ
Kerala govt: ಶಬರಿಮಲೆ ವರ್ಚುವಲ್ ಕ್ಯೂ ಬುಕ್ಕಿಂಗ್ ಮಿತಿ ಹೆಚ್ಚಳ
Uttar Pradesh: ಝಾನ್ಸಿ ಅಗ್ನಿ ಅವಘಡ: ಗುರುತೇ ಸಿಗದಂತೆ ಕರಕಲಾದ ಹಸುಳೆಗಳು
G20 Leaders Summit: ಪ್ರಧಾನಿ ಮೋದಿ ನೈಜೀರಿಯಾ, ಬ್ರೆಜಿಲ್, ಗಯಾನಾ ಪ್ರವಾಸ ಶುರು
Chhattisgarh: ನೀರಿನ ಬಾವೀಲಿ ಪೆಟ್ರೋಲ್: ಸಂಗ್ರಹಕ್ಕೆ ಮುಗಿಬಿದ್ದ ಜನ
Manipur: ಸಿಎಂ ಬಿರೇನ್ ಸಿಂಗ್ ಮನೆಗೆ ನುಗ್ಗಲು ಯತ್ನಿಸಿದ ಗುಂಪು; ಹೆಚ್ಚಿದ ಹಿಂಸಾಚಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.