ಸಾಗರ: ಮೂರು ಕಣ್ಣಿನ ಅಡಿಕೆ ಪತ್ತೆ
Team Udayavani, Jan 15, 2022, 12:25 PM IST
ಸಾಗರ: ಹಸಿ ಅಡಿಕೆಯನ್ನು ಸುಲಿದಾಗ ಒಂದು ಕಣ್ಣು ಕಾಣಿಸುವುದು ಪ್ರಕೃತಿ ನಿಯಮ. ಉರುಟಾದ ಅಡಿಕೆಯ ಚಪ್ಪಟೆಯ ಭಾಗದಲ್ಲಿ ಬಿಳಿ ಮೃದು ಭಾಗದಲ್ಲಿ ಬುಗುರಿಯ ರೂಪದ ಬಿಳಿ ಕಣ್ಣಿರುತ್ತದೆ. ಪ್ರಕೃತಿಯ ವೈಚಿತ್ರದ ಆಟದಲ್ಲಿ ಇಂತಹ ಅಡಿಕೆ ಬೆಳೆಯಲ್ಲಿ ಕೆಲವೊಮ್ಮೆ ಎರಡು ಸಯಾಮಿಗಳು ಸೃಷ್ಟಿಯಾಗಿ ಎರಡು ಕಣ್ಣುಗಳಿರುವುದನ್ನೂ ಕಾಣುತ್ತೇವೆ. ಅದಕ್ಕೆ ಬೆನವ ಅಥವಾ ಬೆನಮ ಎನ್ನುತ್ತಾರೆ.
ಹಿಂದೆಲ್ಲ ಅಡಿಕೆ ಸುಲಿಯುವವರಿಗೆ ಬೆನವ ಬಂದರೆ ಅದನ್ನು ಅಡಿಕೆ ಸುಲಿಯುತ್ತಿರುವ ಇತರರಿಗೆ ತೋರಿಸಿದರೆ ಅವರು ಆಗ ತಮ್ಮ ಕೈಯಲ್ಲಿ ಇರುವ ಅಷ್ಟೂ ಸುಲಿದ ಅಡಿಕೆಯನ್ನು ಕೊಡಬೇಕಿತ್ತು. ಈ ಕೆಲಸವನ್ನು ಅಲ್ಲೇ ಆಟವಾಡುವ ಮಕ್ಕಳ ಕೈಯಲ್ಲಿ ಮಾಡಿಸುತ್ತಿದ್ದರು.
ಪ್ರಕೃತಿ ತೀರಾ ವೈಚಿತ್ರ್ಯ ಪ್ರದರ್ಶಿಸಿದಾಗ ಮೂರು ಕಣ್ಣಿನ ಅಡಿಕೆ ಕಂಡುಬರುತ್ತದೆ! ತಾಲೂಕಿನ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶೆಟ್ಟಿಸರದ ಎಸ್.ಪಿ.ಲಕ್ಷ್ಮೀನಾರಾಯಣಭಟ್ಟರ ಮನೆಯಲ್ಲಿ ಹಸಿ ಅಡಿಕೆ ಸುಲಿದಾಗ ಈ ಮೂರು ಕಣ್ಣಿನ ಬೆನವ ಕಾಣಿಸಿದೆ. ಸುಲಿಯುವಾಗಲೇ ಹೋಳಾಗಿಬಿಡುವ ಅಪಾಯವಿರುವ ಈ ಬೆನವ ಏನೂ ಘಾಸಿಯಾಗದೆ ಸುಲಿತವಾಗಿರುವುದು ಕೂಡ ಅಪರೂಪವೇ ಸರಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragodu: ಸ್ಲೀಪರ್ ಸೆಲ್ ರಚನೆಗಾಗಿ ಭಾರತಕ್ಕೆ ಬಂದಿದ್ದ ಭಯೋತ್ಪಾದಕ ಶಾಬ್‌ಶೇಖ್
Ayodhya: ರಾಮಮಂದಿರಕ್ಕೆ 1 ವರ್ಷ: ಜ.11ರಿಂದ 3 ದಿನ ಪೂಜೆ
ಸಿ.ಟಿ.ರವಿ ನಕಲಿ ಎನ್‌ಕೌಂಟರ್‌ಗೆ ಸರಕಾರದ ಹುನ್ನಾರ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Pope Francis; ಗಾಜಾಪಟ್ಟಿ ಮೇಲೆ ನಡೆದದ್ದು ಯುದ್ಧವಲ್ಲ, ಕ್ರೌರ್ಯ
Horoscope: ಈ ರಾಶಿಯವರಿಗೆ ಧೈರ್ಯ ಮತ್ತು ಸಾಹಸ ಪ್ರವೃತ್ತಿಯಿಂದ ಕಾರ್ಯಸಿದ್ಧಿ ಆಗಲಿದೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.