ತುಂಗಾರತಿಗೆ 3 ತಿಂಗಳಿನಿಂದ ತಡೆ!

ಒಂದೂವರೆ ವರ್ಷ ಹಿಂದೆ ನಡೆದಿತ್ತು ತುಂಗಾರತಿ ಕಾರ್ಯಕ್ರಮ

Team Udayavani, Apr 8, 2022, 5:24 PM IST

aarati

ತೀರ್ಥಹಳ್ಳಿ: ಪುರೋಹಿತರ ನಡುವೆ ಉಂಟಾದ ಗೊಂದಲದಿಂದ ಪಟ್ಟಣದ ತುಂಗಾ ತೀರದಲ್ಲಿ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆ ಆದೇಶದಂತೆ ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದ್ದ ತುಂಗಾರತಿಗೆ 3 ತಿಂಗಳಿಂದ ತಡೆ ಉಂಟಾಗಿದೆ.

ಪ್ರಧಾನಿ ನರೇಂದ್ರ ಮೋದಿ ಕಾಶಿಯ ವಿಶ್ವನಾಥ ಕ್ಷೇತ್ರದಲ್ಲಿ ಗಂಗಾ ಆರತಿ ಮಾಡಿದ್ದ ಹಾಗೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಮಲೆನಾಡಿನ ತೀರ್ಥಹಳ್ಳಿಯ ಕುರುವಳ್ಳಿಯ ಪುತ್ತಿಗೆ ಮಠದ ಸಮೀಪವಿರುವ ತುಂಗಾ ನದಿಯ ದಡದಲ್ಲಿ ಭಾರತದ ಅನೇಕ ಕಡೆಗಳಲ್ಲಿ ಸೈಕಲ್ಲಿನಲ್ಲಿ ಪ್ರಯಾಣ ಮಾಡಿ ಪಾಂಡಿತ್ಯ ಪಡೆದ ಬೊಮ್ಮಸಯ್ಯನ ಅಗ್ರಹಾರದ ಕಾಶಿ ಶೇಷಾದ್ರಿ ದೀಕ್ಷಿತ್‌ ಅವರ ನೇತೃತ್ವದಲ್ಲಿ ತುಂಗಾ ಆರತಿಯನ್ನು ವಿಶೇಷ ರೀತಿಯಲ್ಲಿ ವಾದ್ಯ ಘೋಷ, ಬಾಗಿನ ಅರ್ಪಣೆ ಹಾಗೂ ತುಂಗಾರತಿಗೆ ಬಂದ ಸಾರ್ವಜನಿಕರಿಂದ ಆರತಿ ಬೆಳಗುವುದರ ಮೂಲಕ ಪ್ರಾರಂಭ ಮಾಡಲಾಗಿತ್ತು.

ಇದಕ್ಕೆ ತಾಲೂಕಿನ ಜನಪ್ರತಿನಿ ಧಿಗಳಿಂದ ಹಾಗೂ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ಕೂಡ ವ್ಯಕ್ತವಾಯಿತು. ದಕ್ಷಿಣಾಯಣ ಪುಣ್ಯ ಕಾಲ, ಕರ್ಕಾಟಕ ಸಂಕ್ರಮಣದ ದಿನದಂದು ತೀರ್ಥಹಳ್ಳಿಯ ಪವಿತ್ರ ತುಂಗಾ ನದಿಗೆ ಕಾಶಿ ದೀಕ್ಷಿತ್‌ ಅವರ ಅರ್ಚಕ ನೇತೃತ್ವದಲ್ಲಿ ತುಂಗಾರತಿ ಮಾಡಲಾಗಿತ್ತು. ತೀರ್ಥಹಳ್ಳಿ ತಹಶೀಲ್ದಾರ್‌, ಪುತ್ತಿಗೆ ಮಠ, ಶೃಂಗೇರಿ ಮಠ ಹಾಗೂ ಆಸ್ತಿಕರ ಸಹಯೋಗದೊಂದಿಗೆ ತುಂಗಾ ನದಿಗೆ ತುಂಗಾರತಿಯು ಪ್ರಾರಂಭವಾಗಿ ತುಂಗಾರತಿಯನ್ನು ವರ್ಷ ಪೂರ್ತಿ ಮುಂದುವರಿಸಿಕೊಂಡು ಹೋಗಲಿದ್ದಾರೆ ಎನ್ನುವ ಮಾತು ಸಾರ್ವಜನಿಕವಾಗಿ ಕೇಳಿ ಬಂದಿತ್ತು.

ಪುತ್ತಿಗೆ ಮಠದ ಸಮೀಪವಿರುವ ತುಂಗಾ ದಂಡೆಯಲ್ಲಿ, ಪ್ರತಿ ದಿನವೂ ತುಂಗಾರತಿಯು ಮುಂದುವರಿಯಿತು. ತುಂಗಾರತಿಗೆ ತಹಶೀಲ್ದಾರ್‌ ಡಾ| ಶ್ರೀಪಾದ್‌ ಅವರ ವಿಶೇಷ ಆಸಕ್ತಿ ಇತ್ತು. ತಿಂಗಳಿಗೆ ಓರ್ವ ಅರ್ಚಕರ ನೇತೃತ್ವದಲ್ಲಿ ತುಂಗಾರತಿಯು ಮುಂದುವರಿಯಲಿದ್ದು, ಊರಿನ ಜನರ, ಆಸ್ತಿಕರ ಸಹಕಾರವನ್ನು ಅರ್ಚಕ ವೃಂದದವರನ್ನು ಡಾ| ಶ್ರೀಪಾದ್‌ ಅವರು ಕೋರಿದ್ದರು. ಆದರೆ ತಾಲೂಕು ಆಡಳಿತ ಮೊದಲಿಗೆ ಇದರ ಬಗ್ಗೆ ಹೆಚ್ಚಿನ ಗಮನ ವಹಿಸಿ ನಂತರ ಇದರ ಬಗ್ಗೆ ಗಮನ ವಹಿಸದ ಕಾರಣ ಸತತವಾಗಿ 6 -8 ತಿಂಗಳ ಕಾಲ ಅತ್ಯಂತ ವಿಜೃಂಭಣೆಯಿಂದ ನಡೆದುಕೊಂಡು ಬಂದಿದ್ದ ತುಂಗಾರತಿ ಕಾರ್ಯಕ್ರಮಕ್ಕೆ ಸತತ 3 ತಿಂಗಳಿನಿಂದ ಬ್ರೇಕ್‌ ಬಿದ್ದಿದೆ.

ಕಾಶಿ ದೀಕ್ಷಿತ್‌ ಅವರು ಈ ತುಂಗಾ ಆರತಿಯನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಡುತ್ತಿದ್ದರು. ಆದರೆ ನಂತರದಲ್ಲಿ ತುಂಗಾರತಿ ಮಾಡಲು ತಮ್ಮ ಸಮಯ ಬಂದಾಗ ಕೆಲವೊಂದು ಅರ್ಚಕರು ಇದರ ಬಗ್ಗೆ ಆಸಕ್ತಿ ವಹಿಸಲಿಲ್ಲವೋ ಅಥವಾ ಇದಕ್ಕೆ ತಾಲೂಕು ಆಡಳಿತ ಗಮನ ವಹಿಸದೇ ನಿರ್ಲಕ್ಷ್ಯ ವಹಿಸಿತೋ ಗೊತ್ತಿಲ್ಲ. ಒಟ್ಟಿನಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದ ತೀರ್ಥಹಳ್ಳಿಯ ತುಂಗಾ ಆರತಿ ಕಾರ್ಯಕ್ರಮಕ್ಕೆ ಬ್ರೇಕ್‌ ಬಿದ್ದಿದೆ. ಮತ್ತೂಮ್ಮೆ ತೀರ್ಥಹಳ್ಳಿಯಲ್ಲಿ ತುಂಗಾ ಆರತಿ ಕಾರ್ಯಕ್ರಮ ಮುಂದುವರಿಯಲಿ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

-ಶ್ರೀಕಾಂತ್ ವಿ. ನಾಯಕ್

ಟಾಪ್ ನ್ಯೂಸ್

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Kollywood: ಬಹಿರಂಗ ಪತ್ರ ಬರೆದು ಧನುಷ್‌ ಮೇಲೆ ರೇಗಾಡಿದ ನಟಿ ನಯನತಾರಾ; ಆಗಿರುವುದೇನು?

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

Nara Ramamurthy: ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಹೋದರ ನಾರಾ ರಾಮಮೂರ್ತಿ ನಾಯ್ಡು ನಿಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

SMG-Shikaripura

Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!

raghav

Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್‌ ನಿಂದ ಸುಳ್ಳು ಆರೋಪ: ರಾಘವೇಂದ್ರ

9

Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Congress is taking revenge by forming SIT: Araga Jnanendra

Shimoga: ಎಸ್ಐಟಿ ರಚನೆ ಮೂಲಕ ಕಾಂಗ್ರೆಸ್ ಹಗೆ ತೀರಿಸಿಕೊಳ್ಳುತ್ತಿದೆ: ಆರಗ ಜ್ಞಾನೇಂದ್ರ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

Anandapura: ಸಾಲದ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

BGT: Another shock for Team India; After Virat and Rahul, another batsman is injured

BGT: ಟೀಂ ಇಂಡಿಯಾಗೆ ಮತ್ತೆ ಆಘಾತ; ವಿರಾಟ್‌, ರಾಹುಲ್‌ ಬಳಿಕ ಮತ್ತೊಬ್ಬ ಬ್ಯಾಟರ್‌ ಗೆ ಗಾಯ

1-ragaaa

PM Modi ಅವರು ಜೋ ಬೈಡೆನ್ ಅವರಂತೆ ನೆನಪಿನ ಶಕ್ತಿ ಕಳೆದುಕೊಳ್ಳುತ್ತಿದ್ದಾರೆ: ರಾಹುಲ್ ಗಾಂಧಿ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

Resign: ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್ ಸಿಂಗ್ ಬಾದಲ್ ರಾಜೀನಾಮೆ

DKShi

Maharashtra; ನಮ್ಮ ಮೈತ್ರಿ ಕೂಟ ಗೆದ್ದು ಮಹಾರಾಷ್ಟ್ರ ಉಳಿಸಲಿದೆ: ಡಿ.ಕೆ. ಶಿವಕುಮಾರ್

Mangaluru: Kumaraswamy will turn whenever, however: Jameer Ahmed

Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್‌ ಅಹಮದ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.