ಶತಮಾನಗಳ ಹಿಂದಿನ ತಂತ್ರಜ್ಞಾನ ಬಿಚ್ಚಿಟ್ಟ ಟಿಪ್ಪು ರಾಕೆಟ್
Team Udayavani, Oct 2, 2018, 6:00 AM IST
ಶಿವಮೊಗ್ಗ: ಇಂದಿನ ಆಧುನಿಕ ತಂತ್ರಜ್ಞಾನದ ಯುದ್ಧ ಸಾಮಗ್ರಿಗಳು ನೂರಾರು ವರ್ಷಗಳ ಹಿಂದೆಯೇ ಬಳಕೆಯಲ್ಲಿತ್ತು ಎಂಬುದಕ್ಕೆ ಸಾಕ್ಷಿ ದೊರಕಿದೆ. ಕೆಲ ತಿಂಗಳ ಹಿಂದೆ ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಬಿದನೂರಿನಲ್ಲಿ (ನಗರ) ಸಿಕ್ಕ ಟಿಪ್ಪು ಸುಲ್ತಾನ ಕಾಲದ್ದು ಎನ್ನಲಾದ ರಾಕೆಟ್‌ಗಳನ್ನು ಸಂಶೋಧನೆಗೆ ಒಳಪಡಿಸಲಾಗಿದ್ದು ಅಚ್ಚರಿಯ ವಿಚಾರಗಳು ಬಹಿರಂಗಗೊಂಡಿವೆ.
ಹೊಸನಗರ ತಾಲೂಕಿನ ತೋಟವೊಂದರಲ್ಲಿ ಬಾವಿಯ ಮಣ್ಣು ತೆಗೆಯುತ್ತಿದ್ದಾಗ ಈ ರಾಕೆಟ್ ಪತ್ತೆಯಾಗಿತ್ತು. ನಂತರ ಉತVನನ ನಡೆಸಿದಾಗ 1700 ರಾಕೆಟ್‌ಗಳು ದೊರಕಿದ್ದವು. 34 ಸೆಂಮೀ ಉದ್ದ, 5 ಸೆಂ.ಮೀ. ಅಗಲವಿರುವ ಈ ರಾಕೆಟ್ ಈವರೆಗೆ ಪತ್ತೆಯಾಗಿರುವ ರಾಕೆಟ್‌ಗಳಲ್ಲೇ ದೊಡ್ಡ ಗಾತ್ರದ್ದಾಗಿದೆ. ಈ ಪ್ರದೇಶದಲ್ಲಿ ರಾಕೆಟ್ ಹಾಗೂ ಆಯುಧಗಳ ಹಿಡಿಕೆ ದೊರೆತಿದ್ದರಿಂದ ಟಿಪ್ಪು ಆಳ್ವಿಕೆಯ ಕಾಲದಲ್ಲಿ ಇಲ್ಲಿ ಆಯುಧ ಶಾಲೆ, ಅಥವಾ ಆಯುಧ ಉಗ್ರಾಣ ಇದ್ದಿರಬಹುದೆನ್ನಲಾಗಿದೆ. ಇಲ್ಲಿ ದೊರೆತಿರುವ ರಾಕೆಟ್‌ಗಳನ್ನು ಶಿವಪ್ಪ ನಾಯಕ ಅರಮನೆ ಸರಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿತ್ತು. ಈ ರಾಕೆಟ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.
ಪರೀಕ್ಷೆಯಿಂದ ಹೊರ ಬಂದ ಅಂಶ: ಎಮಿಷನ್ ಸ್ಪೆಕ್ಟರ್ ಸ್ಕೋಪಿ ಮತ್ತು ವೆಟ್ ಕೆಮಸ್ಟ್ರಿ ಅನಾಲಿಸಿಸ್ ಮಾಡಲಾಗಿದ್ದು, ರಾಕೆಟ್‌ನಲ್ಲಿ ಕಡಿಮೆ ಪ್ರಮಾಣದ ಶೇ. 0.02 ರಿಂದ 0.35ರಷ್ಟು ಮಾತ್ರ ಕಾರ್ಬನ್ ಅಂಶ ಇದೆ ಎಂದು ತಿಳಿದುಬಂದಿದೆ. ಆ ಕಾಲದಲ್ಲಿ ಇಷ್ಟು ಕಡಿಮೆ ಪ್ರಮಾಣದ ಕಾರ್ಬನ್ ಬಳಕೆ ಮಾಡಿರುವುದು ಇಂದಿಗೂ ವಿಜ್ಞಾನಿಗಳಿಗೆ ಸವಾಲಾಗಿದೆ. ಅಂದರೆ ಕಾರ್ಬನ್ ಬಳಕೆ ಕಡಿಮೆ ಇದ್ದಷ್ಟು ಕಬ್ಬಿಣ ಮೃದುವಾಗಿ ರೋಲಿಂಗ್ ಮಾಡಲು ಅನುಕೂಲವಾಗಲಿದೆ. ಇದರಲ್ಲಿ ಶೇ. 0.1ರಷ್ಟು ಫಾಸ್ಫರಸ್ ಅಂಶ ಇದ್ದು ಇದು ಕಬ್ಬಿಣ ತುಕ್ಕು ಹಿಡಿಯುವುದನ್ನು ತಡೆಗಟ್ಟಲಿದೆ.
ಸಿಲಿಂಡರ್ ಆಕಾರದ ರಾಕೆಟ್‌ನಲ್ಲಿ ಎರಡು ಕಡೆ ಮುಚ್ಚಳವಿದ್ದು, ಇವುಗಳನ್ನೂ ಲೋಹದಿಂದಲೇ ಮಾಡಲಾಗಿದೆ. ಒಂದು ಮುಚ್ಚಳಕ್ಕೆ ರಂಧ್ರವಿದ್ದು, ಇದರಲ್ಲಿ ಬತ್ತಿ ಇದೆ. ರಾಕೆಟ್‌ಗಳ ಅಳತೆಯ 1/3 ಅಂದರೆ ರಾಕೆಟ್ 22 ಸೆಂ.ಮೀ. ಇದ್ದರೆ 7 ಸೆಂ.ಮೀ ಬತ್ತಿ ಇದೆ. ಬತ್ತಿಯ ಎಳೆಗಳನ್ನು 20 ಮೈಕ್ರಾನ್ ಕಾಟನ್ ಅಥವಾ ಸಿಲ್ಕ್ ಬಳಸಿ ತಯಾರಿಸಲಾಗಿದೆ. ರಾಕೆಟ್ ಮದ್ದಿನಲ್ಲಿ ಶೇ.12ರಷ್ಟು ಕಾರ್ಬನ್, ಶೇ.9ರಷ್ಟು ಸಲ್ಪರ್ ಮತ್ತು ಶೇ.80 ನೈಟ್ರೇಟ್ ಕಂಡುಬಂದಿದೆ. ಹೂತುಹೋಗಿದ್ದ ರಾಕೆಟ್‌ಗಳು ಮೂಲ ರೂಪ ಕಳೆದುಕೊಂಡಿರಲಿಲ್ಲ ಎಂದು ಪರೀಕ್ಷಕರು ತಿಳಿಸಿದ್ದಾರೆ.
ಹೈದರ್ ರಾಕೆಟ್‌ಗಳ ಜನಕ?
ಈಗಿನ ಬಿದನೂರು (ನಗರ) ಹೈದರಾಲಿ ಅವರ ಅಳ್ವಿಕೆಯ ಕಾಲದಲ್ಲಿ ಹೈದರ್ ನಗರವಾಗಿತ್ತು. ಕ್ರಿ.ಶ. 1768ರಲ್ಲಿ ಮಂಗಳೂರು ಕೋಟೆಯು ಬ್ರಿಟಿಷರ ವಶದಲ್ಲಿದ್ದಾಗ ಹೈದರಾಲಿ ಬಿದನೂರಿಂದ ಇಪ್ಪತ್ತು ಸಾವಿರ ಸೈನಿಕರೊಡಗೂಡಿ ರಾಕೆಟ್ ಪ್ರಯೋಗ ಮಾಡಿದ್ದ ಎಂಬ ಉಲ್ಲೇಖವಿದೆ. ಬಳಿಕ ಟಿಪ್ಪುವಿನ ಮರಣಾ ನಂತರ ಬ್ರಿಟೀಷರು ಶ್ರೀರಂಗಪಟ್ಟಣದಲ್ಲಿರುವ ರಾಕೆಟ್‌ಗಳನ್ನು ಕ್ರಿ.ಶ. 1800ರಲ್ಲಿ ಇಂಗ್ಲೆಂಡ್‌ನ ವುಲ್‌ವಿಚ್ ಪ್ರಯೋಗಾಲಯಕ್ಕೆ ತೆಗೆದುಕೊಂಡು ಹೋಗಿದ್ದರು. ವಿಲಿಯಮ್ ಕಾಂಗ್ರಿವ್ ಮೊದಲ ಬಾರಿಗೆ 1804ರಲ್ಲಿ ರಾಕೆಟ್‌ಗಳನ್ನು ಉತ್ಪಾದಿಸಿ 1805ರಲ್ಲಿ ಫ್ರಾನ್ಸ್‌ನ ಬೊಲೊನೆಯ ಬಂದರಿನಲ್ಲಿ ಉಡಾಯಿಸಲು ಬಳಸಿದರು. ಈ ತಂತ್ರಜ್ಞಾನದಿಂದ ಇಂಗ್ಲೆಂಡ್ ಫ್ರಾನ್ಸ್‌ನು° ಸುಲಭವಾಗಿ ಸೋಲಿಸಿತ್ತು. ನಂತರ ರಾಕೆಟ್ ಬಳಕೆ ಹೆಚ್ಚಾಯಿತು ಎನ್ನಲಾಗಿದೆ.
ಈ ರಾಕೆಟ್‌ಗಳಿಗೆ ಬಳಸುವ ಕಬ್ಬಿಣ ಮೃದುವಾಗಿರುವುದರಿಂದ ಇಲ್ಲಿನ ಕಂಬಾರರು ರಾಕೆಟ್‌ಗಳ ತಯಾರಿಕೆಯಲ್ಲಿ ನಿಪುಣರಾಗಿದ್ದರು ಎಂಬುದು ತಿಳಿಯಲಿದೆ. ಶಿವಪ್ಪ ನಾಯಕ ಅರಮನೆಯಲ್ಲಿ ಮುಂದಿನ ದಿನಗಳಲ್ಲಿ ಬಿದನೂರಿನ ರಾಕೆಟ್‌ಗಳ ಗ್ಯಾಲರಿಯನ್ನು ತುರ್ತಾಗಿ ಆರಂಭಿಸಲಾಗುವುದು, ಅನ್ವೇಷಣೆ ಕೈಗೊಳ್ಳಲಾಗುವುದು.
– ಟಿ. ವೆಂಕಟೇಶ್, ಆಯುಕ್ತರು, ಪುರಾತತ್ವ ಇಲಾಖೆ
– ಶರತ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayanagara: ಅನುದಾನ ಇಲ್ಲದೇ, ಜನರು ಅಭಿವೃದ್ಧಿ ಕೇಳಿದ್ರೆ ಏನು ಮಾಡಲಿ: ಕಾಂಗ್ರೆಸ್ ಶಾಸಕ
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Grant Fight: ಕರ್ನಾಟಕಕ್ಕೆ ಅನ್ಯಾಯವಾದಾಗ ಎಚ್‌ಡಿಡಿ, ಎಚ್‌ಡಿಕೆ ಮಾತಾಡಿದ್ದಾರಾ?: ಸಿಎಂ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Belagavi: ಹೊಸಬರು, ಹಳಬರನ್ನೂ ಬಿಜೆಪಿಯವರು ಟಚ್ ಮಾಡ್ತಿದ್ದಾರೆ: ಶಾಸಕ ಬಾಬಾಸಾಹೇಬ ಪಾಟೀಲ್
MUST WATCH
ಹೊಸ ಸೇರ್ಪಡೆ
BJP: ರಾಜ್ಯಗಳಿಂದಲೇ ಮಾಲಿನ್ಯ ಹೆಚ್ಚಳ: ದಿಲ್ಲಿ ಸಿಎಂ ಆತಿಶಿ ಆರೋಪ
Maharashtra Elections: ವಿಪಕ್ಷ ನಾಯಕ ರಾಹುಲ್ ಛೋಟಾ ಪೋಪಟ್: ಬಿಜೆಪಿ ವಕ್ತಾರ ಲೇವಡಿ
Rahul Gandhi: ಮೋದಿ, ಅದಾನಿ, ಅಂಬಾನಿ ಒಟ್ಟಾದರೆ ಸುರಕ್ಷಿತ, ಇದೇ ಅರ್ಥ
Sri Lanka: ಪ್ರಧಾನ ಮಂತ್ರಿಯಾಗಿ ಹರಿಣಿ ಅಮರಸೂರ್ಯ ಪದಗ್ರಹಣ
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.